ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ವೃದ್ಧೆಯೊಬ್ಬರಿಗೆ ದಿಢೀರ್ ಹೃದಯಾಘಾತ
ಇದೇ ವಿಮಾನದಲ್ಲೇ ಪ್ರಯಾಣ ಮಾಡುತ್ತಿದ್ದ ಬೆಂಗಳೂರು ಮೂಲದ ವೈದ್ಯರು
ವೃದ್ಧೆ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ ಆ ಡಾಕ್ಟರ್ ಯಾರು..?
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಿಂದ ನ್ಯೂ ಡೆಲ್ಲಿಗೆ ಹೊರಟಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ವೃದ್ಧೆಯೊಬ್ಬರಿಗೆ ದಿಢೀರ್ ಹೃದಯಾಘಾತ ಕಾಣಿಸಿಕೊಂಡಿತ್ತು. ಇದೇ ವಿಮಾನದಲ್ಲೇ ಪ್ರಯಾಣ ಮಾಡುತ್ತಿದ್ದ ಬೆಂಗಳೂರು ಮೂಲದ ವೈದ್ಯರೊಬ್ಬರು ವೃದ್ಧೆ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವದಾನ ಮಾಡಿದ್ದಾರೆ. ಮಹಿಳೆ ಜೀವ ಉಳಿಸಿದ ಆಪತ್ಬಾಂಧವ ಮತ್ಯಾರು ಅಲ್ಲ, ನಮ್ಮ ಬೆಂಗಳೂರಿನ ಡಾ. ನಿರಂತರ ಗಣೇಶ್.
ಮೂರು ದಿನಗಳ ಹಿಂದೆ ಬುಧವಾರ ಮಧ್ಯಾಹ್ನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನ್ಯೂ ಡೆಲ್ಲಿಗೆ ಇಂಡಿಗೋ ಹೊರಟಿತ್ತು. ಮಾರ್ಗ ಮಧ್ಯೆ ವಿಮಾನದಲ್ಲಿ 60 ವರ್ಷದ ರೋಸಮ್ಮ ಎಂಬುವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಆಗ ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿ ವಿಮಾನದಲ್ಲೇ ಪ್ರಯಾಣ ಮಾಡುತ್ತಿದ್ದ ಡಾ. ನಿರಂತರ ಗಣೇಶ್ ಅವರನ್ನು ಸಂಪರ್ಕಿಸಿದ್ದಾರೆ. ಈ ಕೂಡಲೇ ರೋಸಮ್ಮ ನೆರವಿಗೆ ಧಾವಿಸಿದ ಡಾ. ನಿರಂತರ ಗಣೇಶ್ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.
ನ್ಯೂಸ್ಫಸ್ಟ್ಗೆ ಈ ಬಗ್ಗೆ ವೈದ್ಯ ಗಣೇಶ್ ಹೇಳಿದ್ದೇನು..?
ಡಾ. ನಿರಂತರ ಗಣೇಶ್ ಮೂಲತಃ ಆರ್ಥೋಪೆಡಿಕ್ ಸರ್ಜನ್. ಬೆಂಗಳೂರಿನ ಜಾಲಹಳ್ಳಿಯ ಕ್ಯಾನ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಬಂಧ ನ್ಯೂಸ್ಫಸ್ಟ್ ಜತೆಗೆ ಮಾತಾಡಿದ ನಿರಂತರ ಗಣೇಶ್, ಮಹಿಳೆಗೆ ಹೃದಯಾಘಾತ ಕಾಣಿಸಿಕೊಂಡ ಕೂಡಲೇ ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿ ನನ್ನನ್ನು ಸಂಪರ್ಕಿಸಿದರು. ವಿಮಾನದಲ್ಲಿ ತುರ್ತು ವೈದ್ಯಕೀಯ ಸಾಧನಗಳು ಇದ್ದವು. ಇವುಗಳ ಸಹಾಯದಿಂದ ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದೆ. ಒಬ್ಬ ಜೀವ ಉಳಿಸಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಇಂಡಿಗೋ ವಿಮಾನ ಸಿಬ್ಬಂದಿಗೆ ಈ ರೀತಿಯ ಸಂದರ್ಭವನ್ನು ಎದುರಿಸಲು ಟ್ರೈನಿಂಗ್ ಕೊಟ್ಟರೆ ಒಳ್ಳೆಯದು ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