newsfirstkannada.com

ಬೆಂಗಳೂರಿಗರೇ ಎಚ್ಚರ! ರಾತ್ರಿ ಒಬ್ಬರೇ ಓಡಾಡ್ಬೇಡಿ; ಸಿಟಿಗೆ ಮತ್ತೆ ಎಂಟ್ರಿ ಕೊಟ್ಟಿದೇ ಆ ಗ್ಯಾಂಗ್!​

Share :

15-07-2023

  ಎಚ್ಚರ.. ನಗರಕ್ಕೆ ಮತ್ತೆ ಎಂಟ್ರಿ ಕೊಟ್ಟಿದೆ 'ಈ' ಗ್ಯಾಂಗ್!

  ಭಯಂಕರ.. ಅತಿ ಭಯಂಕರವಾಗಿದೆ ಈ ಚಡ್ಡಿ ಗ್ಯಾಂಗ್!

  5 ಜನ.. ಕೈಯಲ್ಲಿ ಮಾರಾಕಾಸ್ತ್ರ.. ಮಾಡೋದು ರಾಬರಿ!

ಬೆಂಗಳೂರು: ಮೊನ್ನೆ ಮೊನ್ನೆಯಷ್ಟೆ ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ಗುಂಡು ಸದ್ದು ಮಾಡಿತ್ತು. ನಗರದಲ್ಲಿದ್ದ ರೌಡಿ ಶೀಟರ್​ಗಳಿಗೆ, ರಾಬರ್ಸ್​ಗೆ ನಡುಕ ಶುರುವಾಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ನಗರದಲ್ಲಿ ಮತ್ತೆ ತಲೆ ಎತ್ತಿದೆ ಆ ಭಯಂಕರ ಗ್ಯಾಂಗ್. ನಗರದ ಬೀದಿ ಬೀದಿಗಳಲ್ಲಿ ಸಂಚಾರ ಮಾಡುತ್ತಿದೆ ಅದೊಂದು ವಿಚಿತ್ರ ಗ್ಯಾಂಗ್.

ಗ್ಯಾಂಗ್​ನಲ್ಲಿ 5 ಜನ ಖತರ್ನಾಕ್ ಖದೀಮರಿದ್ದಾರೆ. ಒಬ್ಬ ವಾಚ್ ಮಾಡ್ತಾನೆ. ಮತ್ತೊಬ್ಬ ಮನೆ ಕಾಯುತ್ತಾನೆ. ಹೀಗೆ ಉಳಿದ ಮೂವರು ಮನೆಗೆ ಕನ್ನ ಹಾಕುತ್ತಾರೆ. ಸಾಮಾನ್ಯವಾಗಿ ಈ ಗ್ಯಾಂಗ್ ಹೈಟೆಕ್ ಏರಿಯಾಗಳನ್ನ ಟಾರ್ಗೆಟ್ ಮಾಡುತ್ತೆ. ಈ ಚಡ್ಡಿ ಗ್ಯಾಂಗ್ ಸಾಮಾನ್ಯವಾದ ಗ್ಯಾಂಗ್​ ಅಲ್ಲ. ಅತೀ ಭಯಂಕರವಾದ ಗ್ಯಾಂಗ್. ಇದೀಗ ಈ ಗ್ಯಾಂಗ್ ಮತ್ತೆ ಸಿಲಿಕಾನ್ ಸಿಟಿಯಲ್ಲಿ ತಲೆ ಎತ್ತಿದೆ. ಅದಕ್ಕೆ ಸಿಸಿಟಿವಿ ದೃಶ್ಯಗಳೇ ಸಾಕ್ಷಿಯಾಗಿದೆ.

ನಗರದ ಹೊರವಲಯದ ಸುತ್ತಾಮುತ್ತಾ ಈ ಗ್ಯಾಂಗ್ ಕಳೆದ ಮೂರ್ನಾಲ್ಕು ದಿನಗಳಿಂದ ಆ್ಯಕ್ಟೀವ್ ಆಗಿದೆ. ಸರ್ಜಾಪುರ ರಸ್ತೆಯ ಗುಟ್ಟಹಳ್ಳಿ, ದೊಡ್ಡ ತಿಮ್ಮಸಂದ್ರದ ಅಪಾರ್ಟ್​ಮೆಂಟ್ ಹಾಗೂ ವಿಲ್ಲಾಗಳಲ್ಲಿ ರಾತ್ರಿ ವೇಳೆ ಕಳ್ಳತನಕ್ಕೆ ಪ್ರಯತ್ನ ನಡೆದಿದೆ. ಸಿಸಿಟಿವಿಯಲ್ಲಿ ನೋಡಿದ ಅಪಾರ್ಟ್​ಮೆಂಡ್ ನಿವಾಸಿಗಳು ಅಲರ್ಟ್​ ಆಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಟ್ಟಾರೆ, ಘಟನೆ ಬಳಿಕ ಎಚ್ಚೆತ್ತ ಪೊಲೀಸರು ಈ ಗ್ಯಾಂಗ್ ಹಿಂದೆ ಬಿದ್ದಿದ್ದಾರೆ. ಚಾಲಾಕಿ ಖದೀಮರು ಪೊಲೀಸರ ಬಲೆಗೆ ಬೀಳ್ತಾರೆ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರೇ ಎಚ್ಚರ! ರಾತ್ರಿ ಒಬ್ಬರೇ ಓಡಾಡ್ಬೇಡಿ; ಸಿಟಿಗೆ ಮತ್ತೆ ಎಂಟ್ರಿ ಕೊಟ್ಟಿದೇ ಆ ಗ್ಯಾಂಗ್!​

https://newsfirstlive.com/wp-content/uploads/2023/07/chaddi-ganga-1.jpg

Load More