ರಾತ್ರಿ ಇಡೀ ಮಳೆ, ಪರಿಸ್ಥಿತಿ ಈಗ ಹೇಗಿದೆ?
ಮಳೆಯಿಂದ ರಸ್ತೆಯಲ್ಲೇ ಕೆಟ್ಟು ನಿಂತ ಬಸ್
ಗುರುರಾಯರ ಮಠದೊಳಗೆ ನುಗ್ಗಿದ ಮಳೆರಾಯ
ಮುನ್ಸೂಚನೆಯನ್ನೂ ಕೊಡದ ಮಳೆರಾಯ ಏಕಾಏಕಿ ಬೆಂಗಳೂರಿಗೆ ನುಗ್ಗಿದ್ದು, ರಾತ್ರಿ ಸುಮಾರು 9 ಗಂಟೆ ನಂತರ ಧೀಡೀರ್ ಅಂತಾ ಸುರಿದ ಮಳೆ ಜನರಿಗೆ ಶಾಕ್ ನೀಡಿತ್ತು.
ಸಂಪಂಗಿರಾಮನಗರ, ಮಲ್ಲೇಶ್ವರಂ, ಹೆಬ್ಬಾಳ, ಜೆಸಿ ರೋಡ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆರಾಯನ ಓಡಾಟ ಸಾಗಿತ್ತು. ಮಳೆ ನೀರು ಪ್ರಯಾಣಿಕರನ್ನ ಪರದಾಡುವಂತೆ ಮಾಡಿತ್ತು.
ಗುರುರಾಯರ ಮಠದೊಳಗೆ ನುಗ್ಗಿದ ಮಳೆರಾಯ
ಮಲ್ಲೇಶ್ವರಂ ಬಳಿಯಿರೋ ರಾಘವೇಂದ್ರ ಸ್ವಾಮಿ ಮಠಕ್ಕೆ ನೀರು ನುಗ್ಗಿದ್ದರಿಂದ ಭಕ್ತರೇ ದಿಗ್ಬಂಧನಕ್ಕೊಳಗಾಗಿದ್ದರು. ನಂತರ ಭಕ್ತಾದಿಗಳೇ ಕೈಯಲ್ಲಿ ಬಕೆಟ್ ಹಿಡಿದುಕೊಂಡು ನೀರು ಹೊರಹಾಕೋ ಸಾಹಸಕ್ಕೆ ಮುಂದಾದ್ರು.
ಬೈಕ್ಗಳು ಕೆಟ್ಟು ತಳ್ಳಿಕೊಂಡು ಹೋದ ಸವಾರರು
ದಿಢೀರ್ ಸುರಿದ ಮಳೆಯಿಂದಾಗಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದವರ ಬೈಕ್ಗಳು ಮಳೆಯಲ್ಲಿ ಸಿಲುಕಿದ್ದು, ಹಲವರು ತಳ್ಳಿಕೊಂಡು ಹೋದ ಘಟನೆಗಳೂ ನಡೆದಿವೆ.
ಹೆಬ್ಬಾಳ
ಹೆಬ್ಬಾಳ ಭಾಗದಲ್ಲಿ ಮಳೆಯ ಅಬ್ಬರಕ್ಕೆ ರಸ್ತೆಗಳ ಮೇಲೆ ಮಳೆ ನೀರು ಕೆರೆಯಂತೆ ನಿಂತುಬಿಟ್ಟಿತ್ತು. ಅದೇ ರಸ್ತೆಯಲ್ಲೇ ವಾಹನಗಳು ಸಾಹಸ ಮೀರಿ ಸಂಚಿರಿಸಿದವು.
ಒಬ್ಬರಿಗೊಬ್ಬರು ಕೈ ಹಿಡಿದು ರಸ್ತೆ ದಾಟಿದ ಕುಟುಂಬ
ಮಳೆ ಬಂದಾಗ ಹಳ್ಳ ಯಾವುದು, ಮ್ಯಾನ್ಹೋಲ್ ಯಾವುದು ಅಂತಾ ಗೊತ್ತಾಗೋದೆ ಇಲ್ಲ. ಇದು ಅನಾಹುತಕ್ಕೂ ಕಾರಣವಾಗುತ್ತೆ. ಹೀಗಾಗಿ ಭಯದಿಂದಲ್ಲೇ ಇಲ್ಲೊಂದು ಕುಟುಂಬ ಸದಸ್ಯರು ಒಬ್ಬರಿಗೊಬ್ಬರು ಕೈ ಕೈ ಹಿಡಿದುಕೊಂಡು ರಸ್ತೆ ದಾಟಿದ್ರು.
