newsfirstkannada.com

ಈತ ಅಂತಿಂಥ ಹ್ಯಾಕರ್​​ ಅಲ್ಲ, ಬರೋಬ್ಬರಿ 4.16 ಕೋಟಿ ಮೌಲ್ಯದ ವಸ್ತುಗಳನ್ನು ಹ್ಯಾಕ್​ ಮಾಡಿದ್ದ ಆಸಾಮಿ! ಅರೆಸ್ಟ್ ಆಗಿದ್ದು ಹೇಗೆ ಗೊತ್ತಾ?​

Share :

12-09-2023

    ಕಾಲೇಜು ದಿನಗಳಲ್ಲೇ ಹ್ಯಾಕಿಂಗ್ ಪ್ರಾಕ್ಟಿಸ್ ಮಾಡಿದ್ದ ಆಸಾಮಿ

    ಅಮೆಜಾನ್, ಫ್ಲಿಪ್​ಕಾರ್ಟ್ ವ್ಯಾಲೆಟ್​​ನಿಂದಲೂ ಹಣ ಎಗರಿಸಿದ್ದನು

    ಹ್ಯಾಕ್​ ಮಾಡಿ ನಾಲ್ಕು ಕೋಟಿಗೂ ಅಧಿಕ ಸಂಪತ್ತು ಗಳಿಸಿಕೊಂಡಿದ್ದನು

ಬೆಂಗಳೂರು: ವೆಬ್ ಸೈಟ್ ಹ್ಯಾಕ್ ಮಾಡಿ ಕೋಟಿ ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಎಗರಿಸುತ್ತಿದ್ದ ಖತರ್ನಾಕ್ ಸೈಬರ್ ಹ್ಯಾಕರನ್ನು ಆಗ್ನೇಯ ಸೈಬರ್ ಸೆನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 4.16 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಗಟ್ಟಿ, 11 ಲಕ್ಷ ನಗದು, ಏಳು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.

ಆಂಧ್ರದ ಚಿತ್ತೂರು ಮೂಲದ ಲಕ್ಷ್ಮೀಪತಿ ಎಂಬಾತ ಈ ಖತರ್ನಾಕ್​ ಕೆಲಸ ಮಾಡುತ್ತಿದ್ದ ಆಸಾಮಿ. ಒಂಗೋಲ್ IIIT ಯಲ್ಲಿ ಬಿ.ಟೆಕ್ ಪದವಿ ಪಡೆದಿದ್ದ ಈತ ರಿವಾರ್ಡ್ಸ್ 360 ವೆಬ್ ಸೈಟ್ ಹ್ಯಾಕ್ ಮಾಡಿ ಆಭರಣಗಳನ್ನು ಎಗರಿಸಿದ್ದನು. ಕಸ್ಟಮರ್​​ಗಳಿಗೆ ಕೊಡುವ ವೋಚರ್ ಗಳನ್ನ ಹ್ಯಾಕ್ ಮಾಡಿ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದನು. ಈ ಬಗ್ಗೆ ರಿವಾರ್ಡ್ 360 ಕಂಪನಿ ನಿರ್ದೇಶಕರಿಂದ ದೂರು ದಾಖಲಾಗಿತ್ತು. ದೂರು ಪಡೆದು ತನಿಖೆ ನಡೆಸಿದ ಆಗ್ನೇಯ ಸಿಇಎನ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಲಕ್ಷ್ಮೀಪತಿ ಹ್ಯಾಕ್ ಮಾಡಿ ಬಂದಿದ್ದ ಎಲ್ಲ ಚಿನ್ನ, ಬೆಳ್ಳಿ, ಹಣವನ್ನ ಮನೆಯಲ್ಲೇ ಇಟ್ಟಿದ್ದನು ಎಂದು ಅರೆಸ್ಟ್ ಬಳಿಕ ಬಾಯಿಬಿಟ್ಟಿದ್ದಾನೆ.

