newsfirstkannada.com

×

ಬೆಂಗಳೂರಲ್ಲಿ ಒಂದೇ ಕುಟುಂಬದ ನಾಲ್ವರ ಸಾವು; ಅಸಲಿಗೆ ಆಗಿದ್ದೇನು? ಕಾರಣವೇನು?

Share :

Published October 14, 2024 at 8:45pm

    ಅಪ್ಪ ಅಮ್ಮ.. ಮಡಿಲಲ್ಲಿ ಮುದ್ದು ಮುದ್ದಾದ ಮಕ್ಕಳಿದ್ದ ಕುಟುಂಬ

    ಓಲಾ, ಉಬರ್ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದ ಕ್ಯಾಬ್ ಡ್ರೈವರ್‌

    ಮಕ್ಕಳನ್ನು ಸಾಯಿಸಿದ ಬಳಿಕ ತಾನು ಸಾವಿಗೆ ಶರಣಾಗಿದ್ದ ಹೆತ್ತ ತಾಯಿ!

ಬೆಂಗಳೂರು: ಅದೊಂದು ಚೆಂದದ ಕುಟುಂಬ. ಗಂಡ ಹೆಂಡತಿ ಇಬ್ಬರು ಮಕ್ಕಳು. ಮುದ್ದಾದ ಮಕ್ಕಳು ಇಚ್ಛೆಯನ್ನರಿತು ನಡೆಯುವ ಸತಿ.. ನೆಮ್ಮದಿಯ ಸಂಸಾರ. ಆದ್ರೀಗ ಇಡೀ ಕುಟುಂಬ ಸೂರ್ಯ ಮೂಡುವ ಹೊತ್ತಿಗೆ ಸಾವಿಗೆ ಶರಣಾಗಿ ಹೋಗಿದೆ. ಪುಟ್ಟ ಕಂದಮ್ಮಗಳೊಂದಿಗೆ ಅಪ್ಪ ಅಮ್ಮ ಸೇರಿ ನಾಲ್ಕು ಜನ ಜೀವನದ ಯಾತ್ರೆಗೆ ವಿದಾಯ ಹೇಳಿದ್ದಾರೆ.

ಅಪ್ಪ ಅಮ್ಮ.. ಮಡಿಲಲ್ಲಿ ಮುದ್ದು ಮುದ್ದಾದ ಮಕ್ಕಳು.. ಇವರನ್ನ ನೋಡಿದ್ರೆ ಸುಖಿ ಸಂಸಾರ ಅಂತ ಗೊತ್ತಾಗುತ್ತೆ.. ಮುಖದಲ್ಲಿರುವ ನಗುವೇ ಇದೊಂದು ಚೆಂದದ ಕುಟುಂಬ ಅನ್ನೋದನ್ನ ಹೇಳ್ತಿದೆ. ಆದ್ರೀಗ ಈ ನಗು ಶಾಶ್ವತವಾಗಿ ಮಾಸಿ ಹೋಗಿದೆ. ಇಡೀ ಕುಟುಂಬವೇ ಇಹಲೋಕವನ್ನ ತ್ಯಜಿಸಿದೆ.

ಬೆಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆ!
ನಿಜಕ್ಕೂ ಇದು ಎದೆ ಝಲ್ಲೇನಿಸುವ ಸುದ್ದಿಯೇ.. ಕೇಳುವವರ ಕರುಳು ಚುರ್ ಅನ್ನೋವಂತ ಸುದ್ದಿ. ಈ ಕುಟುಂಬ ಬೆಂಗಳೂರಿನಲ್ಲಿ ಯಲಹಂಕದಲ್ಲಿರುವ ಯಡಿಯೂರಪ್ಪ ನಗರದಲ್ಲಿ ವಾಸವಿತ್ತು. ಆದ್ರೆ ಭಾನುವಾರ ಕಳೆದು ಸೋಮವಾರ ಸೂರ್ಯ ಮೂಡುವ ಹೊತ್ತಿಗೆ ಇಡೀ ಕುಟುಂಬ ಸಾವಿಗೆ ಶರಣಾಗಿರುವ ವಿಚಾರ ಸಿಟಿ ಮಂದಿಯನ್ನ ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್‌ನ 5 ಆರೋಪಿಗಳಿಗೆ ಬಿಗ್ ರಿಲೀಫ್‌.. ಜಾಮೀನು ಮಂಜೂರು; ಯಾರಿಗೆ ಬಿಡುಗಡೆ ಭಾಗ್ಯ? 

