newsfirstkannada.com

ಬೆಂಗಳೂರು ಬಂದ್​ಗೆ ತತ್ತರಿಸಿದ ಸಿಲಿಕಾನ್​ ಸಿಟಿ ಜನ; ರಸ್ತೆಗಿಳಿದ ಕ್ಯಾಬ್, ಆಟೋ ಮೇಲೆ ಕಲ್ಲು ಎಸೆತ!

Share :

11-09-2023

    37 ಸಂಘಟನೆಗಳಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

    ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸರ್ಕಾರದ ವಿರುದ್ಧ ಧಿಕ್ಕಾರ

    ನಗರದ ಅಷ್ಟದಿಕ್ಕುಗಳಿಂದಲೂ ಫ್ರೀಡಂಪಾರ್ಕ್​ಗೆ ಲಗ್ಗೆ..!

ಬೆಂಗಳೂರು: ಇಂದು ಬೆಂಗಳೂರು ಬಂದ್​ಗೆ ಭಾಗಶಃ ಸಿಲಿಕಾನ್​​​ ಸಿಟಿ ತತ್ತರಿಸಿತ್ತು. ಜನಸಾಮಾನ್ಯರು ಅಕ್ಷರಶಃ ಪರದಾಡಿದ್ರು. ಅದರಲ್ಲೂ ದೂರದ ಊರಿನಿಂದ ಬಂದ ಪ್ರಯಾಣಿಕರು ಆಟೋ, ಟ್ಯಾಕ್ಸಿ ಸಿಗದೇ ನಿಲ್ದಾಣದಲ್ಲೇ ಉಳಿದು ಸಂಕಷ್ಟ ಅನುಭವಿಸಿದ್ರು. ಈ ನಡುವೆ ಪ್ರತಿಭಟನೆ ಹೆಸರಲ್ಲಿ ಕೆಲವು ಚಾಲಕರು ದರ್ಪ ಮೆರೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯ್ತು.

ಮೊಟ್ಟೆ ಹೊಡೆದಿರೋದು, ತಳ್ಳಾಡಿ ಹಲ್ಲೆ ಮಾಡಿರೋದು, ಬೈಕ್​ ಪುಡಿ ಮಾಡಿರೋದು, ಆಟೋದವನ ಮೇಲೆ ಹಲ್ಲೆಗೆ ಯತ್ನ. ಇದು ಇವತ್ತಿನ ಬೆಂಗಳೂರು ಬಂದ್​ ಎಫೆಕ್ಟ್​. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಬಸ್​, ಆಟೋ, ಟ್ಯಾಕ್ಸಿ ಸೇರಿದಂತೆ ಖಾಸಗಿ ವಾಹನಗಳ ಚಾಲಕರು ಇಂದು ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ಹೋರಾಟ ನಡೆಸಿದ್ರು. ಬೆಂಗಳೂರಿನಾದ್ಯಂತ ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೃಹತ್ ಱಲಿ

ಮೊದಲು ಸಂಗೊಳ್ಳಿ ರಾಯಣ್ಣ ಸರ್ಕಲ್​ನತ್ತ 32 ಸಂಘಟನೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಚಾಲಕರು ಪ್ರತಿಭಟನೆ ಮೆರವಣಿಗೆ ನಡೆಸಿದ್ರು. ನಗರದ ಎಲ್ಲಾ‌ ಭಾಗಗಳಿಂದ ಬಂದ ಆಟೋ, ಟ್ಯಾಕ್ಸಿ ಹಾಗೂ ಖಾಸಗಿ ವಾಹನ ಚಾಲಕರು ಸಂಗೊಳ್ಳಿ ರಾಯಣ್ಣ ಸರ್ಕಲ್​ನಲ್ಲಿ ಸೇರಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಚಾಲಕರು ಭಾಗಿಯಾಗಿದ್ದು, ರಸ್ತೆ ಮಧ್ಯೆ ಕುಳಿತುಕೊಂಡು ಆಕ್ರೋಶ ಹೊರಹಾಕಿದ್ರು. ಈ ವೇಳೆ ಕಿಲೋ ಮೀಟರ್​ಗಟ್ಟಲೆ ಟ್ರಾಫಿಕ್​ ಜಾಮ್​ ಆಗಿದ್ದು, ಕಾಲೇಜ್​ ಹಾಗೂ ಆಫೀಸ್​ಗಳಿಗೆ ಸಮಯಕ್ಕೆ ತೆರಳಲಾಗದೆ ಸಾರ್ವಜನಿಕರು ಪರದಾಡುವಂತ ಪರಿಸ್ಥಿತಿ ಕೂಡ ಎದುರಾಗಿತ್ತು.

