/newsfirstlive-kannada/media/post_attachments/wp-content/uploads/2023/11/Auto-rikshow.jpg)
ಬೆಂಗಳೂರು ಸ್ಟಾರ್ಟ್ಅಪ್​ ಕಂಪನಿಗಳ ತಾಣ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್​ ವಾಹನಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಬೃಹತ್​ ನಗರವಾದ ಬೆಂಗಳೂರಿನಲ್ಲೂ ಸಹ ಎಲೆಕ್ಟ್ರಿಕ್​ ವಾಹನಗಳ ಬಳಕೆ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ವ್ಯಕ್ತಿಯೊಬ್ಬರು ತಮ್ಮ ಎಲೆಕ್ಟ್ರಿಕ್​ ವಾಹನ ದೋಷದಿಂದ ಕಂಗೆಟ್ಟು ರಿಕ್ಷಾದ ಹಿಂದೆ ಸಾಲುಗಳನ್ನು ಬರೆದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗಿದೆ.
ಎಲೆಕ್ಟ್ರಿಕ್​ ರಿಕ್ಷಾದ ಹಿಂದೆ ಕನ್ನಡದಲ್ಲಿ ‘ಕಚಡ ಗಾಡಿ ತೆಗೋಬೇಡಿ’ ಎಂದು ಬರೆದುಕೊಂಡಿದ್ದಾರೆ. ಆಶಿಶ್​ ಕೃಪಾಕರ್​ ಎಂಬ ಎಕ್ಸ್​ ಬಳಕೆದರ ತಮ್ಮ ಎಕ್ಸ್​ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ಕೆಟ್ಟ ಉತ್ಪನ್ನವನ್ನು ಖರೀದಿಸಬೇಡಿ ಎಂದು ಇತರರಿಗೆ ಹೇಳಲು ಎಂತಹ ನವೀನ ಮಾರ್ಗ’ ಎಂದು ಅಡಿಬರಹ ಬರೆದಿದ್ದಾರೆ. ಮಾತ್ರವಲ್ಲದೆ ನಮ್ಮ ಬೆಂಗಳೂರು ಎಂದು ಹ್ಯಾಟ್​​ ಟ್ಯಾಗ್​ ನಮೂದಿಸಿದ್ದಾರೆ.
ಸದ್ಯ ಸಾಮಾಜಿಕ ಜಾಲತಣದಲ್ಲಿ ಈ ವಿಚಾರ ವೈರಲ್​ ಆಗಿದೆ. ಸುಮಾರು 44 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ ಮತ್ತು 900ಕ್ಕೂ ಅಧಿಕ ಲೈಕ್ಸ್ ಈ ಪೋಸ್ಟ್​​ ಪಡೆದಿದೆ.
ಸದ್ಯ ನಗರ ಪ್ರದೇಶದಲ್ಲಿ ಎಲೆಕ್ಟ್ರಿಕ್​ ವಾಹನಗಳ ಬಳಕೆ ಜೋರಾಗಿದೆ. ಮತ್ತೊಂದೆಡೆ ಹಲವಾರು ಕಂಪನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿವೆ. ಅದರೆ ಕೆಲವೊಂದು ವಾಹನಗಳು ಕೊಟ್ಟ ಹಣಕ್ಕೆ ತಕ್ಕಂತೆ ಹೆಚ್ಚು ಬಾಳಿಕೆ ಬಾರದೆ ಬಹಳಕೆದಾರರಿಗೆ ಸಂಕಷ್ಟತಂದೊಡ್ಡುತ್ತವೆ. ಮತ್ತೆ ಕೆಲವು ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಅನೇಕ ಘಟನೆಗಳು ಸಿಲಿಕಾನ್​ ಸಿಟಿಯಲ್ಲಿ ಕಂಡುಬಂದಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us