ಈ ಪೋಟೋದಲ್ಲಿರುವ ದಂಪತಿ ಹೆಸರು ಅವಿನಾಶ್ ಮತ್ತು ಮಮತಾ ಅಂತ.. ಮೂಲತಃ ಕಲಬುರಗಿ ಮೂಲದವರು. ಕಳೆದ ಆರು ವರ್ಷಗಳಿಂದ ಈ ದಂಪತಿ ಬೆಂಗಳೂರಲ್ಲೇ ವಾಸವಿತ್ತು. ಅವಿನಾಶ್​ ಸ್ವಂತ ಕ್ಯಾಬ್ ಹೊಂದಿದ್ದು ಓಲಾ ಉಬರ್ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದ. ಗಂಡ ಹೆಂಡತಿ ಮಧ್ಯೆ ಎಲ್ಲವೂ ಚೆನ್ನಾಗಿತ್ತು. ಆದ್ರೆ ಕಳೆದ ಒಂದು ವಾರದ ಹಿಂದೆ ಅವಿನಾಶ್​​ಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು ಎನ್ನಲಾಗಿದೆ. ಕ್ರೆಡಿಟ್​ ಕಾರ್ಡ್ ಸಮಸ್ಯೆಯಿಂದ ಅವಿನಾಶ್​ ಹಣಕ್ಕಾಗಿ ಸಹಾಯ ಕೂಡ ಕೇಳಿದ್ರಂತೆ. ಈ ವಿಚಾರ ಹೆಂಡತಿ ಮುಂದೆಯೂ ಹೇಳಿಕೊಂಡಿದ್ರಂತೆ. ಹೀಗಾಗಿ ಹಣಕಾಸಿನ ವಿಚಾರಕ್ಕೆ ಈ ಕುಟುಂಬ ಸಾವಿಗೆ ಶರಣಾಗಿರಬಹುದು ಎನ್ನಲಾಗಿದೆ.

ಸಾವಿಗೂ ಮುನ್ನ ಏನೇನಾಯ್ತು?
ಕಳೆದ ಭಾನುವಾರ ರಾತ್ರಿ ಅವಿನಾಶ್ ಪತ್ನಿ ಮಮತಾಗೆ ಕರೆ ಮಾಡಿದ್ದ. ಅನೇಕ ಬಾರಿ ಕಾಲ್ ಮಾಡಿದ್ರೂ ಮಮತಾ ಫೋನ್ ರಿಸೀವ್ ಮಾಡಿರಲಿಲ್ಲ. ಆಗ ಅವಿನಾಶ್ ಪಕ್ಕದ ಮನೆಯವರಿಗೆ ಕಾಲ್ ಮಾಡಿ ಪತ್ನಿಗೆ ಫೋನ್ ನೀಡುವಂತೆ ಹೇಳಿದ್ದ. ಹಲವು ಬಾರಿ ಮನೆಯ ಬಾಗಿಲು ಬಡಿದ್ರೂ ಮಮತಾ ಬಾಗಿಲು ತೆಗೆದಿರಲಿಲ್ಲ. ರಾತ್ರಿ 9 ಗಂಟೆಗೆ ಅವಿನಾಶ್ ಮನೆಗೆ ಬಂದಿದ್ದ. ಮತ್ತೊಂದು ಕೀ ಬಳಸಿ ಮನೆ ಬೀಗ ತೆಗೆದಾಗ ಪತ್ನಿ ಮತ್ತು ಮಕ್ಕಳು ಸತ್ತು ಬಿದ್ದಿರೋದು ಕಂಡಿದೆ. ಪತ್ನಿ ಮಕ್ಕಳ ಸಾವು ಕಂಡು ಬೆಚ್ಚಿ ಬಿದ್ದಿದ್ದ ಗಂಡ ಅವಿನಾಶ್ ಕೂಡ ಹೆಂಡತಿ ಸತ್ತಿದ್ದ ನೇ*ಣಿನ ಹಗ್ಗಕ್ಕೆ ಶರಣಾಗಿದ್ದಾನೆ.