ಇನ್ನು ಖಾಸಗಿ ಸಾರಿಗೆ ಒಕ್ಕೂಟಗಳ ಸದಸ್ಯರು ಬೃಹತ್ ಪ್ರತಿಭಟನಾ ಱಲಿ ಮೂಲಕ ಸಂಗೊಳ್ಳಿ ರಾಯಣ್ಣ ಸರ್ಕಲ್​ನಿಂದ ಫ್ರೀಡಂಪಾರ್ಕ್ ತಲುಪಿದ್ರು. ದಾರಿಯುದ್ಧಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬಂದ ಪ್ರತಿಭಟನಾಕಾರರು, ಫ್ರೀಡಂಪಾರ್ಕ್​​ನಲ್ಲಿ ಜಮಾಯಿಸಿ ಧರಣಿ ನಡೆಸಿದ್ರು. ಫ್ರೀಡಂಪಾರ್ಕ್​​ನಲ್ಲಿ ಮೂಲೆ ಮೂಲೆಗಳಿಂದ ಬಂದ ಸಾವಿರಾರು ಮಂದಿ ಚಾಲಕರು, ಮಾಲೀಕರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ರು. ಸ್ಥಳದಲ್ಲಿ ವೇದಿಕೆ ಮೇಲೆ 37 ಸಂಘಟನೆಗಳು ಅಧ್ಯಕ್ಷರಿಗೆ ಆಸೀನರಾಗಿದ್ದು, ಸರ್ಕಾರ ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿದ್ರು.

ಱಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸಲು ಆಗ್ರಹಿಸಿ ಶ್ರದ್ಧಾಂಜಲಿ

ಱಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆಯೂ ಪ್ರತಿಭಟನಾನಿರತ ಚಾಲಕರು ಆಗ್ರಹಿಸಿ ಶ್ರದ್ಧಾಂಜಲಿ ಸಲ್ಲಿಸಿದ ಪ್ರಸಂಗ ನಡೆದಿದೆ. ಸಂಗೊಳ್ಳಿ ರಾಯಣ್ಣ ಸರ್ಕಲ್​ನಿಂದ ಫ್ರೀಡಂಪಾರ್ಕ್​ವರೆಗೂ ಪ್ರತಿಭಟನಾ ಱಲಿ ಸಾಗ್ತಿದ್ದ ವೇಳೆ ಪ್ರತಿಭಟನಾಕಾರರು ಬೈಕ್, ಟ್ಯಾಕ್ಸಿಗಳಿಗೆ ಚಪ್ಪಲಿ ಸಿಕ್ಕಿಸಿ, ಶ್ರದ್ಧಾಂಜಲಿ ಸಲ್ಲಿಸಿ ಆಕ್ರೋಶ ಹೊರಹಾಕಿದ್ರು. ಸರ್ಕಾರ ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಡಿಮ್ಯಾಂಡ್ ಮಾಡಿದ್ರು.

ಮುಷ್ಕರವಿದ್ದರೂ ರಸ್ತೆಗಿಳಿದ ಕ್ಯಾಬ್ ಮೇಲೆ ಕಲ್ಲು ತೂರಾಟ

ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರು ಬಂದ್ ಕರೆ ನೀಡಿದ್ದರೂ ರಸ್ತೆಗಿಳಿದ ಯೆಲ್ಲೋ ಬೋರ್ಡ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮೆಜೆಸ್ಟಿಕ್​ನಲ್ಲೂ ಕ್ಯಾಬ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮತ್ತೆ ಕೆಲವು ಕಡೆ ಆಟೋ, ಟ್ಯಾಕ್ಸಿ ಚಾಲಕರಿಗೆ ವಾಹನ ಓಡಿಸದಂತೆ ತಡೆದು ಆವಾಜ್​ ಹಾಕಿದ್ದಾರೆ. ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ ಬಳಿ ಕ್ಯಾಬ್‌ಗಳನ್ನ ತಡೆದು ಆಕ್ರೋಶ ವ್ಯಕ್ತಪಡಿಸಿದ್ದು ಅಲ್ಲದೇ ಚಾಲಕನನ್ನು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು.