ಲಕ್ಷ್ಮೀಪತಿ ದುಬೈ, ಬೆಂಗಳೂರಿನಲ್ಲೂ ಕೆಲಸ ಮಾಡಿದ್ದನು. ಕಾಲೇಜು ದಿನಗಳಲ್ಲೇ ಈ ಆರೋಪಿ ಹ್ಯಾಕಿಂಗ್ ಪ್ರಾಕ್ಟಿಸ್ ಮಾಡಿದ್ದನು. ಅಕ್ರಮ ಹ್ಯಾಕ್ ಬಗ್ಗೆ ಡೇಟಾ ಅನ್​ಲೈನ್​ ಬಗ್ಗೆ ತಿಳಿದುಕೊಂಡಿದ್ದನು.

https://x.com/DCPSEBCP/status/1701507731637846057?s=20

ಕಳೆದ ಐದು ತಿಂಗಳಿಂದ ಲಕ್ಷ್ಮೀಪತಿ ಈ ಕೃತ್ಯ ಎಸಗುತ್ತಿದ್ದು, ರಿವಾರ್ಡ್ 360 ಕಂಪನಿಯ ವೆಬ್ ಸೈಟ್ ಹಾಗೂ ಸರ್ವರ್ ಹ್ಯಾಕ್ ಮಾಡಿದ್ದನು. ಗ್ರಾಹಕರಿಗೆ ತಲುಪಬೇಕಿದ್ದ ರಿವಾರ್ಡ್ ಗಳು ಮತ್ತು ರಿವಾರ್ಡ್ ಪಾಯಿಂಟ್ಸ್ ಹ್ಯಾಕ್ ಮಾಡಿದ್ದನು. ಐದು ತಿಂಗಳಿನಲ್ಲಿ ನಾಲ್ಕು ಕೋಟಿ ಹದಿನಾರು ಲಕ್ಷ ಅರವತ್ತಮೂರು ಸಾವಿರದ ವಸ್ತುಗಳು ಹ್ಯಾಕ್ ಮಾಡಿದ್ದಾನೆ.

ಖತರ್ನಾಕ್​ ಆರೋಪಿಯಿಂದ 3.40 ಕೋಟಿ ಮೌಲ್ಯದ 5.ಕೆಜಿ ಚಿನ್ನ, 21.80 ಲಕ್ಷದ 27.250 ಕೆಜಿ ಬೆಳ್ಳಿ, 11 ಲಕ್ಷ ಹಣ ಮತ್ತು ಪ್ಲಿಪ್​ಕಾರ್ಟ್ ನ ವ್ಯಾಲೆಟ್​​ನಿಂದ ಬರೋಬ್ಬರಿ 26 ಲಕ್ಷ ಹಣ ಸೀಜ್ ಮಾಡಲಾಗಿದೆ.

ಇದರೊಂದಿಗೆ ಪೊಲೀಸರು ಅಮೆಜಾನ್ ವ್ಯಾಲೆಟ್​ನಿಂದ 3.50 ಲಕ್ಷ ನಗದು, 7 ದ್ವಿಚಕ್ರ ವಾಹನ ಸೇರಿ ಒಟ್ಟು 4.16 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಗಿಫ್ಟ್ ಐಟಂ ಸೀಜ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈತ ಅಂತಿಂಥ ಹ್ಯಾಕರ್​​ ಅಲ್ಲ, ಬರೋಬ್ಬರಿ 4.16 ಕೋಟಿ ಮೌಲ್ಯದ ವಸ್ತುಗಳನ್ನು ಹ್ಯಾಕ್​ ಮಾಡಿದ್ದ ಆಸಾಮಿ! ಅರೆಸ್ಟ್ ಆಗಿದ್ದು ಹೇಗೆ ಗೊತ್ತಾ?​

https://newsfirstlive.com/wp-content/uploads/2023/09/Lakshmipathi.jpg

Load More