ಇದನ್ನೂ ಓದಿ: ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಮತ್ತೊಂದು ಶಾಕಿಂಗ್​ ಟ್ವಿಸ್ಟ್​; ತುಳಸಿ ಹೆಚ್ಚು ದಿನ ಬದುಕೋದು ಡೌಟ್! 

ಇನ್ನೂ ಒಂದು ವಿಚಾರ ಹೇಳಬೇಕು ಮಮತಾನೇ ಮೊದಲು ಮಕ್ಕಳನ್ನ ಕೊಂದು ಬಳಿಕ ತಾನು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೊದಲಿಗೆ ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದಿದ್ದ ತಾಯಿ ನಂತರ ತಾನು ಹಗ್ಗ ಕಟ್ಟಿ ಆತ್ಮಹ*ತ್ಯೆಗೆ ಶರಣಾಗಿದ್ದಾಳೆ ಅಂತ ತಿಳಿದು ಬಂದಿದೆ. ಮಮತಾಳ ಕುತ್ತಿಗೆ ಭಾಗದಲ್ಲಿ ನೇ*ಣಿನ ಕುಣಿಕೆಯ ಗುರುತು ಪತ್ತೆಯಾಗಿದೆ. ಗಂಡನ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ರಾ ಪತ್ನಿ..? ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಈ ಕುಟುಂಬದ ದುರಂತ ಅಂತ್ಯ ಸಂಬಂಧಿಕರಿಗೂ ಶಾಕ್ ನೀಡಿದೆ. ಈ ಬಗ್ಗೆ ಮಾತನಾಡಿರುವ ಅವಿನಾಶ್ ಸಂಬಂಧಿ ಸೂಮಾರು 6 ವರ್ಷಗಳಿಂದ ಇಲ್ಲಿಯೇ ನೆಲೆಸಿದ್ರು. ಕಳೆದ ಒಂದು ವಾರದ ಹಿಂದೆ ನಮ್ಮ ಮಾವನಿಗೆ ಕರೆ ಮಾಡಿದ್ರು. ಕ್ರೆಡಿಟ್ ಕಾರ್ಡ್‌ಗೆ ಹಣ ಬೇಕು ಅಂತ ಕೇಳಿದ್ರು. ನಮ್ಮ ಮಾವ ನೋಡೋಣ ಅಂತಲೂ ಹೇಳಿದ್ರು. ಆದ್ರೀಗ ಈ ರೀತಿ ಮಾಡಿಕೊಂಡಿರುವುದು ನಮಗೂ ದೊಡ್ಡ ಆಘಾತ ನೀಡಿದೆ ಅಂತ ನೋವು ಹೊರ ಹಾಕಿದ್ದಾರೆ.
ರಾಜನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಒಂದೇ ಕುಟುಂಬದ ನಾಲ್ಕು ಜನರ ಈ ಸಾವು ಬೆಂಗಳೂರು ಜನರನ್ನ ಬೆಚ್ಚಿ ಬೀಳಿಸಿರೋದಂತು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಒಂದೇ ಕುಟುಂಬದ ನಾಲ್ವರ ಸಾವು; ಅಸಲಿಗೆ ಆಗಿದ್ದೇನು? ಕಾರಣವೇನು?

https://newsfirstlive.com/wp-content/uploads/2024/10/Bangalore-Family-Death-1.jpg

Load More