newsfirstkannada.com

ಬಿಗಿಯಾಯ್ತು ಕಾನೂನಿನ ಕುಣಿಕೆ.. ದರ್ಶನ್‌ಗೆ ಬೇಲ್ ಸಿಗದಂತೆ ಮಾಡುತ್ತಾ ಈ 15 ಕಾರಣ; ಏನವು?

Share :

Published June 21, 2024 at 10:34pm

Update June 21, 2024 at 10:38pm

  ಯಾವುದೇ ಕಾರಣಕ್ಕೂ ಬೇಲ್​ ನೀಡದಂತೆ ಪೊಲೀಸರ ಪಟ್ಟು

  ರಿಮಾಂಡ್‌ ಅರ್ಜಿಯಲ್ಲೇ ಸ್ಫೋಟಕ ಮಾಹಿತಿಗಳು ಉಲ್ಲೇಖ

  ನಾಳೆ ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ನಿರ್ಣಾಯಕ ದಿನ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯುವುದೇ ನಟ ದರ್ಶನ್‌ಗೆ ದೊಡ್ಡ ಸವಾಲಾಗಿದೆ. ಯಾಕಂದ್ರೆ ಈ ಹತ್ಯೆ ಪ್ರಕರಣದಲ್ಲಿ ಸುಲಭದಲ್ಲಿ ಬೇಲ್‌ ಸಿಗದಂತೆ ಪೊಲೀಸರು ಕಾನೂನಿನ ಕುಣಿಕೆ ಹೆಣೆದಿದ್ದಾರೆ. ರಿಮಾಂಡ್‌ ಅರ್ಜಿಯಲ್ಲೇ ಬೇಲ್​ ನೀಡದಂತೆ ಪೊಲೀಸರು ಕೋರ್ಟ್​ಗೆ ಮನವಿ ಸಲ್ಲಿಸಿದ್ದು, ಅದಕ್ಕೆ ಬಲವಾದ ಕಾರಣವನ್ನೂ ಕೊಟ್ಟಿದ್ದಾರೆ.

ಇದನ್ನೂ ಓದಿ: ದರ್ಶನ್ ಯಾರಿಂದ ಹಣ ಪಡೆದರು? ಯಾಱರಿಗೆ ಕೊಟ್ಟರು? 70 ಲಕ್ಷದ ಸೀಕ್ರೆಟ್‌ ಏನು? ಇಂಚಿಂಚು ಮಾಹಿತಿ ಇಲ್ಲಿದೆ 

ಕೊಲೆ ಆರೋಪಿಗಳಿಗೆ ಜಾಮೀನು ನೀಡದಂತೆ ಮನವಿ
ಆರೋಪಿಗಳ ಬಗ್ಗೆ ಕೆಲವು ಸ್ಫೋಟಕ ಅಂಶಗಳು ಉಲ್ಲೇಖ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ2 ದರ್ಶನ್​ ಸೇರಿ ಇನ್ನಿತರ ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಬೇಲ್​ ನೀಡದಂತೆ ಕೋರ್ಟ್​ಗೆ ಪೊಲೀಸರು ಮನವಿ ಮಾಡಿದ್ದಾರೆ. ಆರೋಪಿಗಳ ಬಗ್ಗೆ ರಿಮಾಂಡ್​ ಅರ್ಜಿಯಲ್ಲೇ ಕೆಲವು ಸ್ಫೋಟಕ ಅಂಶಗಳನ್ನ ಉಲ್ಲೇಖ ಮಾಡಿದ್ದಾರೆ.

ರಿಮ್ಯಾಂಡ್‌ ಅರ್ಜಿಯಲ್ಲಿರುವ ಅಂಶಗಳೇನು?

