newsfirstkannada.com

×

ಬರೋಬ್ಬರಿ 11 ಸುಳಿವು.. ಮಹಾಲಕ್ಷ್ಮಿ ಹಂತ*ಕನ ಗುರುತು ಪತ್ತೆ ಹಚ್ಚಿದ ಪೊಲೀಸರು; ಅಸಲಿ ಕಾರಣ ಇಲ್ಲಿದೆ!

Share :

Published September 24, 2024 at 6:45pm

Update September 24, 2024 at 6:12pm

    ಮೊದಲು ಸಲುಗೆಯಿಂದ ಇದ್ದ ಅಶ್ರಫ್‌ ಮೇಲಿದ್ದ ಅನುಮಾನ ಸುಳ್ಳಾಯ್ತು!

    ಮಹಾಲಕ್ಷ್ಮಿ ದೇಹವನ್ನ ಕತ್ತರಿಸಿದ್ದೇಗೆ? ಹಂತಕ ಯಾವ ವೆಪನ್​ ಬಳಸಿದ್ದ?

    ಕುಟುಂಬದ ಸದಸ್ಯರ ಮೇಲೂ ಪೊಲೀಸರ ಅನುಮಾನದ ಕಣ್ಣು ಬಿದ್ದಿದೆ

ಉಪ್ಪು ತಿಂದವನು ನೀರು ಕುಡಿಯಲೇಬೇಕು. ಕೊ*ಲೆ ಮಾಡಿದವನು ಸಿಕ್ಕಿ ಬೀಳಲೇಬೇಕು. ಅವನು ಎಷ್ಟೇ ಪ್ರಳಯಾಂತಕ ಆಗಿದ್ರೂ ಸಣ್ಣ ಸುಳಿವಾದ್ರೂ ಬಿಟ್ಟು ಹೋಗಿರ್ತಾನೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಮಹಾಲಕ್ಷ್ಮಿ ಮರ್ಡರ್​​ ಕೇಸ್​ನಲ್ಲಿ ಬರೋಬ್ಬರಿ 11 ಸುಳಿವುಗಳು ಸಿಕ್ಕಿವೆ. ಬರ್ಬರ ಕೊ*ಲೆಯ ಹಿಂದೆ ಮನೆ ಮಂದಿಗಳ ನಿರ್ಲಕ್ಷ್ಯವೂ ಇತ್ತಾ ಅನ್ನೋ ಌಂಗಲ್​ನಲ್ಲೂ ತನಿಖೆ ನಡೀತಿದೆ.

ಇದನ್ನೂ ಓದಿ: ವೈಯಾಲಿಕಾವಲ್ ಮಹಾಲಕ್ಷ್ಮಿ ಕೇಸ್‌ಗೆ ಹೊಸ ಟ್ವಿಸ್ಟ್‌.. ಪೀಸ್‌, ಪೀಸ್ ಮಾಡಿದ್ದು ಅಶ್ರಫ್ ಅಲ್ಲ? ಮತ್ಯಾರು? 

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮಿ ಬ್ರೂಟಲ್​​ ಮರ್ಡ*ರ್​ ಕೇಸ್ ಇಡೀ ದೇಶವನ್ನ ಕಾಡಿದೆ. ಕೊ*ಲೆ ಮಾಡಿದ ದೇಹವನ್ನ 50 ತುಂಡುಗಳಾಗಿ ಕತ್ತರಿಸಿದ್ದ ಹಂತಕನ ವಿಕೃತಿಗೆ ಜನ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಈ ಕೇಸ್​​ ಪೊಲೀಸರಿಗೆ ಕೊಂಚ ತಲೆ ತಿನ್ನುತ್ತಿದೆ.

