ಐದು ವರ್ಷಗಳಿಂದ ಪ್ರತಿಮಾ ಕಾರುಚಾಲಕನಾಗಿದ್ದ ಕಿರಣ್
ಕೆಲ ದಿನಗಳ ಹಿಂದೆ ಒಂದು ಆ್ಯಕ್ಸಿಡೆಂಟ್ ಮಾಡಿದ್ದ ಕಿರಣ್
ಚಾಮರಾಜನಗರದ ಬಳಿ ಚಾಲಕ ಕಿರಣ್ನನ್ನು ಅರೆಸ್ಟ್ ಮಾಡಿದ ಪೊಲೀಸರು
ಮಹಿಳಾ ಅಧಿಕಾರಿ ಪ್ರತಿಮಾ ಕಾರು ಚಾಲಕನಾಗಿ ಕೆಲಸದಿಂದ ವಜಾಗೊಂಡಿದ್ದ ಕಿರಣ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಪ್ರತಿಮಾ ಅವರ ಕಾರು ಚಾಲಕನಾಗಿ ಕಿರಣ್ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಪ್ರತಿಮಾ ಮಾಹಿತಿ ಲೀಕ್ ಮಾಡುತ್ತಿದ್ದ ಕಿರಣ್
ಕಿರಣ್ ಕಾಂಟ್ರಾಕ್ಟ್ ಬೇಸಿಸ್ನಲ್ಲಿ ಕೆಲಸ ಮಾಡ್ತಿದ್ದನು. ಪ್ರತಿಮಾ ರೇಡ್ ಹೋಗುವ ವಿಚಾರವನ್ನು ಕಿರಣ್ ಲೀಕ್ ಮಾಡ್ತಿದ್ದನು. ಈ ವಿಚಾರ ಪ್ರತಿಮಾರಿಗೆ ತಿಳಿದಂತೆಯೇ ವಾರ್ನ್ ಮಾಡಲಾಗಿತ್ತು. ನಂತರ ಆತನನ್ನು ಕೆಲಸದಿಂದ ತೆಗೆದು ಹಾಕಿದರು.
ಕಾಲಿಗೆ ಬಿದ್ರು ಕೆಲಸಕ್ಕೆ ಸೇರಿಕೊಳ್ಳದ ಪ್ರತಿಮಾ
ಇದಲ್ಲದೆ, ಕೆಲ ದಿನಗಳ ಹಿಂದೆ ಕಿರಣ್ ಒಂದು ಆ್ಯಕ್ಸಿಡೆಂಟ್ ಮಾಡಿದ್ದ. ಅದಕ್ಕೆ ಪ್ರತಿಮಾ ಬೈದಿದ್ದರು. ಇವೆಲ್ಲದರ ಕೋಪದಿಂದ ಆತನನ್ನು ಕೆಲಸದಿಂದ ವಜಾ ಮಾಡಿದ್ದರು. ಕೆಲಸದಿಂದ ಕಿತ್ತೆಸದ ಬಳಿಕ ಕಿರಣ್ ಪ್ರತಿಮಾ ಮನೆಗೆ ಬಂದಿದ್ದಾನೆ. ಆಕೆಯ ಕಾಲಿಗೆ ಕೂಡ ಬಿದ್ದಿದ್ದಾನೆ. ಕೆಲಸಕ್ಕೆ ಸೇರಿಸಿಕೊಳ್ಳುವಂತೆ ದಂಬಾಲು ಬಿದ್ದಿದ್ದಾನೆ. ಆದರೆ ಪ್ರತಿಮಾ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಹೀಗಾಗಿ ಕಿರಣ್ ಕೊಲೆ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
5 ವರ್ಷದಿಂದ ಚಾಲಕ ವೃತ್ತಿ
ಚಾಲಕ ಕಿರಣ್ ತಂದೆ ಸುರೇಶ್ ಸಹ ಇದೇ ಇಲಾಖೆಯಲ್ಲಿ ಚಾಲಕಾರಿದ್ದರು. ಕಿರಣ್ ಕೂಡ ಪ್ರತಿಮಾ ಡ್ರೈವರ್ ಆಗಿ 5 ವರ್ಷದಿಂದ ಕೆಲಸ ಮಾಡುತ್ತಾ ಬಂದಿದ್ದಾನೆ. 10 ದಿನಗಳ ಹಿಂದೆ ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆದರೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ದಕ್ಕೆ ಕಿರಣ್ ಚಾಕುವಿನಿಂದ ಪ್ರತಿಮಾ ಕತ್ತು ಕೊಯ್ದಿದ್ದಾನೆ. ಬಳಿ ಚಾಮರಾಜನಗರ ಕಡೆಗೆ ಎಸ್ಕೇಪ್ ಆಗ್ತಿದ್ದಾನೆ.
ಚಾಮರಾಜನಗರದ ಬಳಿ ಆರೋಪಿ ಅರೆಸ್ಟ್
ಚಾಮರಾಜನಗರದಲ್ಲಿ ಆರೋಪಿ ಕಿರಣ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಹೆಚ್ಚಿನ ತನಿಖೆಗೆ ನಡೆಯುತ್ತಿದೆ. ಅತ್ತ ಪ್ರತಿಮಾ ಪಾರ್ಥಿವ ಶರೀರ ಹುಟ್ಟೂರಾದ ತೀರ್ಥಹಳ್ಳಿಗೆ ಆಗಮಿಸಿದ್ದು, ಅಂತಿಮ ವಿಧಿ ವಿಧಾನ ನಡೆಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