newsfirstkannada.com

ಹಣ ಡಬಲ್​ ಮಾಡಿ ಕೊಡ್ತೀವಿ.. ಜನರನ್ನು ವಂಚಿಸುತ್ತಿದ್ದ ಅಪ್ಪ-ಮಗ ಈಗ ಸಿಸಿಬಿ ವಶಕ್ಕೆ

Share :

21-10-2023

    ಪಂಚ ಐಶ್ವರ್ಯ ಕೋ. ಆಪರೇಟಿವ್​ ಸೊಸೈಟಿ ಪಾಲುದಾರರಾಗಿದ್ದ ತಂದೆ

    ಬೆಂಗಳೂರಿನ ಗಾಂಧಿಬಜಾರ್, ಬಳೆಪೇಟೆ ಸೇರಿ ನಾಲ್ಕು ಶಾಖೆಗಳನ್ನ ಹೊಂದಿದ್ದ ಸೊಸೈಟಿ

    ಬಿಟ್ ಕಾಯಿನ್ ಆಸೆ ತೋರಿಸಿ ಕೂಡ ಮಹಾ ಮೋಸ ಮಾಡಿರುವ ಅಪ್ಪ-ಮಗ

ಬೆಂಗಳೂರು: ಹಣ ಡಬಲ್ ಮಾಡ್ತೀವಿ ಅಂತ ಹೇಳಿ ವಂಚಿಸುತ್ತಿದ್ದ ತಂದೆ ಮತ್ತು ಮಗನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಂದೆ ಸತೀಶ್, ಮಗ ಶ್ರೀಕಾಂತ್​ ಈಗ ಪೊಲೀಸರ ವಶವಾಗಿದ್ದಾರೆ.

ತಂದೆ ಸತೀಶ್ ಪಂಚ ಐಶ್ವರ್ಯ ಕೋ. ಆಪರೇಟಿವ್​ ಸೊಸೈಟಿ ಪಾಲುದಾರರಾಗಿದ್ದು, ಈ ಸೊಸೈಟಿ ಬೆಂಗಳೂರಿನ ಗಾಂಧಿಬಜಾರ್, ಅವೆನ್ಯೂ ರೋಡ್, ಬಳೆಪೇಟೆ, ಬಸವನಗುಡಿ ಸೇರಿ ನಾಲ್ಕು ಶಾಖೆಗಳನ್ನ ಹೊಂದಿತ್ತು. ಇಲ್ಲಿಂದ ಯಾರಿಗೂ ಗೊತ್ತಿಲ್ಲದಂತೆ ಮಗ ಶ್ರೀಕಾಂತ್​ಗೆ ಹಣ ಟ್ರಾನ್ಸ್​ಫರ್ ಮಾಡುತ್ತಿದ್ದನು.

ಸತೀಶ್ ಹಲವರಿಗೆ ಬಿಟ್ ಕಾಯಿನ್ ಆಸೆ ತೋರಿಸಿ ಮಹಾ ಮೋಸ ಮಾಡಿರುವ ಆರೋಪವು ಕೇಳಿಬಂದಿದೆ. 2021-2022ರಲ್ಲಿ ಜಿಜಿ ಗೇಮಿಂಗ್ ಌಪ್ ತರುತ್ತೀವಿ ಅಂತ ಹೇಳಿ ಮೋಸ ಮಾಡಿದ್ದು, ಌಪ್ ಮೂಲಕ ಜನರಿಗೆ ಬಿಟ್ ಕಾಯಿನ್ ಆಸೆ ತೋರಿಸಿದ್ದಾರೆ ಎಂಬ ಆರೋಪವು ಸತೀಶ್ ಮೇಲೆ ಕೇಳಿ ಬಂದಿದೆ.

ಇನ್ನು ದಿನಕ್ಕೆ 10 ಸಾವಿರ ಇನ್ವೆಸ್ಟ್ ಮಾಡಿದ್ರೆ, 45 ಸಾವಿರ ರೂ. ಬರುತ್ತೆ ಎಂದು ಬಣ ಬಣ್ಣದ ಸುಳ್ಳುಗಳನ್ನ ಹೇಳಿ ಆಮಿಷವೊಡ್ಡುತ್ತಿದ್ದ ಸತೀಶನಿಂದ 6 ಕಂಪ್ಯೂಟರ್, 4 ಮೊಬೈಲ್, 2 ಲ್ಯಾಪ್​ಟಾಪ್ ಮತ್ತು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸತೀಶ್ ಪುತ್ರ ಶ್ರೀಕಾಂತ್ ದ್ವಿತೀಯ ಪಿಯುಸಿ ಓದಿದ್ದು, ಈತ ದೊಡ್ಡ ದೊಡ್ಡ ಹೋಟೆಲ್​ಗೆ ಇನ್ವೆಸ್ಟರ್ಸ್ ಕರೆಸಿಕೊಂಡು ಮೋಸ ಮಾಡಿರುವ ಘಟನೆಯು ಬೆಳಕಿಗೆ ಬಂದಿದೆ. ಹೀಗಾಗಿ ಸಿಸಿಬಿ ಪೊಲೀಸರು ಸತೀಶ್, ಶ್ರೀಕಾಂತ್ ಇಬ್ಬರನ್ನು ಬಂಧಿಸಿದ್ದಾರೆ. ಇವರಿಬ್ಬರ ವಿರುದ್ಧ ಜನರು ಪೊಲೀಸ್ ಠಾಣೆಯಲ್ಲಿ ಬ್ಯಾಂಕ್​ ವಂಚನೆ ಕೇಸ್​ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣ ಡಬಲ್​ ಮಾಡಿ ಕೊಡ್ತೀವಿ.. ಜನರನ್ನು ವಂಚಿಸುತ್ತಿದ್ದ ಅಪ್ಪ-ಮಗ ಈಗ ಸಿಸಿಬಿ ವಶಕ್ಕೆ

https://newsfirstlive.com/wp-content/uploads/2023/10/BNG.webp

Load More