 1. ಆರೋಪಿಗಳಿಗೆ ಕಾನೂನಿನ ಮೇಲೆ ಕಿಂಚಿತ್ತೂ ಗೌರವ ಇಲ್ಲ
 2. ಪವಿತ್ರಾ ಗೌಡ ಸೇರಿ ಎಲ್ಲರೂ ಕೃತ್ಯದಲ್ಲಿ ಒಳಸಂಚು ಮಾಡಿದ್ದಾರೆ
 3. ಕೃತ್ಯದಲ್ಲಿ ದರ್ಶನ್ ಅಭಿಮಾನಿ ಬಳಗ ಬಳಕೆ ಮಾಡಿದ್ದಾರೆ
 4. ಸೆಲೆಬ್ರಿಟಿಯಾಗಿ ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆ
 5. ದರ್ಶನ್, ಹಣ ಬಲ & ಪ್ರಭಾವಿಗಳ ಬಲವನ್ನು ಹೊಂದಿದ್ದಾರೆ
 6. ಎಲ್ಲರೂ ಸಮಾನ ಉದ್ದೇಶದಿಂದ ಕೃತ್ಯದಲ್ಲಿ ಭಾಗಿಯಾಗಿದ್ದಾರೆ
 7. ಆರೋಪಿಗಳ ವಿರುದ್ಧ ಭೌತಿಕ, ತಾಂತ್ರಿಕ & ವೈಜ್ಞಾನಿಕ ಸಾಕ್ಷಿ
 8. ಸಾಕ್ಷಿ ನಾಶಕ್ಕೆ ಹಣ ಬಲ & ಆಮಿಷವನ್ನು ಬಳಕೆ ಮಾಡಿದ್ದಾರೆ
 9. ದರ್ಶನ್ ಸೇರಿ 4 ಮಂದಿಗೆ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇದೆ
 10. ಸಾಕ್ಷಿ ನಾಶಕ್ಕೆ ಯತ್ನಿಸಿರೋದಕ್ಕೂ ಸಾಕಷ್ಟು ಸಾಕ್ಷಿಗಳು ಇವೆ
 11. ದರ್ಶನ್ ಅಭಿಮಾನಿಗಳನ್ನು ಬಳಸಿಕೊಂಡು ತನಿಖೆಗೆ ಅಡ್ಡಿ
 12. ಕೃತ್ಯದಲ್ಲಿ ದರ್ಶನ್ & ಇತರರು ನೇರ ಭಾಗಿಯಾಗಿದ್ದಕ್ಕೆ ಸಾಕ್ಷಿ ಲಭ್ಯ
 13. ಆರೋಪಿ ಪ್ರಭಾವ ಬಳಸಿ ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ
 14. ಹಣ ಬಲ, ಪ್ರಭಾವಿಗಳ ಬಲ ಬಳಸಿ ಸಾಕ್ಷಿಗಳಿಗೆ ಬೆದರಿಕೆ ಸಾಧ್ಯತೆ
 15. ಕೃತ್ಯದಲ್ಲಿ ಜೀವಾವಧಿ ಶಿಕ್ಷೆಯ ಅಪರಾಧದ ಭಾಗವಿದೆ

ಇದನ್ನೂ ಓದಿ: HDK ವಿರುದ್ಧ ನಾಲಿಗೆ ಹರಿಬಿಟ್ಟ ದರ್ಶನ್ ಮಹಿಳಾ ಅಭಿಮಾನಿಗೆ ಸಂಕಷ್ಟ; ಆಗಿದ್ದೇನು?

ಈ ಎಲ್ಲಾ ಕಾರಣವನ್ನ ಮುಂದಿಟ್ಟುಕೊಂಡು ಪೊಲೀಸರು ದರ್ಶನ್​ & ಗ್ಯಾಂಗ್​ಗೆ ಬೇಲ್​ ಸಿಗದಂತೆ ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಕಾನೂನಿನ ಕುಣಿಕೆಯಿಂದ ರೇಣುಕಾ ಹತ್ಯೆ ಆರೋಪಿಗಳು ತಪ್ಪಿಸಿಕೊಳ್ಳಬಾರದು ಅಂತ ಪೊಲೀಸರು ಪಟ್ಟು ಹಿಡಿದಿದ್ದು, ಅಂತಿಮವಾಗಿ ನ್ಯಾಯವೇ ಮೇಲುಗೈ ಸಾಧಿಸಬೇಕಿದೆ. ನಾಳೆ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಗ್ಯಾಂಗ್ ಅನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತಿದ್ದು, ನ್ಯಾಯಾಧೀಶರ ನಿರ್ಧಾರ ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗಿಯಾಯ್ತು ಕಾನೂನಿನ ಕುಣಿಕೆ.. ದರ್ಶನ್‌ಗೆ ಬೇಲ್ ಸಿಗದಂತೆ ಮಾಡುತ್ತಾ ಈ 15 ಕಾರಣ; ಏನವು?

https://newsfirstlive.com/wp-content/uploads/2024/06/Darshan-Arrest-Case-6.jpg

Load More