ಮನೆಗೆಳಿಗೆ ನುಗ್ಗಿದ ನೀರು, ಮರ ಬಿದ್ದು ಅವಾಂತರ
ರಣಾರ್ಭಟ ಮಳೆಯಿಂದಾಗಿ ಮಹಾಲಕ್ಷಿ ಲೇಔಟ್ ಜನ ಪರದಾಡುವಂತಾಗಿದ್ದು, ಕೆಲವರ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಇನ್ನು, ಭಾರೀ ಮಳೆಯಿಂದಾಗಿ ಬೃಹತ್ ಮರವೊಂದು ಮುರಿದು ಬಿದಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು.
ಮಳೆಯಿಂದಾಗಿ ಕೆಟ್ಟು ನಿಂತ ಬಸ್
ಮೈಸೂರು ರೋಡ್ನಲ್ಲಿ ಖಾಸಗಿ ಬಸ್ ಒಂದು ಕೆಟ್ಟು ನಿಂತಿದ್ದು, ಬಸ್ ಅನ್ನೂ ತಳ್ಳಲು ಜನರು ಪರದಾಡಿದ್ದಾರೆ.. ಕೊನೆಗೆ ಸಂಚಾರಿ ಪೊಲೀಸರು ಟೋಯಿಂಗ್ ಗಾಡಿ ಕರೆಸಿ ಬಸ್ ತೆರವು ಮಾಡಿದ್ದಾರೆ.
ಮಳೆಯಲ್ಲಿ ಪರದಾಡ್ತಿದ್ದ ಅಜ್ಜಿಗೆ ನ್ಯೂಸ್ ಫಸ್ಟ್ ನೆರವು
ಸುಧಾಮನಗರದ ಬಳಿ ಅಜ್ಜಿ ಮಳೆಯಲ್ಲಿ ನಡೆದುಕೊಂಡು ಹೋಗುತ್ತಿದ್ದದ್ದು ನೋಡಿ ಸಹಾಯ ಮಾಡಲು ನ್ಯೂಸ್ಫಸ್ಟ್ ಟೀಮ್ ಮುಂದಾಯ್ತು. ಮಳೆಯಿಂದ ಕೆಟ್ಟು ನಿಂತಿದ್ದ ಕಾರನ್ನ ತಳ್ಳೋ ಮೂಲಕವೂ ನೆರವಿನ ಹಸ್ತ ಚಾಚಲಾಯ್ತು.
ಗಮನ ಸೆಳೆದ ಫುಡ್ ಡೆಲಿವರಿ ಬಾಯ್ಸ್
ಒಂದು ಕಡೆ ಮಳೆ ಸುರಿತಾ ಇದ್ರು. ಕೂಡ ಲೆಕ್ಕಿಸದೆ ಫುಡ್ ಡೆಲಿವರಿ ಮಾಡುತ್ತಿದ್ದದ್ದು ಅಲ್ಲಲ್ಲಿ ಕಂಡು ಬಂತು. ಇದು ಬದುಕಿನ ಪಾಠ ನೆನೆಪಿಸುವಂತೆ ಕಾಣ್ತಿತ್ತು.
4 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಣೆ
ಹವಮಾನ ಇಲಾಖೆ ಇನ್ನು ಮೂರು ದಿನ ಇದೇ ರೀತಿ ಮಳೆ ಆಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಹಾಗಾಗಿ ಜನ ಎಚ್ಚರ ವಹಿಸೋದು ಒಳ್ಳೆಯದು. ಇನ್ನು, ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಸ್ತೆ ಮಾಯ.. ನೀರು ನಿಂತು ಎಲ್ಲಾ ಅಯೋಮಯ
ಇನ್ನೂ ಬೆಂಗಳೂರಿನ ಮೇಕ್ರಿ ಸರ್ಕಲ್.. ಬಸವನಗುಡಿ.. ಜೆಪಿ ನಗರ, ಕೋರಮಂಗಲ, ಸಹಕಾರ ನಗರದ ರಸ್ತೆಗಳು ಜಲಾವೃತವಾಗಿದ್ವು. ಹೀಗಾಗಿ ಜನರು ಹೊರ ಬರಲು ಭಯ ಪಡುವಂತಾಗಿತ್ತು. ಒಟ್ಟಾರೆ ಬೆಂಗಳೂರಲ್ಲಿ ಪ್ರತಿ ಬಾರಿ ಮಳೆ ಬಂದಾಗ ಸಮಸ್ಯೆ ಕಟ್ಟಿಟ್ಟ ಬುತ್ತಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