newsfirstkannada.com

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ ಖಾಸಗಿ ಕಂಪನಿ CEO, MD ಕೊಲೆ ಕೇಸ್​.. ಹತ್ಯೆಗೈದ ಸುದ್ದಿಯ ಸ್ಟೇಟಸ್​ ಹಾಕೊಂಡು ವಿಕೃತಿ ಮೆರೆದಿದ್ದ ಆರೋಪಿ

Share :

12-07-2023

    RSS ಜೊತೆ ಒಡನಾಟ ಇಟ್ಕೊಂಡಿದ್ದ ಹತ್ಯೆಯಾದ ಫಣೀಂದ್ರ

    ಆರೋಪಿಗೆ ರೀಲ್ಸ್ ಚಟ, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್

    ವೃತ್ತಿ ವೈಷ್ಯಮ್ಯಕ್ಕೆ ನಡೆಯಿತಾ ಬರ್ಬರ ಜೋಡಿ ಕೊಲೆ?

ನಿನ್ನೆ ಬೆಂಗಳೂರಲ್ಲಿ ಹಾಡಹಗಲೇ ಡಬಲ್ ಮರ್ಡರ್ ನಡೆದಿದೆ. ಸುದ್ದಿ‌ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರೇ ಆಘಾತಕ್ಕೆ ಒಳಗಾದರು. ಮಾಜಿ ಸಿಬ್ಬಂದಿಯಿಂದ ಸಂಸ್ಥೆಯೊಂದರ ಎಂಡಿ ಹಾಗೂ ಸಿಇಓ ಇಬ್ಬರು ಭೀಕರವಾಗಿ ಹತ್ಯೆಯಾಗಿ ಬಿದ್ದಿದ್ದರು.
ಮಾಜಿ ನೌಕರನ ಮಚ್ಚಿನೇಟಿಗೆ ಎಂಡಿ, ಸಿಇಒ ಸಾವು

ನಿನ್ನೆ ಸಂಜೆ ನಾಲ್ಕು ಗಂಟೆ ಸಮಯ. ಬೆಂಗಳೂರಿನ ಹೆಬ್ಬಾಳ ಸಮೀಪದ ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಡಬಲ್ ಮರ್ಡರ್ ನಡೆದುಹೋಗಿತ್ತು. ಇಲ್ಲಿನ ಆರನೇ ಕ್ರಾಸ್​ನಲ್ಲಿರೋ ಏರೋನಿಕ್ಸ್ ಇಂಟರ್​ನೆಟ್​ ಪ್ರವೈಟ್ ಲಿಮಿಟೆಡ್ (Aeronics Internet Company) ಎಂಬ ಸಂಸ್ಥೆಗೆ ನುಗ್ಗಿದ್ದ ಮೂವರು, ಕಚೇರಿಯಲ್ಲಿದ್ದ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ಸಿಇಓ ವಿನುಕುಮಾರ್ ಮೇಲೆ ಮಚ್ಚಿನಿಂದ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ.

ಕೊಲೆ ಆರೋಪಿ ಫಿಲಿಕ್ಸ್
ಕೊಲೆ ಆರೋಪಿ ಫಿಲಿಕ್ಸ್

ಅಲ್ಲಿ ಆಗಿದ್ದು ಏನು..?

ಕೊಲೆಯಾದ ಫಣೀಂದ್ರ ನಾಲ್ಕು ತಿಂಗಳ ಹಿಂದೆ ಪಂಪಾ ಬಡಾವಣೆಯಲ್ಲಿ ಏರೋನಿಕ್ಸ್ ಇಂಟರ್​ನೆಟ್​ ಪ್ರವೈಟ್ ಲಿಮಿಟೆಡ್ ಅನ್ನೋ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಅದಕ್ಕೆ ವಿನುಕುಮಾರ್ ಸಿಇಓ ಆಗಿ ಕೆಲಸ ಮಾಡ್ತಿದ್ದರು. ನಿನ್ನೆ ಸಂಜೆ ನಾಲ್ಕು ಗಂಟೆಗೆ ಕಂಪನಿಯ ಸಿಬ್ಬಂದಿ ಜೊತೆ ಎಂಡಿ ಹಾಗೂ ಸಿಇಓ ಮೀಟಿಂಗ್ ಕರೆದಿದ್ದರು. ಈ ವಿಚಾರ ಕೊಲೆ ಮಾಡಿದ್ದ ಆರೋಪಿಗಳಿಗೆ ಗೊತ್ತಾಗಿತ್ತು.

