newsfirstkannada.com

ರೇಣುಕಾಸ್ವಾಮಿ ಕೊಲೆ ರಹಸ್ಯ ಬಯಲು; ಹೊರಬಿತ್ತು ದರ್ಶನ್​ ಗ್ಯಾಂಗಿನ ಅಸಲಿ ಮುಖವಾಡ!

Share :

Published June 18, 2024 at 7:40pm

    ದರ್ಶನ್ ಗ್ಯಾಂಗ್​​ನಿಂದ ರೇಣುಕಾಸ್ವಾಮಿ ಹತ್ಯೆ ಕೇಸ್..!

    17 ಆರೋಪಿಗಳ ಅರೆಸ್ಟ್​​; ಪೊಲೀಸರು ತೀವ್ರ ವಿಚಾರಣೆ

    ಪೊಲೀಸರ ಖಡಕ್​ ತನಿಖೆ.. ಕೊಲೆ ಹಿಂದಿನ ರಹಸ್ಯ ಬಯಲು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗಿರುವ ದರ್ಶನ್​ ಮತ್ತು ಡಿ-ಗ್ಯಾಂಗ್​ನ ಅಸಲಿ ಮುಖವಾಡ ಬಯಲಾಗುತ್ತಿದೆ. ಈ ಕೊಲೆ ಕೇಸ್​ನಲ್ಲಿ ಇದುವರೆಗೆ 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಕಾಸ್ವಾಮಿಯನ್ನು ಹೇಯವಾಗಿ ದೌರ್ಜನ್ಯದಿಂದ ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲಿದೆ ಎಂದು ಬೆಂಗಳೂರು ಪೊಲೀಸ್​ ಕಮಿಷನರ್​ ಭರವಸೆ ಕೊಟ್ಟಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಇದೊಂದು ಹೇಯ ಕೃತ್ಯ ಎಂದು ಪೊಲೀಸ್​ ಆಯುಕ್ತರೇ ಹೇಳ್ತಿದ್ದಾರೆ. ಮನುಷ್ಯ ರೂಪದ ನರರಾಕ್ಷಸ ಡಿ ಗ್ಯಾಂಗ್​ ಎಷ್ಟು ಭಯಾನಕವಾಗಿ ಕೊಂದಿದೆ ಅನ್ನೋದನ್ನು ಊಹಿಸಿಕೊಂಡ್ರೆ, ಒಂದು ಕ್ಷಣ ಎದೆ ಝಲ್ ಎನ್ನುತ್ತೆ.

ಇನ್ನು, ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬಿಚ್ಚಿಳೀಸಿದೆ. ಸ್ಟಾರ್​ ನಟನ ಕ್ರೂರತ್ವದ ಬಗ್ಗೆ ಒಂದೊಂದೇ ವಿಷ್ಯಗಳ ಹೊರಗೆ ಬರುತ್ತಿದ್ದು, ರೇಣುಕಾಸ್ವಾಮಿ ಹಂಕತರಿಗೆ ತಕ್ಕ ಶಿಕ್ಷೆ ಆಗಲೇ ಬೇಕು ಅನ್ನೋದು ಕರುನಾಡಿನ ಜನತೆಯ ಕೂಗು. ಅದೇ ನಿಟ್ಟಿನಲ್ಲಿ ಪೊಲೀಸರು ಕೂಡ ಕಾರ್ಯ ನಿರತರಾಗಿದ್ದಾರೆ. ಇದುವರೆಗೆ ಈ ಕೇಸ್​ನಲ್ಲಿ 17 ಮಂದಿ ಅರೆಸ್ಟ್​ ಆಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

10 ಜನರನ್ನ ಸಾಕ್ಷಿಯಾಗಿ ಪರಿಗಣಿಸಲು ಮುಂದಾದ ಪೊಲೀಸರು

ರೇಣುಕಾಸ್ವಾಮಿ ಪ್ರಕರಣದಲ್ಲಿ ಪೊಲೀಸರು ಬರೊಬ್ಬರಿ 27 ಮಂದಿಯನ್ನ ಇದುವರೆಗೂ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪೈಕಿ 10 ಜನರನ್ನ ಸಾಕ್ಷಿಯಾಗಿನ್ನಾಗಿ ಪರಿಗಣಿಸಲು ಮುಂದಾಗಿದ್ದಾರೆ. ನಟ ದರ್ಶನ್​ ಪಟ್ಟಣಗೆರೆ ಶೆಡ್​ಗೆ ಹೋಗೋದಕ್ಕೂ ಮುನ್ನ, ಸ್ಟೋನಿ ಬ್ರೋಕ್​ ರೆಸ್ಟೋರೆಂಟ್​ನಲ್ಲಿ ವಿವಿಧ ಕಲಾವಿದ ಜೊತೆ ಪಾರ್ಟಿ ನಡೆಸಿದ್ದರು. ಅದರಲ್ಲಿ ಹಾಸ್ಯಸಟ ಚಿಕ್ಕಣ್ಣ ಕೂಡ ಪಾಲ್ಗೊಂಡಿದ್ದರು. ಹೀಗಾಗಿ ಪೊಲೀಸರು ಹಾಸ್ಯನಟ ಚಿಕ್ಕಣ್ಣರನ್ನು ವಿಚಾರಣೆ ನಡೆಸಿದ್ದಾರೆ. ಇನ್ನು ಶೆಡ್​ನ ಮಾಲೀಕ ಜಯಣ್ಣರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಸದ್ಯ ಈ ಇಬ್ಬರನ್ನೂ ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಪರಿಗಣಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ: ಕೊಲೆಗೆ ಮುನ್ನ ದರ್ಶನ್​ ಗ್ಯಾಂಗ್​ ಕೊಟ್ಟ ಹಿಂಸೆ ಬಗ್ಗೆ ಸತ್ಯ ಬಿಚ್ಚಿಟ್ಟ ರೇಣುಕಾಸ್ವಾಮಿ ತಂದೆ.. ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ರಹಸ್ಯ ಬಯಲು; ಹೊರಬಿತ್ತು ದರ್ಶನ್​ ಗ್ಯಾಂಗಿನ ಅಸಲಿ ಮುಖವಾಡ!

https://newsfirstlive.com/wp-content/uploads/2024/06/darshan23.jpg

Load More