ಲೂಡೋ ಗೇಮ್ ಚಟಕ್ಕೆ ಬಿದ್ದ ಮಹಿಳೆ
ಚಿನ್ನಾಭರಣ ಮಾರಿ, ಸಾಲ ಮಾಡಿದ್ದ ಲೂಡೋ ಪ್ರಿಯೆ
ಕ್ಷಮಿಸಿ ಬಿಡಿ ಎಂದು ಪತ್ರ ಬರೆದು 2 ಮಕ್ಕಳ ಜೊತೆಗೆ ನಾಪತ್ತೆ
ಆನ್ಲೈನ್ ಲೂಡೋ ಗೇಮ್ ವಟಕ್ಕೆ ಬಿದ್ದ ಮಹಿಳೆಯೊಬ್ಬಳು ಬರೋಬ್ಬರಿ 4.6 ಲಕ್ಷ ರೂಪಾಯಿ ಸಾಲ ಮಾಡಿದ ಘಟನೆ ಮಹಾಲಕ್ಷ್ಮೀ ಲೇಔಟ್ನಲ್ಲಿ ನಡೆದಿದೆ. 26 ವರ್ಷದ ಮಹಿಳೆ ವಿಷರೀತ ಆನ್ಲೈನ್ ಗೇಮ್ಗೆ ಬೇಸತ್ತು ತನ್ನ ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾಳೆ.
ಮಹಿಳೆ ಆನ್ಲೈನ್ ಲೂಡೋ ಗೇಮ್ ದಾಸಲಾಗಿದ್ದಳು. ಹೀಗಾಗಿ ಲಕ್ಷಾಂತರ ರೂಪಾಯಿ ಲೂಡೋ ಆಟದಾಸೆದಿಂದ ಸಾಲ ಮಾಡಿಕೊಂಡಿದ್ದಾಳೆ. ಕೊನೆಗೆ ತನ್ನ ಏಳು ವರ್ಷದ ಮತ್ತು ಒಂದು ವರ್ಷದ ಮಗುವಿನೊಂದಿಗೆ ಮನೆಬಿಟ್ಟು ಹೋಗಿದ್ದಾಳೆ. ಪತ್ನಿ ಮತ್ತು ಮಕ್ಕಳು ಮನೆ ತೊರೆದಿರುವ ಬಗ್ಗೆ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾನೆ. ಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಚಿನ್ನಾಭರಣ ಅಡವಿಟ್ಟ ಮಹಿಳೆ
ಗಂಡ-ಹೆಂಡತಿ ಮದುವೆಯಾಗಿ 7 ವರ್ಷಗಳಾಗಿತ್ತು. ಆದರೆ ಬರುಬರುತ್ತಾ ಹೆಂಡತಿಗೆ ಆನ್ಲೈನ್ ಲೂಡೋ ಗೇಮ್ ಗೀಳು ಬೆಳೆಯಿತು. ಹೀಗಾಗಿ ನಿತ್ಯವು ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದಳು. 1 ವರ್ಷದಿಂದ ನಿರಂತರವಾಗಿ ಲೂಡೋ ಗೇಮ್ ಆಡುತ್ತಿದ್ದಳು. ಪ್ರಾರಂಭದಲ್ಲಿ ಅದರಿಂದ ಆದ ಸಾಲವನ್ನು ತೀರಸಿಲು ಚಿನ್ನಾಭರಣ ಅಡವಿಟ್ಟಿದ್ದಾಳೆ ಮತ್ತು ಸಂಬಂಧಿಕರ ಬಳಿ ಸಾಲ ಮಾಡಿದ್ದಾಳೆ.
‘ಇನ್ನೂ ಹೀಗೆ ಮಾಡೊಲ್ಲ’
ಮೊದಲಿಗೆ ಮಹಿಳೆ 3,45,000 ಹಣದಿಂದ ಲೂಡೋ ಗೇಮ್ ಅಡಿದ್ದಾಳೆ. ಈ ವಿಚಾರ ಗಂಡನಿಗೆ ತಿಳಿಯುತ್ತಿದ್ದಂತೆ ಆತ ಆಕೆಯ ತಂದೆ ತಾಯಿಗೆ ತಿಳಿಸಿದ್ದಾನೆ. ಬಳಿಕ ಅವರು ಕೂಡ ಮಗಳಿಗೆ ಬುದ್ಧಿ ಮಾತು ಹೇಳಿದ್ದಾರೆ. ಅಪ್ಪ-ಅಮ್ಮನ ಬುದ್ಧಿ ಮಾತನ್ನ ಕೇಳಿದ ಮಗಳು ಇನ್ನೂ ಹೀಗೆ ಮಾಡೊಲ್ಲ ಎಂದು ಹೇಳಿದ್ದಾಳೆ.
‘ಈ ಲಾಸ್ ನನ್ನಿಂದ ಆಗಿರೋದಲ್ಲ’
ಇಷ್ಟಾದ ಬಳಿಕ ಮಹಿಳೆ ನನ್ನನ್ನು ಕ್ಷಮಿಸಿ ಎಂದು ಪತ್ರ ಬರೆದಿಟ್ಟು ಮಕ್ಕಳನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾಳೆ. ಪತ್ರದಲ್ಲಿ ಈ ಲಾಸ್ ನನ್ನಿಂದ ಆಗಿರೋದಲ್ಲ ಎಂದು ಪತ್ರ ಬರೆದಿಟ್ಟು ತೆರಳಿದ್ದಾಳೆ. ಸದ್ಯ ಮಹಾಲಕ್ಷೀಪುರಂ ಪೊಲೀಸ್ ಠಾಣೆ ಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