ಅಂತೆಯೇ ಮಧ್ಯಾಹ್ನ 3.30ರ ಸುಮಾರಿಗೆ ಕೊಲೆ ಮಾಡಿದ ಆರೋಪಿಗಳಾದ ಫಿಲಿಕ್ಸ್ ಹಾಗೂ ಆತನ ಸಹಚರರು ಫಣೀಂದ್ರ ಸಂಸ್ಥೆಯ ಕಚೇರಿಗೆ ಹೋಗಿದ್ದರು. ಫಣೀಂದ್ರ ಕ್ಯಾಬೀನ್​ಗೆ ಹೋಗಿದ್ದ ಕಿರಾತಕರು, ಕೆಲವು ಹೊತ್ತು ಮಾತುಕತೆ ನಡೆಸಿದ್ದಾರೆ. ನಂತರ, ಏಕಾಏಕಿ ಮಚ್ಚಿನಿಂದ ಫಣೀಂದ್ರ ಮೇಲೆ ಹಲ್ಲೆ ಮಾಡಿದ್ದಾರೆ. ಆಗ, ಅಲ್ಲೇ ಇದ್ದ ವಿನುಕುಮಾರ್, ಫಣೀಂದ್ರ ಅವರ ರಕ್ಷಣೆಗೆ ಮುಂದಾಗಿದ್ದಾರೆ. ಆಗ ಅವರ ಮೇಲೂ ಹಲ್ಲೆ ಮಾಡಿದ್ದಾರೆ. ಈ ವೇಳೆ ಫಣೀಂದ್ರ ಕ್ಯಾಬೀನ್​ನಲ್ಲಿ ಜೋರಾದ ಕೂಗಾಟ, ಚೀರಾಟ ಕೇಳಿದೆ. ಆಗ, ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಓಡಿ ಬಂದಿದ್ದಾರೆ. ಅಷ್ಟರಲ್ಲೇ ಆರೋಪಿಗಳು ಇನ್ನೊಂದು ಬಾಗಿಲಿನಿಂದ ಎಸ್ಕೇಪ್ ಆಗಿದ್ದಾರೆ.

ಕೂಡಲೇ ಸಂಸ್ಥೆಯ ಇತರೆ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ವಿನುಕುಮಾರ್​​ರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ರಕ್ತಸ್ರಾವ ಉಂಟಾದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾರೆ.

ಕೊಲೆ ಮಾಡಿದ ಫಿಲಿಕ್ಸ್ ಯಾರು..?

