ಪತ್ನಿಯೂ ಇದ್ದಾಳೆ, ಮಕ್ಕಳೂ ಇದ್ದಾರೆ, ಯಾರಿಗೂ ಗೊತ್ತಿಲ್ಲ!
ಐಷಾರಾಮಿ ಜೀವನಕ್ಕಾಗಿ ಕೀಳುಮಟ್ಟಕ್ಕೆ ಇಳಿದಿದ್ದ ಕಿಲಾಡಿ
ಮನೆಯವರ ಕಣ್ಣು ತಪ್ಪಿಸಲು ಅವನ ಪ್ಲಾನ್ ಹೇಗಿತ್ತು..?
ಬೆಂಗಳೂರು: ‘ಮನೆಯಲ್ಲಿ ಗಂಡು.. ಬೀದಿಯಲ್ಲಿ ಹೆಣ್ಣು!’ ಐಷಾರಾಮಿ ಜೀವನಕ್ಕಾಗಿ ಹೆಣ್ಣಿನ ವೇಷ ಹಾಕಿ ನಗರದ ಜನರನ್ನು ಮತ್ತು ಮನೆಯವರನ್ನು ಯಾಮಾರಿಸುತ್ತಿದ್ದ ಐನಾತಿಯೊಬ್ಬನ ನಿಜ ಬಣ್ಣ ಬಯಲಾಗಿದೆ. ಬಾಗಲಗುಂಟೆ ಠಾಣೆ ವ್ಯಾಪ್ತಿಯ ಚೇತನ್ ವಿರುದ್ಧ ಕಳ್ಳಾಟ ನಡೆಸುತ್ತಿದ್ದ ಆರೋಪ ಕೇಳಿಬಂದಿದೆ.
ಈತನ ಮೇಲಿರೋ ಆರೋಪಗಳು ಏನು..?
ಹೆಂಡತಿ ಮಕ್ಕಳಿದ್ದರೂ ಬೀದಿಯಲ್ಲಿ ಮಂಗಳಮುಖಿಯರ ಮಾರುವೇಷದಲ್ಲಿ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯ ಅಸಲಿ ಗುಣ ಗೊತ್ತಾಗಿದ್ದು ಸ್ಥಳೀಯರ ಜೊತೆ ನಡೆದ ಒಂದು ಸಣ್ಣ ಗಲಾಟೆಯಲ್ಲಿ! ಹಣ ಮಾಡುವುದಕ್ಕಾಗಿಯೇ ಮಂಗಳಮುಖಿಯರ ಜೊತೆ ಸಲುಗೆ ಬೆಳೆಸಿಕೊಂಡು, ಅವರ ಜೊತೆ ನಾಗಸಂದ್ರ ಮೆಟ್ರೋ ನಿಲ್ದಾಣದ ಭಿಕ್ಷೆ ಎತ್ತುತ್ತಿದ್ದ ಎನ್ನಲಾಗಿದೆ. ಇನ್ನು, ಹಣ ಕೊಡದಿದ್ರೆ ಬೆದರಿಕೆ ಹಾಕಿ, ಸುಲಿಗೆ ಮಾಡ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಸಿಕ್ಕಿಬಿದ್ದಿದ್ದು ಹೇಗೆ..?
ಆರೋಪಿ, ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಇರುವ BMRCL ಜಾಗದಲ್ಲಿ ಶೆಡ್ ನಿರ್ಮಿಸಲು ಮುಂದಾಗಿದ್ದ. ಈ ಬಗ್ಗೆ ಅಧಿಕಾರಿಗಳು, ಸ್ಥಳೀಯರು ಪರಿಶೀಲನೆಗೆ ಹೋದಾಗ ಗಲಾಟೆ ನಡೆದಿದೆ. ಗಲಾಟೆ ವೇಳೆ ಸ್ಥಳೀಯ ಮಹಿಳೆಯರ ಸೀರೆ ಎಳೆದಾಡಿ ವಿಕೃತಿ ಮೆರೆಯಲು ಮುಂದಾಗಿದ್ದನಂತೆ. ಆಗ ಆರೋಪಿಯನ್ನು ಸ್ಥಳೀಯರು ಹಿಡಿದು ಥಳಿಸಲು ಮುಂದಾಗಿದ್ದಾರೆ. ಈ ವೇಳೆ ‘ಅವಳು ಅವಳಲ್ಲ, ಅವನು’ ಅನ್ನೋದು ಗೊತ್ತಾಗಿದೆ.
ಪತ್ನಿ, ಮಕ್ಕಳು ಇದ್ದಾರೆ
ಚೇತ್ನಗೆ ಪತ್ನಿ, ಮಕ್ಕಳಿದ್ದಾರೆ. ಪತಿ, ಮಕ್ಕಳ ಜೊತೆ ಈತ ಐಷಾರಾಮಿ ಜೀವನ ನಡೆಸುತ್ತಿದ್ದ. ಐಷಾರಾಮಿ ಜೀವನಕ್ಕಾಗಿಯೇ ಈ ದಂಧೆಗೆ ಇಳಿದಿದ್ದ. ಮನೆಯಲ್ಲಿ ವಿಷಯ ಗೊತ್ತಾಗಬಾರದು ಅಂತಾ ನಗರದಲ್ಲಿ ಪ್ರತ್ಯೇಕ ರೂಮ್ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಬಾಗಲಗುಂಟೆ ಪೊಲೀಸರು ಆರೋಪಿ ಚೇತನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