newsfirstkannada.com

ಕ್ಯಾಬ್​​ನಲ್ಲಿ ಸ್ನೇಹಿತೆ ಜೊತೆ ‘Old Love Story’ ಹೇಳಿದ ಮಹಿಳೆ.. ಸೈಲೆಂಟಾಗಿ ಕೇಳಿಸ್ಕೊಂಡು 22 ಲಕ್ಷ ಹಣ ಮುಂಡಾಯಿಸಿದ ಡ್ರೈವರ್!

Share :

02-08-2023

    ಸಿನಿಮಾವನ್ನೂ ಮೀರಿಸಿದ ‘ಕಿಲಾಡಿ ಕ್ರೈಂ’ ಸ್ಟೋರಿ ಇದು

    ಸಮಸ್ಯೆ ಹೇಳ್ಕೊಳ್ಳುವ ಮುನ್ನ ಅಕ್ಕ-ಪಕ್ಕದ ಕಿವಿ ಮೇಲಿರಲಿ ಎಚ್ಚರ

    ‘ಚಿನ್ನ’ವನ್ನೂ ದೂಚಿದ, ಹಣವನ್ನೂ ನುಂಗಿದ ಕಿರಾತಕ ಡ್ರೈವರ್

ಇದು ಸಿನಿಮಾವನ್ನೇ ಮೀರಿಸಿದ ಸ್ಟೋರಿ.. ಹೇಳಿ-ಕೇಳಿ ನೀವು ಸಿಲಿಕಾನ್ ಸಿಟಿನೋ, ವಾಣಿಜ್ಯನಗರವೋ ಅಥವಾ ಯಾವುದೇ ಮಹಾನಗರಗಳಲ್ಲಿ ವಾಸಿಸುತ್ತಿದ್ದರೆ ಈ ಘಟನೆ ಓದಿದ ಮೇಲೆ ಹುಷಾರಾಗಿರಿ.. ಯಾಕಂದ್ರೆ ಸುತ್ತ-ಮುತ್ತ ಇರುವ ಮೋಸಗಾರರು, ನಮ್ಮ ವೀಕ್ನೆಸ್ ಮತ್ತು ಅಸಹಾಯಕತೆಯನ್ನು ಬಳಸಿಕೊಂಡು ಹೆಂಗೆಲ್ಲ ಮುಂಡಾಮುಚ್ಚುತ್ತಾರೆ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್..!

ಆರೋಪಿ ಕಿರಣ್ ಕುಮಾರ್
ಆರೋಪಿ ಕಿರಣ್ ಕುಮಾರ್

ಹೌದು, ಬೆಂಗಳೂರಿನ ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯ ಮಹಿಳೆಯೊಬ್ಬರು ತುಂಬಾ ದಿನಗಳ ನಂತರ ಸ್ನೇಹಿತೆಯನ್ನು ಭೇಟಿ ಮಾಡಿದ್ದಳು. ಅಪರೂಪಕ್ಕೆ ಸಿಕ್ಕ ಗೆಳತಿಯ ಜೊತೆ ಊಟ, ತಿಂಡಿ ಮಾಡಿ ಇಂದಿರಾನಗರದಿಂದ ಬಾಣಸವಾಡಿಗೆ ತಲುಪಲು ಕ್ಯಾಬ್ ಬುಕ್ ಮಾಡಿದ್ದಳು. ಅಂತೆಯೇ ಆ ಮಹಿಳೆಯಿದ್ದ ಸ್ಥಳಕ್ಕೆ ಊಬರ್ ಕ್ಯಾಬ್ ಬಂದು ನಿಂತಿತ್ತು. ಕ್ಯಾಬ್ ಏರಿ ಕೂತಿದ್ದ ಮಹಿಳೆ, ಸ್ನೇಹಿತೆ ಜೊತೆ ತನ್ನ ಯೌವನದ ದಿನಗಳ ಬಗ್ಗೆ ಮಾತನಾಡಲು ಶುರು ಮಾಡಿದ್ದಳು.

