newsfirstkannada.com

ಸಮಸ್ಯೆ ಪರಿಹಾರಕ್ಕೆಂದು ಬಂದ ಮಹಿಳೆಯ ಮನೆಗೆ ಕನ್ನ ಹಾಕಿದ ನಿಂಬೆ ಹಣ್ಣು ಜ್ಯೋತಿಷಿ.. ಹಣ, ಚಿನ್ನ ಕದ್ದು ಪರಾರಿ

Share :

26-07-2023

    ಮಹಿಳೆಗೆ ಪಂಗನಾಮ ಹಾಕಿದ ನಿಂಬೆಹಣ್ಣು ಜ್ಯೋತಿಷಿ

    ಮೊದಲಿಗೆ ಹಣ ಕದ್ದ, ಬಳಿಕ ಚಿನ್ನ ಕದ್ದು ಜ್ಯೋತಿಷಿ ಜೂಟ್​​

    ಸಮಸ್ಯೆ ಎಂದು ಬಂದ ಮಹಿಳೆಯ ಮನೆಯಲ್ಲೀಗ ಮತ್ತೊಂದು ಸಮಸ್ಯೆ

ನಿಂಬೆಹಣ್ಣು ಜ್ಯೋತಿಷಿಯೊಬ್ಬ ಮನೆ ಕಳ್ಳತನ ಮಾಡುತ್ತಿದ್ದ ಘಟನೆಯೊಂದು ಬಟಾ ಬಯಲಾಗಿದೆ. ಹೊಸಪೇಟೆಯ ಸುರೇಶ್‌ ಪಾಟೀಲ್‌ ಎಂಬಾತ ಈ ಕೃತ್ಯವೆಸಗುತ್ತಿದ್ದು, ಕೊನೆಗೂ ಆತನ ಮುಖವಾಡ ಕಳಚಿದೆ.

ಜ್ಯೋತಿಷಿ ಸುರೇಶ್‌ ಪಾಟೀಲ್‌ ತನ್ನಲ್ಲಿಗೆ ಬಂದ ಇಂದಿರಾ ಎಂಬಾಕೆಯ ಮನೆಯಿಂದ ಹಣ  ದೋಚಿಸಿದ್ದಾನೆ. ಬಳಿಕ ಅಮವಾಸ್ಯೆಯ ದಿನದಂದು ಪ್ಲಾನ್​​ ಹೆಣೆದು ಬಂಗಾರ ಕದ್ದಿದ್ದಾನೆ.

ಮಗಳಿಗಾಗಿ ಜ್ಯೋತಿಷಿ ಮೊರೆ ಹೋದ ತಾಯಿ

ಅಂದಹಾಗೆಯೇ ಇಂದಿರಾ ತನ್ನ ಮಗಳನ್ನ ಗೋವಿಂದೇಗೌಡ ಎಂಬಾತನಿಗೆ ಮದ್ವೆ ಮಾಡಿಸಿದ್ದಳು. ಹೀಗಾಗಿ ಮಗಳು ಪದೇ ಪದೇ ತವರು ಮನೆಗೆ ಬರುತ್ತಿದ್ದಳು. ಇದಕ್ಕೆ ಪರಿಹಾರಕ್ಕೆಂದು ಇಂದಿರಾ ಜ್ಯೋತಿಷಿ ಮೊರೆ ಹೋಗಿದ್ದಳು.

ಅಮಾವಾಸ್ಯೆ ದಿನ ಪ್ಲಾನ್​ ಹೆಣೆದ

ಕೊನೆಗೊಂದು ದಿನ ಇಂದಿರಾ ಅವರ ತಾಯಿ ಜ್ಯೋತಿಷಿ ಸುರೇಶ್‌ ಪಾಟೀಲ್‌ನನ್ನು ಮನೆಗೆ ಕರೆಸಿಕೊಂಡಿದ್ದಳು. ಕೊನೆಗೆ ನಿಮ್ಮ ಮಗಳನ್ನ ಸರಿ ಮಾಡುತ್ತೀನಿ ಎಂದು ಹೇಳಿ ಅಮಾವಾಸ್ಯೆ ದಿನ ಜ್ಯೋತಿಷಿ ಚೆನ್ನಾಗಿ ಪ್ಲಾನ್ ​ಹೆಣೆದಿದ್ದ.