​​ಈ ಸಾವಿನ ಕೇಸ್​ನಲ್ಲಿ ಮೊದಲಿಗೆ ಮಹಾಲಕ್ಷ್ಮಿ ಜೊತೆಗೆ ಸಲುಗೆಯಿಂದ ಇದ್ದ ಅಶ್ರಫ್‌ ಅನ್ನುವವನ ಮೇಲೆ ಎಲ್ಲರ ಅನುಮಾನ ನೆಟ್ಟಿತ್ತು. ಯಾಕಂದ್ರೆ ಅವನೇ ಮಹಾಲಕ್ಷ್ಮಿಯ ಮೊದಲ ಪ್ರೇಮಿಯಾಗಿದ್ದ. ಇದೇ ಕಾರಣಕ್ಕೆ ಪೊಲೀಸರು ಅಶ್ರಫ್​​ನನ್ನ ವಶಕ್ಕೆ ತಗೊಂಡು ವಿಚಾರಣೆ ಆರಂಭ ಮಾಡಿದ್ದರು. ಆಗ ಅವನು ಇಬ್ಬರ ನಡುವೆ ಸಂಬಂಧ ಇದ್ದದ್ದು ನಿಜ ಆದ್ರೆ ಅವರ ಮನೆಯಲ್ಲಿ ಗೊತ್ತಾಗಿ ಗಲಾಟೆ ಆದ್ಮೇಲೆ ಇಬ್ಬರು ದೂರಾಗಿದ್ದೇವೆ. ಈ ಕೊ*ಲೆಗೆ ತನಗೂ ಸಂಬಂಧ ಇಲ್ಲ ಅಂತ ಇದ್ದದ್ದು ಇದ್ದಂಗೆ ಹೇಳಿದಾಗ ಪೊಲೀಸರು ಅವನನ್ನ ಕೈ ಬಿಟ್ಟಿದ್ದಾರೆ. ಹಾಗಾದ್ರೆ ಹಂತ*ಕ ಯಾರು ಮಹಾಲಕ್ಷ್ಮಿಯನ್ನ ಅಷ್ಟೊಂದು ಭೀಕರವಾಗಿ ಕೊಂದಿದ್ದು ಒಬ್ಬನೇನಾ ಅಥ್ವಾ ಗುಂಪಾಗಿದ್ದಾರಾ ಅನ್ನೋ ಅನುಮಾನ ಕಾಡುತ್ತಿದೆ.

ಮಹಾಲಕ್ಷ್ಮಿ ಕೊ*ಲೆಯಲ್ಲಿ ಹೆಚ್ಚಾಗುತ್ತಿವೆ ಶಂಕೆಗಳ ಕಂತೆ!
ಕೊ*ಲೆಯ ಸ್ಥಳದಲ್ಲಿ ಸಿಕ್ಕವಾ ಮಲ್ಟಿಪಲ್ ಫಿಂಗರ್ ಪ್ರಿಂಟ್ಸ್?
ಇದು ಪೊಲೀಸರು ಮೆದುಳಿಗೆ ಸಾಣೆ ಹಿಡಿಯುವ ಪ್ರಕರಣ. ಸಿಕ್ಕ ಸಣ್ಣ ಸುಳಿವನ್ನೂ ಬಿಡದೇ ತನಿಖೆ ಮಾಡುವ ಕೇಸ್. ಮಹಾಲಕ್ಷ್ಮಿ ಗಂಡನನ್ನ ಬಿಟ್ಟು, ಅಶ್ರಫ್​ ಜೊತೆ ಪ್ರೇಮಾಯಣ ನಡೆಸಿದ್ದಳು. ಆನಂತರ ಮಾಲ್‌ ಒಂದರಲ್ಲಿ ಕೆಲಸ ಮಾಡುವಾಗ, ಅಲ್ಲಿನ ಮ್ಯಾನೇಜರ್‌ ಜೊತೆ ಮತ್ತೆ ಲವ್ವಾಗಿತ್ತು ಎನ್ನಲಾಗ್ತಿದೆ. ಮೇಲ್ನೋಟಕ್ಕೂ ಈ ಮ್ಯಾನೇಜರ್‌ ಆರೋಪಿ ಇರ್ಬೋದು ಅನ್ನೋ ಅನುಮಾನ ಕೂಡ ಪೊಲೀಸರಿಗಿದೆ. ಇದಾದ ಮೇಲೆ ಮಹಾಲಕ್ಷ್ಮಿಗೆ ಮತ್ತೊಬ್ಬ ಹುಡುಗನ ಜೊತೆ ಸಲುಗೆ ಇತ್ತು ಅಂತಲೂ ಹೇಳಲಾಗುತ್ತಿದೆ. ಹಾಗಾಗಿ ಇದು ಒಬ್ಬರಿಂದಲೇ ಆದ ಕೊಲೆಯಲ್ಲ. ಇದರ ಹಿಂದೆ ಮೂರ್ನಾಲ್ಕು ಮಂದಿ ಇರುವ ಶಂಕೆ ಪೊಲೀಸರದ್ದಾಗಿದೆ.

ಇದನ್ನೂ ಓದಿ: ವೈಯಾಲಿಕಾವಲ್‌ ಮಹಾಲಕ್ಷ್ಮಿ ಕೇಸ್‌.. ಫ್ರಿಡ್ಜ್ ಓಪನ್ ಮಾಡಿ ಕಿರುಚಾಡಿದ ತಾಯಿ, ಅಕ್ಕ ಹೇಳಿದ್ದೇನು? 

