/newsfirstlive-kannada/media/post_attachments/wp-content/uploads/2023/11/Yusuf.jpg)
ಈತ ಮಹಾನ್ ಖರ್ತನಾಕ್. ದೊಡ್ಡ ದೊಡ್ಡವರನ್ನ ನಂಬಿಸಿ ಕಲರ್ ಕಲರ್​ ಕಾಗೆ ಹಾರಿಸ್ತಿದ್ದ ಭೂಪ. ಬಣ್ಣ ಬಣ್ಣದ ಸ್ಟೋರಿ ಹೇಳ್ತಿದ್ದ ಈ ನಯವಂಚಕ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಏನದು ಈ ಮಹಾಶಯನ ಕಥೆ ಅಂತೀರಾ? ಈ ಸ್ಟೋರಿ ಓದಿ.
ಕಲರ್ ಕಲರ್ ಕಥೆ ಕಟ್ಟಿ ಯಾಮಾರಿಸ್ತಿದ್ದ ಮಹಾನ್ ವಂಚಕ!
ಹೀಗೆ ಕೈ ಹಿಂದೆ ಕೊಟ್ಕೊಂಡು. ಮಾಸ್ಕ್​ ಹಾಕ್ಕೊಂಡು. ಸ್ಟೈಲಾಗಿ ಪೋಸ್​ ಕೊಡ್ತಿರುವ ಈ ಮಹಾನುಭಾವನ ಹೆಸರು ಯೂಸಫ್ ಅಲಿಯಾಸ್ ಯೂಸಫ್​ ಸುಬ್ಬಯ್ಯಕಟ್ಟೆ. ಈತನನ್ನ ನಂಬಿದವರ ಹಣೆ ಮೇಲೆ ಎರಡು ವೈಟೂ ಒಂದ್​ ರೆಡ್ಡೂ ಬಿಳೋದು ಪಕ್ಕಾ. ಉದ್ಯಮಿಗಳನ್ನ ಪರಿಚಯ ಮಾಡಿಕೊಳ್ತಿದ್ದ ಈ ಭೂಪ ಅವಶ್ಯಕತೆಗೆ ತಕ್ಕಂತೆ ವೃತ್ತಿ ಹೇಳಿ ಯಾಮಾರಿಸ್ತಿದ್ದ.
ವಂಚನೆ ನಂ 1: ಫಾರ್ಚುನರ್​ ಕಾರಿನ ಕಥೆ!
ಮೋಸ ಹೋದವರು : ನನ್ನ ಕಾರ್​ ಸೇಲ್ ಮಾಡ್ಬೇಕಿತ್ತು..
ಯೂಸುಫ್ : ನನಗೊಬ್ಬ ಫ್ರೆಂಡ್​ ಗೊತ್ತು.. ನೋಡಿ, ಅವನ ಕಾರ್​ ಫೋಟೋಸ್​ನ.. ಅವ್ನು ಸೇಲ್ ಮಾಡ್ತಿದ್ದಾನೆ.
ಮೋಸ ಹೋದವರು : ಹುಂ ಚೆನ್ನಾಗಿದೆ.. ನಾನೇ ತಗೋತೀನಿ ಬಿಡಿ..
ಯೂಸುಫ್ : ಅವ್ರಿಗೆ ದುಡ್ಡಿನ ಅವಶ್ಯಕತೆ ಇದೆ.. ಮುಂಚೇನೆ 5ಲಕ್ಷ ಅಡ್ವಾನ್ಸ್ ಕೊಟ್ರೆ ಒಳ್ಳೆದು..
ಹೀಗೆ 5 ಲಕ್ಷ ಹಣವನ್ನ ಅಕೌಂಟ್​​​ಗೆ ಹಾಕಿಸ್ಕೊಂಡು ಮಹಾ ಮೋಸ ಮಾಡಿದ್ದಾನೆ..
ವಂಚನೆ ನಂ 2: ಜಿಎಸ್​ಟಿ ಪುರಾಣ!
ಮೋಸ ಹೋದವರು : ನಾನ್​ ಜಿಎಸ್​​ಟಿ ಕಟ್ಬೇಕಿತ್ತು..