ನಿಂಬೆಹಣ್ಣು ಜ್ಯೋತಿಷಿ

ನಂತರ ದೇವಸ್ಥಾನದಿಂದ ಬಂದ ಬಳಿಕ ನಿಮ್ಮ ಮನೆಯ ಬೀರು ನೋಡುವಂತೆ ಹೇಳಿದ್ದ. ಆದರೆ ಮನೆಯವರು ದೇವಸ್ಥಾನಕ್ಕೆ ಹೋಗಿ ಬಂದ ಬಳಿ ಬೀರುವಿನಲ್ಲಿ ಇಟ್ಟಿದ್ದ ದುಡ್ಡು ಎಗರಿಸಿ ನಿಂಬೆಹಣ್ಣು ಇಡುತ್ತಿದ್ದ. ಹೀಗೆ ಜ್ಯೋತಿಷಿ ಮತ್ತೊಂದು ಅಮವಾಸೆಗೂ ಕೂಡ ದೇವಸ್ಥಾನಕ್ಕೆ ಹೋಗಲು ಹೇಳಿದ್ದ. ಮತ್ತೆ ವಾಪಾಸ್‌ ಬಂದಾಗ 5 ಲಕ್ಷ ಮೌಲ್ಯದ ಮಾಂಗಲ್ಯ ಸರ ಸೇರಿ ಚಿನ್ನಾಭರಣ ಕೂಡ ಕಳುವಾಗಿರೋದು ಬೆಳಕಿಗೆ ಬಂದಿತು.

ಬೀಗರು ಮಾಟ ಮಾಡಿಸಿದ್ದಾರೆಂದು ಬೊಗಳೆ ಬಿಟ್ಟ

ಈ ವಿಚಾರ ಮನೆಯ ಒಡತಿ ಇಂದಿರಾಗೆ ತಿಳಿದಂತೆ ಜ್ಯೋತಿಷಿ ಸುರೇಶ್‌ ಪಾಟೀಲ್‌ ನಿಮ್ಮ ಬೀಗರು ಮಾಟ ಮಾಡಿಸಿದ್ದಾರೆ.  ನನಗೆ 65 ದಿನ ಟೈಮ್​ ಕೊಡಿ ಎಂದಿದ್ದ. 65 ದಿನದಲ್ಲಿ ಬೀಗರ ಮನೆಯಿಂದ ಚಿನ್ನಾಭರಣ ವಾಪಾಸ್‌ ತರಿಸುತ್ತೇನೆಂದು ಹೇಳಿದ್ದ.

ಸ್ವಿಚ್ ಆಫ್‌ ಮಾಡಿ ಜ್ಯೋತಿಷಿ ಪರಾರಿ

ಇಷ್ಟಾದ ನಂತರ ಸುರೇಶ್‌ ಪಾಟೀಲ್‌ ಮೊಬೈಲ್‌ ಸ್ವಿಚ್ ಆಫ್‌ ಮಾಡಿ ಪರಾರಿಯಾಗಿದ್ದಾನೆ. ಕೊನೆಗೆ ಅನುಮಾನ ಬಂದ ಮಹಿಳೆ ಇಂದಿರಾ ಯಲಹಂಕ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಮಸ್ಯೆ ಪರಿಹಾರಕ್ಕೆಂದು ಬಂದ ಮಹಿಳೆಯ ಮನೆಗೆ ಕನ್ನ ಹಾಕಿದ ನಿಂಬೆ ಹಣ್ಣು ಜ್ಯೋತಿಷಿ.. ಹಣ, ಚಿನ್ನ ಕದ್ದು ಪರಾರಿ

https://newsfirstlive.com/wp-content/uploads/2023/07/Suresh.jpg

Load More