/newsfirstlive-kannada/media/post_attachments/wp-content/uploads/2024/10/KIA_AIRPORT.jpg)
ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಮಾಂಡ್ ಸೆಂಟರ್​ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. 6 ವಿಮಾನಗಳಲ್ಲಿ 12 ಜನ ಬಾಂಬರ್​ಗಳು ಇರುವುದಾಗಿ ಅಪರಿಚತರು ಮೆಸೇಜ್ ಮಾಡಿದ್ದಾರೆ.
ಅನಾಮಧೇಯ ಟ್ವಿಟರ್ ಖಾತೆಯಿಂದ ಈ ಸಂದೇಶ ಮಾಡಲಾಗಿದೆ. ಇಂಡಿಗೋದ IX233, IX 375, IX 481, IX 383, IX 549, IX 399 ಎನ್ನುವ 6 ವಿಮಾನಗಳಲ್ಲಿ ಬಾಂಬರ್​ಗಳು ಇರುವುದಾಗಿ ಬೆದರಿಕೆ ಹಾಕಲಾಗಿದೆ. ಅಲ್ಲದೇ ಒಂದೊಂದು ವಿಮಾನಗಳಲ್ಲಿ ಇಬ್ಬರು ಇರುವಂತೆ ಒಟ್ಟು 12 ಮಂದಿ ಬಾಂಬರ್​ಗಳು ಇರುವುದಾಗಿ ಎಕ್ಸ್​ ಅಕೌಂಟ್​ ಮೂಲಕ ಆಗಂತುಕರು ಮೆಸೇಜ್ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/10/KIA_AIRPORT_1.jpg)
ಮಂಗಳೂರು- ದುಬೈ, ತಿರುವನಂತಪುರಂ- ಮಸ್ಕಟ್ ಸೇರಿದಂತೆ ಭಾರತದ ವಿವಿಧ ಏರ್​ಪೋರ್ಟ್​​ಗಳಿಂದ ತೆರಳುವ ವಿಮಾನಗಳು. ಕಳೆದ ಒಂದು ವಾರದಿಂದ ಕೆಂಪೇಗೌಡ ಏರ್​ಪೋರ್ಟ್​ಗೆ ಇದು 2ನೇ ಬಾರಿಗೆ ಹುಸಿ ಬಾಂಬ್ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಏರ್​ಪೋರ್ಟ್​ ಅಧಿಕಾರಿಗಳು ಹಾಗೂ ಭದ್ರತಾ ಪಡೆಯಿಂದಲೂ ಹೈಅಲರ್ಟ್ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us