/newsfirstlive-kannada/media/post_attachments/wp-content/uploads/2024/10/BNG_RAIN_5.jpg)
ಬೆಂಗಳೂರು: ಸಿಲಿಕಾನ್ ಸಿಟಿಗೆ ಮತ್ತೆ ಮಳೆರಾಯನ ಎಂಟ್ರಿಯಾಗಿದೆ. ಇಂದು ಬೆಳಗ್ಗೆಯೇ ನಗರದ ಹಲವೆಡೆ ತುಂತುರು ಮಳೆಯಾಗಿದ್ದು, ಸಂಜೆ ವೇಳೆಗೆ ವರುಣನ ಅಬ್ಬರ ಜೋರಾಗುವ ಮುನ್ಸೂಚನೆ ನೀಡಲಾಗಿದೆ. ಬೆಳಗ್ಗೆಯಿಂದಲೂ ಮೋಡ ಕವಿದ ವಾತವರಣ ನಿರ್ಮಾಣವಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಗುಡುಗು ಸಿಡಿಲಿನ ಮೂಲಕ ಮಳೆ ಅಬ್ಬರ ಶುರುವಾಗಿದೆ.
ನಗರದ ಟೌನ್ ಹಾಲ್, ಕಾರ್ಪೊರೇಷನ್ ಸರ್ಕಲ್, ಜಯನಗರ, ಸೌತ್ ಎಂಡ್ ಸರ್ಕಲ್, ಚಾಮರಾಜಪೇಟೆ, ಶಾಂತಿನಗರ, ಸಂಪಂಗಿರಾಮನಗರ, ಬಸವನಗುಡಿ, ಎನ್.ಆರ್ ಕಾಲೋನಿ, ರಾಮಕೃಷ್ಣ ಆಶ್ರಮ, ಜಯನಗರ, ಗವಿಪುರ, ಗಾಂಧಿ ಬಜಾರ್ ಸುತ್ತಾಮುತ್ತಾ ಮಳೆಯಾಗಿದೆ.
/newsfirstlive-kannada/media/post_attachments/wp-content/uploads/2024/10/BNG_RAIN_2-1.jpg)
ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ಸಿಟಿ ಸೇರಿದಂತೆ ಹಲವಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆಯಿಂದ ಅಲರ್ಟ್ ನೀಡಲಾಗಿದೆ.
3-4 ದಿನ ಮಳೆಯ ಮುನ್ಸೂಚನೆ
ಹವಾಮಾನ ಇಲಾಖೆ ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆಯಾಗುವ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ರಾಜ್ಯದ ಉತ್ತರ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ ಎಂದಿದೆ.
ಕೆಮ್ಮು, ನೆಗಡಿ, ವೈರಲ್ ಫೀವರ್ ಜಾಸ್ತಿ!
ಬೆಂಗಳೂರಲ್ಲಿ ಒಂದ್ಕಡೆ ಮಳೆ ಆಗುತ್ತಾ ಇದ್ರೆ ಮತ್ತೊಂದ್ಕಡೆ ಕಾಯಿಲೆಗಳ ಭಯ ಶುರುವಾಗಿದೆ. ಮಳೆ ಎಫೆಕ್ಟ್‌ನಿಂದ ಜನರಿಗೆ ಕಾಯಿಲೆಗಳು ವಕ್ಕರಿಸುವ ಆತಂಕ ಇದೆ. ವೈರಲ್ ಫೀವರ್ ಹರಡುವ ಮತ್ತು ಏರಿಕೆಯಾಗುವ ಎಚ್ಚರಿಕೆಯನ್ನು ವೈದ್ಯರು ನೀಡಿದ್ದಾರೆ.
ಕೆಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಡಾ. ಮೋಹನ್ ಅವರು ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದಾರೆ. ನಗರದಲ್ಲಿ ಕಳೆದ ಒಂದು ವಾರದಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಸೊಳ್ಳೆ ಕಾಟ ಶುರುವಾಗಿ ಕೆಮ್ಮು, ನೆಗಡಿ, ವೈರಲ್ ಫೀವರ್ ಜಾಸ್ತಿ ಆಗುವ ಆತಂಕ ಇದೆ. ನಗರದಲ್ಲಿ ಶೀತ, ಜ್ವರದ ಪ್ರಕರಣಗಳು ಕೂಡ ಹೆಚ್ಚಳಗೊಂಡಿದೆ. ಕುಡಿಯುವ ನೀರಿಗೆ ಕಲುಷಿತ ನೀರು ಮಿಕ್ಸ್ ಆಗಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಜಾಸ್ತಿ ಆಗುವ ಆತಂಕ ಇದೆ. ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us