ನಾನು ವಯಸ್ಸಿಗೆ ಬಂದ ಮೇಲೆ ಒಬ್ಬ ಹುಡುಗನ ಪರಿಚಯ ಆಗಿತ್ತು. ಆತ ತುಂಬಾ ಒಳ್ಳೆಯ ಸ್ನೇಹಿತನಾಗಿದ್ದ. ಕೊನೆಗೆ ಯಾವುದೋ ಕಾರಣದಿಂದ ಆತನ ಸಂಪರ್ಕವೇ ತಪ್ಪಿ ಹೋಯಿತು. ಆತನಿಗಾಗಿ ನಾನು ತುಂಬಾನೇ ಹುಡುಕಾಡಿದ್ದೆ. ಆದರೆ ಎಲ್ಲಿಯೂ ನನಗೆ ಅವನು ಸಿಗಲಿಲ್ಲ. ಅವನನ್ನು ಒಮ್ಮೆ ನೋಡಬೇಕು ಎನಿಸಿದೆ ಅಂತೆಲ್ಲ, ಸ್ನೇಹಿತೆ ಬಳಿ ಆ ಮಹಿಳೆ ಎಳೆಎಳೆಯಾಗಿ ಹೇಳಿಕೊಂಡಿದ್ದಳು.

ಮಹಿಳೆಯ ಹಳೆಯ ‘ಪ್ರೇಮದ ಕಹಾನಿ’ಯನ್ನು ಕ್ಯಾಬ್ ಡ್ರೈವರ್​ ಕೇಳಿಸಿಕೊಂಡಿದ್ದ. ಕೆಲವು ದಿನಗಳ ಬಳಿಕ ಅದೇ ಕ್ಯಾಬ್ ಡ್ರೈವರ್​​, ಮಹಿಳೆಗೆ ಫೋನ್ ಮಾಡಿದ್ದ. ನಾನು ನಿನ್ನ ಹಳೇ ಸ್ನೇಹಿತ ಶ್ರೀನಿವಾಸ. ನಿನಗಾಗಿ ನಾನು ತುಂಬಾ ಹುಡುಕಾಟ ನಡೆಸಿದೆ. ಕೊನೆಗೂ ನಿನ್ನ ನಂಬರ್​ ಸ್ನೇಹಿತರೊಬ್ಬರು ಕೊಟ್ಟರು ಎಂದು ಕಥೆ ಕಟ್ಟಿದ್ದ. ಮೊದಲೇ, ಸ್ನೇಹಿತನಿಗಾಗಿ ಪರಿತಪಿಸಿದ್ದ ಆ ಮಹಿಳೆ ನಿಜ ಎಂದು ನಂಬಿದ್ದಳು. ಖುಷಿ ಖುಷಿಯಿಂದ ಆತನ ಜೊತೆ ಮಾತನಾಡಲು ಶುರುಮಾಡಿದ್ದಳು.

ಆರೋಪಿ ಕಿರಣ್ ಕುಮಾರ್
ಆರೋಪಿ ಕಿರಣ್ ಕುಮಾರ್

ಹೀಗೆ ಹಲವು ದಿನಗಳು ಕಳೆದ ಬಳಿಕ ಮತ್ತೆ ಆಕೆಗೆ ಆತ ಫೋನ್ ಮಾಡಿ, ನಾನು ತುಂಬಾ ಆರ್ಥಿಕ ಸಂಕಷ್ಟದಲ್ಲಿದ್ದೇನೆ. ಹಣದ ಸಹಾಯ ಅಗತ್ಯ ಇದೆ ಎಂದಿದ್ದ. ಸ್ನೇಹಿತ ಹೇಳುತ್ತಿರೋದು ನಿಜ ಎಂದು ನಂಬಿದ ಆಕೆ, ಬರೋಬ್ಬರಿ 22 ಲಕ್ಷ ರೂಪಾಯಿ ಹಣವನ್ನು ಕಳುಹಿಸಿದ್ದಳು.

ಬಾಲ್ಯದ ಸ್ನೇಹಿತನಲ್ಲ, ಮೋಸಗಾರ

ಆಕೆಯಿಂದ ಹಣ ಪಡೆದ ಅಸಾಮಿ, ಮೋಜು-ಮಸ್ತಿ ಮಾಡಿದ್ದ. ಕೆಲವು ದಿನಗಳ ಬಳಿಕ ಕ್ಯಾಬ್​ ಡ್ರೈವರ್​ನ ನಡೆ ಬದಲಾಗಿ ಹೋಯಿತು. ಇದರಿಂದ ಅನುಮಾನಗೊಂಡ ಮಹಿಳೆ, ನಿಜಕ್ಕೂ ಆತ ಯಾರೆಂದು ತಿಳಿದುಕೊಳ್ಳಲು ಮುಂದಾಗಿದ್ದಾಳೆ. ಕೊನೆಗೆ ಆತ ನನ್ನ ಬಾಲ್ಯದ ಸ್ನೇಹಿತನಲ್ಲ, ಮೋಸಗಾರ ಎಂದು ಗೊತ್ತಾಗಿದೆ.

