ಬೆಂಗಳೂರು ಆಗ್ತಿದ್ಯಾ ಡೆಂಘೀ ಹಾಟ್ ಸ್ಪಾಟ್?
16 ದಿನಗಳಲ್ಲಿ 1,766 ಮಂದಿಗೆ ಡೆಂಘೀ ದೃಢ..!
ಆರೋಗ್ಯ ಇಲಾಖೆ ಪ್ರಕಾರ 12,693 ಮಂದಿಗೆ ಡೆಂಘೀ
ಬೆಂಗಳೂರು: ಬಿಟ್ಟು ಬಿಟ್ಟು ಜ್ವರ ಬರ್ತಾ ಇದ್ಯಾ, ಡೋಲೋ 650 ತಗೊಂಡ್ರೂ ಕಮ್ಮಿ ಆಗ್ತಾನೇ ಇಲ್ವಾ..? ಹಾಗಾದ್ರೆ ತಡ ಮಾಡ್ದೆ ಹತ್ತಿರದ ಆಸ್ಪತ್ರೆಲಿ ಬ್ಲೆಡ್ ಟೆಸ್ಟ್ ಮಾಡಿಸಿ. ಯಾಕಂದ್ರೆ ಸೈಲೆಂಟ್ ಆಗೇ ವೈಲೆಂಟ್ ಆಗ್ತಿದೆ ಡೆಂಘೀ, ಚಿಕೂನ್ ಗುನ್ಯಾ, ಯಾಮಾರಿದ್ರೆ ಕಂಟಕ ಕಟ್ಟಿಟ್ಟ ಬುತ್ತಿ..!
ಬೆಂಗಳೂರು ಆಗ್ತಿದ್ಯಾ ಡೆಂಘೀ ಹಾಟ್ ಸ್ಪಾಟ್?
ಕಳೆದೊಂದು ತಿಂಗಳಿನಿಂದ ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗ್ತಲೇ ಇದೆ. ಈ ಬಗ್ಗೆ ಎಚ್ಚರ ವಹಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಸೂಚನೆ ನೀಡಿದ್ದಾರೆ. ಡೆಂಘೀ ಕಾಟಕ್ಕೆ ಬೇಸತ್ತಿರೋ ನಗರಕ್ಕೆ ಈಗ ಚಿಕೂನ್ ಗುನ್ಯಾ ಕಾಟ ಕೂಡ ಹೆಚ್ಚಿದೆ.
ಹೆಮ್ಮಾರಿ ನರ್ತನ!
ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣ ಹೆಚ್ಚಳವಾಗಿದ್ದು, ಈ ತಿಂಗಳ 16 ದಿನದಲ್ಲಿ 1 ಸಾವಿರದ 766 ಮಂದಿಗೆ ಡೆಂಘೀ ತಗುಲಿದೆ. ಆರೋಗ್ಯ ಇಲಾಖೆ ಮಾಹಿತಿಯಂತೆ 12 ಸಾವಿರದ 693 ಮಂದಿಯಲ್ಲಿ ಡೆಂಘೀ ಪತ್ತೆಯಾಗಿದೆ. 11 ಸಾವಿರದ 367 ಮಂದಿಯ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 5,220 ಮಂದಿಯಲ್ಲಿ ಡೆಂಘೀ ಧೃಢ ಪಟ್ಟಿದೆ. ಇತ್ತ ಸದ್ದಿಲ್ಲದೇ ಚಿಕೂನ್ ಗುನ್ಯಾ ಸಂಖ್ಯೆಯೂ ಏರಿಕೆಯಾಗಿದ್ದು, 75 ಮಂದಿಗೆ ಈಗಾಗಲೇ ರಕ್ತ ಮಾದರಿ ಪರೀಕ್ಷೆ ಮಾಡಲಾಗಿದೆ. 34 ಮಂದಿಗೆ ಇದುವರೆಗೆ ಚಿಕೂನ್ ಗುನ್ಯಾ ದೃಢಪಟ್ಟಿದೆ.
ರಾಜ್ಯದಲ್ಲಿ ದಾಖಲಾದ ಡೆಂಘೀ ಪ್ರಕರಣದಲ್ಲಿ ಬಿಬಿಎಂಪಿಯದ್ದೇ ಸಿಂಹ ಪಾಲಾಗಿದೆ. ಬೊಮ್ಮನಹಳ್ಳಿ, ದಾಸರಹಳ್ಳಿ, ಮಹದೇವಪುರ, ಆರ್ಆರ್ ನಗರ, ಯಲಹಂಕದಲ್ಲಿ ಹೆಚ್ಚಾಗಿ ಡೆಂಘೀ ಪತ್ತೆಯಾಗ್ತಿದೆ. ಜ್ವರ, ನೆಗಡಿಯಂತಹ ಲಕ್ಷಣಗಳು ಕಾಣಿಸಿಕೊಂಡ್ರೆ ಎಚ್ಚರ ವಹಿಸಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