newsfirstkannada.com

ದರ್ಶನ್​​ ಗ್ಯಾಂಗ್​​ಗೆ ಕಮಿಷನರ್​​ ಖಡಕ್​ ವಾರ್ನಿಂಗ್​​.. ಕೊಲೆ ಕೇಸಲ್ಲಿ ಇವರೇ ಪ್ರಮುಖ ಸಾಕ್ಷಿಗಳು!

Share :

Published June 18, 2024 at 8:46pm

Update June 18, 2024 at 8:49pm

    ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿದ ನಟ ದರ್ಶನ್​​ ತೂಗುದೀಪ

    ಕೊಲೆ ಪ್ರಕರಣದಲ್ಲಿ 10 ಜನರನ್ನ ಸಾಕ್ಷಿಯಾಗಿ ಪರಿಗಣಿಸಿದ ಪೊಲೀಸರು!

    ಡಿಸಿಪಿ ಗಿರೀಶ್​ ಹೆಗಲಿಗೆ ನಟ ದರ್ಶನ್​​​ ಗ್ಯಾಂಗ್​​ ಕೇಸ್​​ ಮೇಲುಸ್ತುವಾರಿ

ಬೆಂಗಳೂರು: ನಟಿ ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್​ ಮಾಡಿದ್ದ ಕೇಸಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ. ಈ ಕೇಸಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್​ ಜೈಲು ಸೇರಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್​ ಕಮಿಷನರ್​ ಬಿ. ದಯಾನಂದ್ ಮಾತಾಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಇದೊಂದು ಹೇಯ ಕೃತ್ಯ, ಎಲ್ಲರಿಗೂ ಶಿಕ್ಷೆಯಾಗಲಿದೆ ಎಂದಿದ್ದಾರೆ.

10 ಜನರನ್ನ ಸಾಕ್ಷಿಯಾಗಿ ಪರಿಗಣಿಸಲು ಮುಂದಾದ ಪೊಲೀಸರು

ರೇಣುಕಾಸ್ವಾಮಿ ಪ್ರಕರಣದಲ್ಲಿ ಪೊಲೀಸರು ಬರೊಬ್ಬರಿ 27 ಮಂದಿಯನ್ನ ಇದುವರೆಗೂ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪೈಕಿ 10 ಜನರನ್ನ ಸಾಕ್ಷಿಯಾಗಿನ್ನಾಗಿ ಪರಿಗಣಿಸಲು ಮುಂದಾಗಿದ್ದಾರೆ. ನಟ ದರ್ಶನ್​ ಪಟ್ಟಣಗೆರೆ ಶೆಡ್​ಗೆ ಹೋಗೋದಕ್ಕೂ ಮುನ್ನ, ಸ್ಟೋನಿ ಬ್ರೋಕ್​ ರೆಸ್ಟೋರೆಂಟ್​ನಲ್ಲಿ ವಿವಿಧ ಕಲಾವಿದ ಜೊತೆ ಪಾರ್ಟಿ ನಡೆಸಿದ್ದರು. ಅದರಲ್ಲಿ ಹಾಸ್ಯಸಟ ಚಿಕ್ಕಣ್ಣ ಕೂಡ ಪಾಲ್ಗೊಂಡಿದ್ದರು. ಹೀಗಾಗಿ ಪೊಲೀಸರು ಹಾಸ್ಯನಟ ಚಿಕ್ಕಣ್ಣರನ್ನು ವಿಚಾರಣೆ ನಡೆಸಿದ್ದಾರೆ. ಇನ್ನು ಶೆಡ್​ನ ಮಾಲೀಕ ಜಯಣ್ಣರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಸದ್ಯ ಈ ಇಬ್ಬರನ್ನೂ ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಪರಿಗಣಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ಡಿಸಿಪಿ ಗಿರೀಶ್​ ಹೆಗಲಿಗೆ ಪ್ರಕರಣದ ಸಂಪೂರ್ಣ ಮೇಲುಸ್ತುವಾರಿ

ಪೊಲೀಸರು ಸ್ವಲ್ಪ ಮೈರೆತಿದ್ದರೂ, ರೇಣುಕಾಸ್ವಾಮಿ ಕೊಲೆ ಪ್ರಕರಣ, ಹತ್ತರಲ್ಲಿ ಹನ್ನೊಂದು ಆಗೋತ್ತಿತ್ತು. ಆದ್ರೆ ಪೊಲೀಸರ ಖಡಕ್​ ತನಿಖೆಯಿಂದ ರೇಣುಕಾಸ್ವಾಮಿ ಕೊಲೆ ಹಿಂದಿನ ಅಸಲಿ ರಹಸ್ಯಗಳ ಹೊರಗೆ ಬರುತ್ತಿವೆ. ಈ ಮಧ್ಯೆ ಆರಂಭದಲ್ಲಿ ತನಿಖೆ ನಡೆಸುತ್ತಿದ್ದ ಡಿಸಿಪಿ ಗಿರೀಶ್​ ಅವರನ್ನು ಬದಲಾವಣೆ ಮಾಡಲಾಗಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದ್ರೀಗ ಇಡೀ ಪ್ರಕರಣದ ಮೇಲುಸ್ತುವಾರಿಯನ್ನೇ ಡಿಸಿಪಿ ಗಿರೀಶ್​ ಅವರಿಗೆ ಒಪ್ಪಿಸಲಾಗಿದೆ. ಪ್ರಕರಣ ತನಿಖಾ ಹಂತದಲ್ಲಿ ಇರೋದ್ರಿಂದ ವಿಚಾರ ಬಹಿರಂಗ ಪಡಿಸಲು ಆಯುಕ್ತರು ನಿರಾಕರಿಸಿದ್ದಾರೆ. ಆದ್ರೆ ಇದೊಂದು ಹೇಯ ಕೃತ್ಯ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ನಿಟ್ಟಿದಲ್ಲಿ ಪೊಲೀಸರು ತನಿಖೆ ಮಾಡ್ತಿದ್ದಾರೆ ಎಂದಿದ್ದಾರೆ.

ಒಟ್ಟಾರೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರ ಧೈರ್ಯ ಮತ್ತು ಕಾರ್ಯವನ್ನು ಮೆಚ್ಚಲೇಬೇಕು. ಆದಷ್ಟು ಬೇಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಸಾಕ್ಷ್ಯಗಳನ್ನು ಕಲೆ ಹಾಕಿ, ಈ ಡೇಂಜರಸ್​ ಗ್ಯಾಂಗ್​ಗೆ ಪರಪ್ಪನ ಅಗ್ರಹಾರದ ದಾರಿಯನ್ನ ತೋರಿಸಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​​ ಗ್ಯಾಂಗ್​​ಗೆ ಕಮಿಷನರ್​​ ಖಡಕ್​ ವಾರ್ನಿಂಗ್​​.. ಕೊಲೆ ಕೇಸಲ್ಲಿ ಇವರೇ ಪ್ರಮುಖ ಸಾಕ್ಷಿಗಳು!

https://newsfirstlive.com/wp-content/uploads/2024/06/darshan-and-vinay.jpg

Load More