newsfirstkannada.com

ರಸ್ತೆಯಲ್ಲಿ ನಿಂತು ಗಲಾಟೆ, ದರೋಡೆ ಮಾಡುವ ಪುಂಡರಿಗೆ ಖಡಕ್ ಎಚ್ಚರಿಕೆ; ರೌಡಿಶೀಟ್ ಓಪನ್ ಆಗುತ್ತೆ ಹುಷಾರ್..!

Share :

13-08-2023

    ರೋಡ್ ರೇಜ್ ಪ್ರಕರಣ ತಡೆಯಲು ಮಾಸ್ಟರ್ ಪ್ಲಾನ್

    ಕಿಡಿಗೇಡಿಗಳ ಅನಾಗರಿಕ ಕೃತ್ಯಗಳ ತಪ್ಪಿಸಲು ಸೂಚನೆ

    ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ವಾರ್ನಿಂಗ್

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ರೋಡ್ ರೇಜ್ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಇದ್ರಿಂದ ಗಲಾಟೆ ಮಾಡೋ ಕಿಡಿಗೇಡಿಗಳಿಗೆ ಇದೀಗ ಪೊಲೀಸ್ ಕಮೀಷನರ್ ಬಿ.ದಯಾನಂದ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಇನ್ಮುಂದೆ ಕಾರು, ಬೈಕ್ ಅಡ್ಡಗಟ್ಟಿ ಕಿಡಿಗೇಡಿಗಳು ದುರ್ವರ್ತನೆ ತೋರಿದ್ರೆ ಅಂತವರ ವಿರುದ್ಧ ರೌಡಿಶೀಟ್ ತೆರೆಯಲು ಬಿ.ದಯಾನಂದ್ ಸೂಚಿಸಿದ್ದಾರೆ. ರೋಡ್ ರೇಜ್ ಕೃತ್ಯಗಳ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರು ಪೊಲೀಸ್ ಕಮೀಷನರ್​ಗೆ ದೂರು ನಿಡಿದ್ದು, ರಸ್ತೆ ಗಲಾಟೆ ಅಥವಾ ಸುಲಿಗೆ ಮಾಡಿದ್ರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವಂತೆ ನಗರದ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಡಲಾಗಿದೆ.

ವಿನಾಕಾರಣ ಗಲಾಟೆ ಮಾಡುವ ಕಿಡಿಗೇಡಿಗಳು, ಪುಂಡರ ಮೇಲೆ ರೌಡಿಶೀಟ್ ತೆರೆಯಿರಿ. ರಸ್ತೆ ಗಲಾಟೆ ಅಥವಾ ಸುಲಿಗೆ ಮಾಡಿದ್ರೆ ಮೂಲಾಜಿಲ್ಲದೇ ಕಠಿಣ ಕ್ರಮ ತೆಗೆದುಕೊಳ್ಳಿ. ಅಂತಹ ಕೃತ್ಯ ನಡೆಸೋರ ವಿರುದ್ಧ ಕಠಿಣ ಕ್ರಮದ ಅಗತ್ಯ ಇದೆ ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಮೀಷನರ್​ಗೆ ದೂರು ಬಂದಿದ್ದವು. ಅದನ್ನು ಆಧರಿಸಿ, ನಗರ ಪೊಲೀಸ್ ಆಯುಕ್ತರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಸ್ತೆಯಲ್ಲಿ ನಿಂತು ಗಲಾಟೆ, ದರೋಡೆ ಮಾಡುವ ಪುಂಡರಿಗೆ ಖಡಕ್ ಎಚ್ಚರಿಕೆ; ರೌಡಿಶೀಟ್ ಓಪನ್ ಆಗುತ್ತೆ ಹುಷಾರ್..!

https://newsfirstlive.com/wp-content/uploads/2023/08/DAYANANDA.jpg

Load More