ಬಂದ್‌ ನಡುವೆ ಕೆಲ ಆಟೋ ಡ್ರೈವರ್‌ಗಳಿಂದ 3 ಪಟ್ಟು ವಸೂಲಿ

ಇನ್ನು ಬಂದ್‌ ನಡುವೆಯೂ ಕೆಲ ಆಟೋ ಡ್ರೈವರ್‌ಗಳು ಪ್ರಯಾಣಿಕರಿಂದ ಮೂರು ಪಟ್ಟು ಹಣ ವಸೂಲಿ ಮಾಡಿದ್ದಾರೆ. ಬಂದ್‌ ಅನ್ನೇ ಬಂಡವಾಳ ಮಾಡಿಕೊಂಡ ಕೆಲ ಆಟೋ ಚಾಲಕರು ಮೆಜೆಸ್ಟಿಕ್ ನಲ್ಲಿ ಹೆಚ್ಚುವರಿ ಹಣ ಪೀಕಿದ್ರು. ಮೆಜೆಸ್ಟಿಕ್‌ನಿಂದ 1 ಕಿ.ಮೀ ದೂರಕ್ಕೆ 200 ರೂಪಾಯಿ ಚಾರ್ಜ್‌ ಮಾಡಿದ್ದು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು.

ಇನ್ನು ಕೆಎಸ್​ಆರ್​ ರೇಲ್ವೆ ನಿಲ್ದಾಣದಲ್ಲಿ ಆಟೋಗಾಗಿ ಪ್ರಯಾಣಿಕರು ಪರದಾಡಿದ್ರು. ರೇಲ್ವೆ ನಿಲ್ದಾಣದ ಬಳಿ ಆಟೋ, ಕ್ಯಾಬ್​ ಇಲ್ಲದೆ ಒಂದೆರಡು ಗಂಟೆ ಮನೆಗೆ ತೆರಳಲಾಗದೇ ಸಂಕಷ್ಟ ಅನುಭವಿಸಿದ್ರು. ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಖಾಸಗಿ ವಾಹನ ಚಾಲಕರಿಗೆ ಅವರ ಭರವಸೆಗಳನ್ನು ಈಡೇರಿಸುವ ಭರವಸೆ ನೀಡಿದ್ರು.

‘ಆದಷ್ಷು ಬೇಗ ಕ್ರಮ’

ಇನ್ನು ಸಾರಿಗೆ ಸಚಿವರು ಭರವಸೆ ಬೆನ್ನಲ್ಲೇ ಪ್ರತಿಭಟನೆಯನ್ನು ಹೋರಾಟಗಾರರು ಹಿಂಪಡೆದ್ರು. ಮಧ್ಯರಾತ್ರಿವರೆಗೂ ಘೋಷಿಸಿದ್ದ ಬಂದ್ ವಾಪಸ್ ಪಡೆದ್ರು. ಆದ್ರೆ ಭರವಸೆ ಈಡೇರಿಸದಿದ್ರೆ ಮತ್ತೆ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ರು.

ಒಟ್ಟಾರೆ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಖಾಸಗಿ ವಾಹನ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಆದ್ರೆ ಪ್ರತಿಭಟನೆ ಹೆಸರಲ್ಲಿ ರಸ್ತೆಗಿಳಿದ ಬೈಕ್​ ಸವಾರ, ಆಟೋ, ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆ ನಡೆಸಿ ದರ್ಪ ಮೆರೆದಿದ್ದಾರೆ. ಇದರಿಂದ ಹೋರಾಟದ ಧ್ಯೇಯೋದ್ಧೇಶಗಳೇ ಬದಲಾದಂತಾಗಿದೆ. ಇತ್ತ ಜನಸಾಮಾನ್ಯರು ಆಟೋ, ಟ್ಯಾಕ್ಸಿ ಸಿಗದೇ ಪರದಾಡಿದ್ದಾರೆ. ಕೊನೆಗೂ ಹೋರಾಟಕ್ಕೆ ಮಣಿದು ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಬಂದ್​ಗೆ ತತ್ತರಿಸಿದ ಸಿಲಿಕಾನ್​ ಸಿಟಿ ಜನ; ರಸ್ತೆಗಿಳಿದ ಕ್ಯಾಬ್, ಆಟೋ ಮೇಲೆ ಕಲ್ಲು ಎಸೆತ!

https://newsfirstlive.com/wp-content/uploads/2023/09/Bengaluru-Bundh.jpg

Load More