ಪೊಲೀಸರು ನಿದ್ದೆಗೆಟ್ಟು ಮಹಾಲಕ್ಷ್ಮಿ ಕೇಸ್‌ ಅನ್ನ ಸ್ಟಡಿ ಮಾಡುತ್ತಿದ್ದಾರೆ. ಜೊತೆ ಜೊತೆಗೆ ಇನ್ವೆಷ್ಟಿಗೇಷನ್ ಕೂಡ ಜೋರಾಗೇ ಮಾಡ್ತಿದ್ದಾರೆ. ಇದೇ ಸಮಯದಲ್ಲಿ ಪೊಲೀಸರಿಗೆ ಕೊಲೆ ನಡೆದ ಸ್ಥಳದಲ್ಲಿ ಮಲ್ಟಿಪಲ್ ಫಿಂಗರ್ ಪ್ರಿಂಟ್ಸ್ ಪತ್ತೆಯಾಗಿವೆಯಂತೆ. ಇದೇ ಕಾರಣಕ್ಕೆ ಬಹುಶಃ ಆಕೆಯನ್ನ ಮೂವರು ಅಥ್ವಾ ಅದಕ್ಕಿಂತ ಹೆಚ್ಚು ಮಂದಿ ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಾ ಇದೆ.

ದೇಹವನ್ನ ಕತ್ತರಿಸಿದ್ದೇಗೆ..? ಹಂತಕ ಯಾವ ವೆಪನ್​ ಬಳಸಿದ್ದ?
ಮಹಾಲಕ್ಷ್ಮಿಯನ್ನ ಕೊಂದು ನಂತರ ಆನಂತರವೇ ಮೃತದೇಹವನ್ನ ಪೀಸ್ ಮಾಡಲಾಗಿತ್ತಾ, ಇಲ್ಲಾ ಏಕಧಂ ಆಕೆಯ ಮೇಲೆರಗಿ ನಿರ್ಧಾಕ್ಷಿಣ್ಯವಾಗಿ ಕೊಚ್ಚಿ ತುಂಡರಿಸಲಾಗಿತ್ತಾ ಅನ್ನೋ ಸಂದೇಹಕ್ಕೂ ಖಚಿತತೆ ಇಲ್ಲ. ಬಟ್​ ದೇಹ ಕತ್ತರಿಸೋಕೆ.. ಆಕ್ಸೆಲ್ ಬ್ಲೇಡ್, ಮಾಂಸ ಕತ್ತರಿಸುವ ಚಾಕು, ಬ್ಲೇಡ್ ನಂತಹ ವೆಪನ್​​ಗಳನ್ನ ಬಳಸಿರ್ಬೋದು ಅನ್ನೋ ಮುಸುಕಾದ ಉತ್ತರ ಇದೆ. ಪೀಸ್​​ ಆಗಿದ್ದ ಮಾಂಸದ ತುಂಡುಗಳನ್ನ ಸೂಟ್ ಕೇಸ್‌ನಲ್ಲಿ ತುಂಬೋ ಪ್ಲಾನ್​ ಕೂಡ ಕೊಲೆಗಾರನದ್ದಾಗಿತ್ತು ಅಂತ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ: ತಿರುಪತಿ ಲಡ್ಡು ಬಗ್ಗೆ ಕಮೆಂಟ್ಸ್​​: ತಮಿಳು ನಟ ಕಾರ್ತಿಗೆ ಖಡಕ್​ ವಾರ್ನಿಂಗ್​ ಕೊಟ್ಟ ಪವನ್​ ಕಲ್ಯಾಣ್​​! 

