newsfirstkannada.com

ಎಣ್ಣೆ ಏಟಲ್ಲಿ ಚುಚ್ಚೇ ಬಿಟ್ಟ.. ಸತ್ತ ಸುದ್ದಿ ಕೇಳಿ ಕಾಲ್ಕಿತ್ತ.. ನವರಂಗಿ ನಾಟಕವಾಡಿದ್ದ ಕ್ಯಾಬ್ ಡ್ರೈವರ್​ ಅರೆಸ್ಟ್​

Share :

11-11-2023

  ರಾಜ್​ ಕುಮಾರ್​ನನ್ನು ಚಾಕು ಇರಿದು ಕೊಂದ ಸ್ನೇಹಿತ ಮಾದೇಶ

  ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

  ಅಪರಿಚಿತರು ಕೃತ್ಯವೆಸಗಿದ್ದಾಗಿ ಹೇಳಿ ಕಥೆ ಕಟ್ಟಿದ್ದ ಖತರ್ನಾಕ್ ಕ್ಯಾಬ್​ ಡ್ರೈವರ್

ಬೆಂಗಳೂರು: ಕುಡಿದ ಮತ್ತಿನಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಕೆಂಗೇರಿಯಲ್ಲಿ ನಡೆದಿದೆ. ಗೆಳೆಯನಿಗೆ ಚಾಕು ಇರಿದು ನಾಟಕವಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾದೇಶ್ ಬಂಧಿತ ಆರೋಪಿ.

ಇದೇ ತಿಂಗಳ 5ರಂದು ಕೆಂಗೇರಿಯಲ್ಲಿ ಕೊಲೆಯೊಂದು ನಡೆದಿತ್ತು. ಕೊಲೆಯಾದ ರಾಜಕುಮಾರ್​ ಮತ್ತು ಮಾದೇಶ್ ಇಬ್ಬರು ಸ್ನೇಹಿತರಾಗಿದ್ದು, ವೃತ್ತಿಯಲ್ಲಿ ಇಬ್ಬರು ಕ್ಯಾಬ್ ಚಾಲಕರಾಗಿದ್ದರು.

ಎಣ್ಣೆ ಏಟಲ್ಲಿ ಕೊಂದೇ ಬಿಟ್ಟ

ಎಣ್ಣೆ ಹೊಡೆಯಲೆಂದು ರಾಜಕುಮಾರ್​ ಮತ್ತು ಮಾದೇಶ್ ಮೀಟ್ ಆಗಿದ್ದು, ಅಂಗಡಿಯಲ್ಲಿ ಎಣ್ಣೆ ಖರೀದಿಸಿ ನಿರ್ಜನ ಪ್ರದೇಶಕ್ಕೆ ತೆರಳಿ ಮದ್ಯಸೇವನೆ ಮಾಡಿದ್ದರು. ಈ ವೇಳೆ ಶುರುವಾದ ಜಗಳದಲ್ಲಿ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆಯಾದ ರಾಜ್​ ಕುಮಾರ್
ಕೊಲೆಯಾದ ರಾಜ್​ ಕುಮಾರ್

ರಾಜುಕುಮಾರ್​ನ ಕೊಂದು ಕಥೆ ಕಟ್ಟಿದ್ದ

ಕುಡಿದ ಮತ್ತಿನಲ್ಲಿ ರಾಜಕುಮಾರ್ ಸ್ನೇಹಿತ ಮಾದೇಶನ ಕುಟುಂಬ ಹಾಗೂ ಮಕ್ಕಳ ಬಗ್ಗೆ ನಿಂದಿಸಿದ್ದನು. ಈ ವೇಳೆ ಮಾದೇಶ ತನ್ನ ಕಾರ್ ನಲ್ಲಿದ್ದ ಚಾಕುವಿನಿಂದ ರಾಜ್​ಕುಮಾರ್​ ಎದೆ ಭಾಗಕ್ಕೆ ಇರಿದಿದ್ದಾನೆ. ಚಾಕುವಿನಿಂದ ಚುಚ್ಚಿ ತಾನೇ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಬಳಿಕ ರಾಜ್​ಕುಮಾರ್​​ ಸಂಬಂಧಿಕರಿಗೆ ಸುದ್ದಿ ತಿಳಿಸಿ ಯಾರೋ ಅಪರಿಚಿತರು ಕೃತ್ಯವೆಸಗಿದ್ದಾಗಿ ಹೇಳಿದ್ದಾನೆ. ಆಸ್ಪತ್ರೆ ಬಳಿ ಆತನ ಸಾವಿನ ಸುದ್ದಿ ಗೊತ್ತಾಗುತ್ತಿದ್ದಂತೆ ಅಲ್ಲಿಂ ಮಾದೇಶ  ಪರಾರಿಯಾಗಿದ್ದಾನೆ.

ರಾಜ್​ ಕುಮಾರ್​ ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೆಂಗೇರಿ ಪೊಲೀಸರು. ನಾಪತ್ತೆಯಾಗಿದ್ದ ಮಾದೇಶನ ಬಂಧಿಸಿದ್ದಾರೆ. ಬಳಿಕ ತನಿಕೆ ನಡೆಸಿದ್ದಾರೆ. ಈ ವೇಳೆ ಅಸಲಿ ಸಂಗತಿ ಬಯಲಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಣ್ಣೆ ಏಟಲ್ಲಿ ಚುಚ್ಚೇ ಬಿಟ್ಟ.. ಸತ್ತ ಸುದ್ದಿ ಕೇಳಿ ಕಾಲ್ಕಿತ್ತ.. ನವರಂಗಿ ನಾಟಕವಾಡಿದ್ದ ಕ್ಯಾಬ್ ಡ್ರೈವರ್​ ಅರೆಸ್ಟ್​

https://newsfirstlive.com/wp-content/uploads/2023/11/Rajkumar.jpg

Load More