ಏರೋನಿಕ್ಸ್ ಇಂಟರ್​​ನೆಟ್ ಪ್ರೈವೇಟ್ ಸಂಸ್ಥೆಯ ಹಳೇ ನೌಕರ ಫೆಲಿಕ್ಸ್ ಅಲಿಯಾಸ್ ಜೋಕರ್ ಫಿಲಿಕ್ಸ್. ಈ ಹಿಂದೆ ಹತ್ಯೆಯಾದ ಫಣೀಂದ್ರ, ವಿನುಕುಮಾರ್ ಹಾಗೂ ಕೊಲೆ ಆರೋಪಿ ಫಿಲೀಕ್ಸ್ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬನ್ನೇರುಘಟ್ಟ ರಸ್ತೆಯಲ್ಲಿ ಇಂಟರ್​​ನೆಟ್ ಪೂರೈಸುವ ಬ್ರಾಡ್​ ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2020 ನವೆಂಬರ್​ನಲ್ಲಿ ಫಣೀಂದ್ರ, ಶ್ರೀಜಾ, ವಿನುಕುಮಾರ್ ಆ ಕಂಪನಿಯನ್ನು ಬಿಟ್ಟು ಸ್ವಂತ ಬ್ರಾಡ್​ಬ್ಯಾಂಡ್ ಕಂಪನಿ ಶುರು ಮಾಡಿದ್ದರು. ಇವರ ಕಂಪನಿ ಕೆಲವೇ ತಿಂಗಳುಗಳಲ್ಲಿ ಭಾರೀ ಹೆಸರು ಮಾಡಿಬಿಟ್ಟಿತ್ತು. ಪರಿಣಾಮ ಮೊದಲು ಇವರು ಕೆಲಸ ಮಾಡಿದ್ದ ಸಂಸ್ಥೆಗೆ ನಷ್ಟ ಕೂಡ ಆಗಿತ್ತು ಎನ್ನಲಾಗಿದೆ.

ಇದೇ ವಿಚಾರಕ್ಕೆ ಫಿಲಿಕ್ಸ್​ ಫಣೀಂದ್ರ ವಿರುದ್ಧ ಸಿಟ್ಟಿಗೆದ್ದಿದ್ದ. ಕೊಲೆ ಆರೋಪಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದ. ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ಗಳನ್ನು ಮಾಡಿ ಶೇರ್ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಮಾತ್ರವಲ್ಲ ತಾನು ಕೊಲೆ ಮಾಡಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದಾಗ, ಅದರ ಸ್ಕ್ರೀನ್​ಶಾಟ್ ತೆಗೆದು ಸ್ಟೇಟಸ್​ನಲ್ಲಿ ಹಾಕಿಕೊಂಡಿದ್ದ. ಹತ್ಯೆ ಮಾಡುವುದಕ್ಕೂ ಮೊದಲು ಕೆಟ್ಟವರನ್ನು ನಾನು ಬಿಡುವುದಿಲ್ಲ ಎಂದು ಬರೆದುಕೊಂಡಿದ್ದನಂತೆ. ಕೊಲೆಯಾದ ಫಣೀಂದ್ರ ಆರ್​​ಎಸ್​​ಎಸ್​ನಲ್ಲಿ ಸಕ್ರಿಯವಾಗಿದ್ದ. ಹಿಂದೂ ಸಂಘಟನೆಗಳ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ

ಕೊಲೆ ಪ್ರಕರಣ ಸಂಬಂಧ ಮಾಜಿ ಕಂಪನಿಯ ಮಾಲೀಕನನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್, ಹತ್ಯೆಗೆ ನಿಖರ ಕಾರಣ ಇನ್ನೂ ಗೊತ್ತಿಲ್ಲ. ಆರೋಪಿಗಳ ಪೂರ್ವಾಪರ ಮಾಹಿತಿ ಸಿಕ್ಕಿದೆ. ತನಿಖೆಗೆ ವಿಶೇಷ ತಂಡ ರಚಿಸಿ, ಕೊಲೆಯ ಹಿಂದಿನ ಸತ್ಯ ಭೇದಿಸಿ ಶಿಕ್ಷೆ ಕೊಡಿಸುತ್ತೇವೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ ಖಾಸಗಿ ಕಂಪನಿ CEO, MD ಕೊಲೆ ಕೇಸ್​.. ಹತ್ಯೆಗೈದ ಸುದ್ದಿಯ ಸ್ಟೇಟಸ್​ ಹಾಕೊಂಡು ವಿಕೃತಿ ಮೆರೆದಿದ್ದ ಆರೋಪಿ

https://newsfirstlive.com/wp-content/uploads/2023/07/BNG_MURDER.jpg

Load More