ಕೊಲೆಗೆ ಮೊದಲು ಸಾಕ್ಷಿ ಆಗೋದೇ ಮೊಬೈಲ್​ ಫೋನ್​​. ಸೆಪ್ಟೆಂಬರ್ 02ರಂದು ಮಹಾಲಕ್ಷ್ಮಿ ಫೋನ್ ಸಂಪರ್ಕದಲ್ಲಿದ್ದ ಎಲ್ರೂ ಪತ್ತೆಯಾಗಿದ್ದಾರೆ. ಬಟ್​ ಇಬ್ಬರು ಮಾತ್ರ ಕೃತ್ಯದ ಮಾರನೇ ದಿನವೇ ಬೆಂಗಳೂರು ಬಿಟ್ಟು ಪರಾರಿಯಾಗಿದ್ದು ಪೊಲೀಸರಿಗೆ ಗೊತ್ತಾಗಿದೆ. ಇದೇ ಈ ಕೇಸ್‌ಗೆ ಹೊಸ ತಿರುವು ಕೊಟ್ಟಿದೆ. ಮಹಾಲಕ್ಷ್ಮಿಯ ಮೊಬೈಲ್‌ ಚೆಕ್​ ಮಾಡಿದಾಗ, ಬೆಂಗಳೂರಲ್ಲಿ ಕೆಲಸ ಮಾಡ್ಕೊಂಡಿದ್ದ ಒಡಿಶಾ ಮೂಲದ ವ್ಯಕ್ತಿ ಈಗ ಪರಾರಿಯಾಗಿದ್ದಾನೆ.. ಹಾಗಾಗಿ ಅವನಿಗಾಗಿ ಪೊಲೀಸ್​​ ಬಲೆ ಬೀಸಿದೆ. ಸದ್ಯಕ್ಕೆ ಅವನ ಫೋನ್​ ಕೂಡ ಸ್ವಿಚ್​​ ಆಫ್​​ ಇದ್ದು.. ಲೊಕೇಷನ್​ ಟ್ರೇಸ್​ ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳ ಆ ವ್ಯಕ್ತಿಯ ಲೊಕೇಷನ್ ಪತ್ತೆಯಾಗಿದೆ.

ಕುಟುಂಬದವರ ಮೇಲೂ ಪೊಲೀಸರ ಅನುಮಾನದ ಕಣ್ಣು!
ಮಹಾಲಕ್ಷ್ಮಿ ಮೂವರ ಜೊತೆ ಸಲುಗೆ ಬೆಳೆಸಿದ್ದಾಳೆ ಅನ್ನೋದು ಸದ್ಯದ ಮಾಹಿತಿಯಾಗಿದೆ. ಕಳೆದ 9 ತಿಂಗಳಿಂದ ಮಹಾಲಕ್ಷ್ಮಿ ಜೊತೆ ಒಡಿಶಾದ ವ್ಯಕ್ತಿ ಸಂಪರ್ಕದಲ್ಲಿದ್ದನಂತೆ. ಆದ್ರೆ ಮಹಾಲಕ್ಷ್ಮಿ ಹ*ತ್ಯೆಯಾದ ಮಾರನೆಯ ದಿನದಿಂದ ಅವನು ನಾಪತ್ತೆಯಾಗಿದ್ದಾನೆ. ಮಹಾಲಕ್ಷ್ಮಿ ಹತ್ಯೆಯ ನಂತರ ಅವನ ತಮ್ಮನಿಗೆ ಕಾಲ್​ ಮಾಡಿ, ತಾನು ಹ*ತ್ಯೆ ಮಾಡಿರೋದಾಗಿ ಹೇಳಿದ್ದಾನೆ. ಪೊಲೀಸರು ಅರೆಸ್ಟ್​ ಮಾಡುತ್ತಾರೆ ಎಂದು ಬೆಂಗಳೂರು ಬಿಟ್ಟು ಹೋಗೋದಾಗಿ, ತಮ್ಮನಿಗೆ ಹುಷಾರಾಗಿರೋದಕ್ಕೆ ಹೇಳಿದ್ದಾನಂತೆ. ಪಶ್ಚಿಮ ಬಂಗಾಳಕ್ಕೆ ಆರೋಪಿ ಎಸ್ಕೇಪ್ ಆಗಿರೋದು ಪೊಲೀಸರಿಗೆ ಕನ್​ಫರ್ಮ್​​ ಆಗಿದೆ. ಇದರ ಜೊತೆಗೆ ಪೊಲೀಸ್​ ತಂಡ ಮಹಾಲಕ್ಷ್ಮಿ ಕುಟುಂಬಸ್ಥರ ಮೇಲೂ ಅನುಮಾನದ ಕಣ್ಣಿಟ್ಟಿದ್ದು ಒಡಿಶಾ ವ್ಯಕ್ತಿ ಸಿಕ್ಕ ನಂತರ ಮಹಾಲಕ್ಷ್ಮಿ ಕೊಲೆ ಕೇಸ್​ನ ತನಿಖೆ​​ ಕೊನೆ ಹಂತಕ್ಕೆ ಬಂದಂತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 11 ಸುಳಿವು.. ಮಹಾಲಕ್ಷ್ಮಿ ಹಂತ*ಕನ ಗುರುತು ಪತ್ತೆ ಹಚ್ಚಿದ ಪೊಲೀಸರು; ಅಸಲಿ ಕಾರಣ ಇಲ್ಲಿದೆ!

https://newsfirstlive.com/wp-content/uploads/2024/09/mahalaxmi-1.jpg

Load More