ಹಣಕ್ಕಾಗಿ ಅಡವಿಟ್ಟಿದ್ದ ಚಿನ್ನಾಭರಣಗಳು
ಹಣಕ್ಕಾಗಿ ಅಡವಿಟ್ಟಿದ್ದ ಚಿನ್ನಾಭರಣಗಳು

ಇದನ್ನು ಪ್ರಶ್ನಿಸಲು ಮಹಿಳೆ ಮುಂದಾಗುತ್ತಿದ್ದಂತೆ ಆರೋಪಿ ಕ್ಯಾಬ್​ ಡ್ರೈವರ್ ಬ್ಲಾಕ್​-ಮೇಲ್ ಮಾಡಿದ್ದಾನೆ. ನಿನ್ನ ಮತ್ತು ನಿನ್ನ ಸ್ನೇಹಿತನ ವಿಚಾರವನ್ನು ಹೊರ ಬಿಡ್ತೀನಿ. ನಿನ್ನ ಗಂಡನಿಗೆ ಹೇಳಿ ಸಂಸಾರ ಹಾಳು ಮಾಡ್ತೀನಿ ಎಂದು ಬೆದರಿಕೆ ಹಾಕಿದ್ದಾನೆ. ಹೀಗೆ ಬೆದರಿಕೆ ಹಾಕಿದ ಆರೋಪಿ, ಚಿನ್ನಾಭರಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಹೆದರಿದ ಮಹಿಳೆ 750 ಗ್ರಾಂ ಚಿನ್ನಾಭರಣವನ್ನು ಅವನಿಗೆ ನೀಡಿದ್ದಾಳೆ.

ಆರೋಪಿ ಕ್ಯಾಬ್ ಚಾಲಕ ಅರೆಸ್ಟ್

ಕೊನೆಗೂ ಈತನ ಕಾಟ ತಾಳಲಾರದೇ ರಾಮಮೂರ್ತಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ವಿಚಾರಣೆ ನಡೆಸಿದ ಪೊಲೀಸರು ಆರೋಪಿ ಕ್ಯಾಬ್​ ಚಾಲಕ ಕಿರಣ್ ಕುಮಾರ್​​ನನ್ನು ಬಂಧಿಸಿದ್ದಾರೆ. ಹೆಸರಘಟ್ಟ ಮೂಲದ ಕ್ಯಾಬ್ ಚಾಲಕನನ್ನ ಬಂಧಿಸಿ, ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆಯಿಂದ ಪಡೆದಿದ್ದ ಚಿನ್ನಾಭರಣವನ್ನು ಹಣಕ್ಕಾಗಿ ಅಡ ಇಟ್ಟಿರೋದು ಬೆಳಕಿಗೆ ಬಂದಿದೆ. ಇದೇ ರೀತಿ ಹಲವರಿಂದ ಅಡವಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಗುರುತು, ಪರಿಚಯ ಇಲ್ಲದವರ ಬಳಿ ಹೇಳಿಕೊಂಡಾಗ ಸಮಸ್ಯೆಗೆ ಅದೆಷ್ಟೋ ಬಾರಿ ಪರಿಹಾರ ಸಿಕ್ಕ ಉದಾಹರಣೆಗಳಿವೆ. ಬೇರೆಯವ ವೀಕ್ನೆಸ್​ ಅನ್ನೇ ಅಸ್ತ್ರವಾಗಿ ಮಾಡಿಕೊಂಡು ಮೋಸ ಮಾಡಿದ ದುರಂತ ಪ್ರಸಂಗಗಳೂ ನಮ್ಮ ಮುಂದೆ ಇವೆ. ಅದಕ್ಕೆ ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಆಪ್ತರ ಬಳಿ ಹೇಳಿಕೊಳ್ಳುವ ಮುನ್ನ, ಅಕ್ಕ-ಪಕ್ಕ ಹಾಗೂ ಜೊತೆಗಿರುವ ಕಿವಿಗಳ ಮೇಲೆ ಎಚ್ಚರ ಇರಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಯಾಬ್​​ನಲ್ಲಿ ಸ್ನೇಹಿತೆ ಜೊತೆ ‘Old Love Story’ ಹೇಳಿದ ಮಹಿಳೆ.. ಸೈಲೆಂಟಾಗಿ ಕೇಳಿಸ್ಕೊಂಡು 22 ಲಕ್ಷ ಹಣ ಮುಂಡಾಯಿಸಿದ ಡ್ರೈವರ್!

https://newsfirstlive.com/wp-content/uploads/2023/08/BNG_CAB-4.jpg

Load More