ಯೂಸುಫ್ : ನನಗೆ ಜಿಎಸ್​ಟಿ ಕಮಿಷನರ್​ ಪರಿಚಯವಿದ್ದಾನೆ. ನಿಮ್ಮ ಜಿಎಸ್​ಟಿ ಬಿಲ್​​ ಐವತ್ತು ಪರ್ಸೆಂಟ್ ಕಮ್ಮಿ ಮಾಡಿಸ್ತೀನಿ.. ಅಡ್ವಾನ್ಸ್ 15 ಲಕ್ಷ ಪೇ ಮಾಡ್ಬೇಕು..
ಮೋಸ ಹೋದವರು : ಸರಿ ಸಾರ್.. ಥ್ಯಾಂಕೂ ಯೂ.. ನಿಮ್ಮಿಂದ ತುಂಬಾ ಹೆಲ್ಪ್​ ಆಯ್ತು..
ಹೀಗೆ ಹಣ ಹಾಕಿಸಿಕೊಂಡು ಯೂಸೂಫ್​ ಪಂಗನಾಮ ಇಟ್ಟಿದ್ದಾನೆ..
ವಂಚನೆ ನಂ 3: ಬ್ಯಾಂಕ್​ ಕರ್ಮಕಾಂಡ!
ಮೋಸ ಹೋದವರು : ಬ್ಯಾಂಕ್ ಲೋನ್ ಬೇಕಿತ್ತು.. ನಿಮಗೇನಾದ್ರೂ ಇದರ ಬಗ್ಗೆ ಮಾಹಿತಿ ಇದ್ಯಾ?
ಯೂಸುಫ್ : ಅಯ್ಯೋ.. ಅದಕ್ಕೆ ಏಕೆ ಟೆನ್ಷನ್​.. ನನಗೆ ಬ್ಯಾಂಕ್​ ಮ್ಯಾನೇಜರ್​ ಪರಿಚಯವಿದ್ದಾರೆ..
ಹೀಗೆ ಹೇಳಿದ ಮಹಾನ್​ ಖದೀಮ.. ಲೋನ್ ಮಾಡಿಸಿಕೊಡ್ತಿನಿ ಅಂತಾ ಹೇಳಿ ಸೈನ್ ಮಾಡಿಸಿಕೊಂಡು ಎರಡು ಕೋಟಿ ನಲವತ್ತು ಲಕ್ಷ ಲೋನ್​ಗೆ ಶ್ಯೂರಿಟಿ ಮಾಡಿಸಿ ಮೋಸ ಮಾಡಿದ್ದಾನೆ.
ಅದಷ್ಟೇ ಅಲ್ಲ, ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಹಾಗೂ ಬಿಜೆಪಿ ಹೈಕಮಾಂಡ್​ ಪರಿಚಯವಿದ್ದಾರೆ. ನಿಮಗೆ ರಾಜಾಕೀಯ ಕೆಲಸ ಮಾಡಿಕೊಡ್ತೀನಿ ಅಂತಾ ಹೇಳಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.. ಸದ್ಯ ಮಲ್ಲೇಶ್ವರ ಪೊಲೀಸರು ನಯವಂಚಕ ಯೂಸುಫ್​ನನ್ನ ಅರೆಸ್ಟ್ ಮಾಡಿದ್ದು, ಈ ಕೇಸ್​ ವಿಚಾರಣೆಯನ್ನ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ..
ಅದೇನೆ ಇರ್ಲಿ, ಕದ್ದು ಹಾಲು ಕುಡಿಯೋ ಬೆಕ್ಕು ಒಂದಲ್ಲಾ ಒಂದು ದಿನ ಸಿಕ್ಕಿ ಬೀಳಲೇ ಬೇಕು. ಅದೇ ರೀತಿ ಕಲರ್ ಕಲರ್​ ಕಾಗೆ ಹಾರಿಸಿ ಲೈಫ್​ ಜಿಂಗಲಾಲಾ ಅನ್ಕೊಂಡಿದ್ದ ಮಹಾಷಯ ಕೊನೆಗೂ ಲಾಕ್ ಹಾಕಿದ್ದು, ಪೊಲೀಸರು ಕಂಬಿ ಹಿಂದೆ ಈತನಿಗೆ ತಕ್ಕ ಪಾಠ ಮಾಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us