ಬಿಸಿಲ ಬೇಗೆಯಿಂದ ಬಸವಳಿದವರಿಗೆ ಮಳೆಯ ಸಿಂಚನ
ಬಿಸಿಲಿನಿಂದ ಉಷ್ಣಾಂಶದ ಪ್ರಮಾಣ 29 ರಿಂದ 30 ಡಿಗ್ರಿ ಏರಿಕೆಯಾಗಿತ್ತು
ಜೂನ್ನಿಂದ ಇಲ್ಲಿವರೆಗೂ ಶೇಕಡ 31 ಮಳೆಯಾಗಿದೆ
ಅಯ್ಯೋ.. ಬಿಸಿಲು, ಸೆಕೆ ಎಂದು ತಡವರಿಸುತ್ತಿದ್ದ ಬೆಂಗಳೂರಿನ ಜನರಿಗೆ ವರುಣಾ ತಂಪನೆರೆದಿದ್ದಾನೆ. ಮತ್ತೊಂದೆಡೆ ಇದ್ದಕ್ಕಿಂದ್ದತೆಯೇ ಮಳೆಯ ಆಗಮನದಿಂದ ನಗರ ಸ್ಥಿತಿ ಕೂಡ ಅಯೋಮಯವಾಗಿದೆ. ಅಲ್ಲಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಹವಮಾನ ಇಲಾಖೆ ನೀಡಿದ ಸೂಚನೆಯಂತೆ ಮೂರು ದಿನ ಇದೇ ರೀತಿ ಮಳೆ ಆಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಹಾಗಾಗಿ ಜನ ಎಚ್ಚರ ವಹಿಸೋದು ಒಳ್ಳೆಯದು. ಇನ್ನು, ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮಳೆ ಇಲ್ಲದೆ ಸಿಲಿಕಾನ್ ಸಿಟಿ ತಾಪಮಾನ ಏರಿಕೆಯಾಗಿತ್ತು. ಆಗಸ್ಟ್ ಆರಂಭದಿಂದ ದಿನವೂ ಸರಾಸರಿ 26 ರಿಂದ 27 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿತ್ತು. ಉಷ್ಣಾಂಶದ ಪ್ರಮಾಣ 29 ರಿಂದ 30 ಡಿಗ್ರಿ ಏರಿಕೆಯಾಗಿತ್ತು. ಹೀಗಾಗಿ ಜನರು ಮುಂದೇನು ಗತಿ ಎಂದು ಕೈ ಕಟ್ಟಿಕುಳಿತ್ತಿದ್ದರು. ಮತ್ತೊಂದೆಡೆ ಜೂನ್ನಿಂದ ಇಲ್ಲಿವರೆಗೂ ಶೇಕಡ 31 ಮಳೆಯಾಗಿದ್ದು, 51.6 ಸೆ.ಮಿ ಮಳೆಯಾಗಬೇಕಿತ್ತು. ಆದರೆ ಈ ಬಾರಿ 36.5 ಸೆ.ಮಿ ಮಳೆಯಾಗಿತ್ತು. ಆದರೆ ನಿನ್ನೆ ಮಾತ್ರ ಬೆಂಗಳೂರಿಗೆ ದಿಢೀರ್ ಮಳೆಯ ಸಿಂಚನವಾಗಿದೆ. ನಗರದ ಜನರಿಗೆ ಮಳೆಯ ಆಗಮನದಿಂದ ಸಂಸತ ಮನೆಮಾಡಿದರೆ, ಮತ್ತೊಂದೆಡೆ ನೀರು ನಿಂತು ಅವಾಂತರ ಸೃಷ್ಟಿಯಾಗಿರೋದರಿಂದ ಬೇಸರ ಕೂಡ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