ಅಕ್ಷರಶಃ ಕೆರೆಯಂತಾದ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣ
ಸಂಜೆ ಸುರಿದ ಮಳೆಯಿಂದ ವಾಹನ ಸವಾರರು ಕಂಗಾಲು
ಬೀದರ್, ಕೊಪ್ಪಳ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಭರ್ಜರಿ ಮಳೆ
ರಾಜ್ಯದಲ್ಲಿ ಮತ್ತೆ ವರುಣನ ಪರ್ವ ಶುರುವಾಗಿದ್ದು, ಕೆಲ ಜಿಲ್ಲೆಗಳ ಮೇಲೆ ಪ್ರೀತಿ ಕರುಣಿಸಿದ್ದಾನೆ. ಮುಂಗಾರಿನಲ್ಲೇ ಬಿಡುವು ಪಡೆದಿದ್ದ ಮಳೆರಾಯ, ಈಗ ಮೋಡಗಳ ದಂಡನ್ನ ಕರೆತಂದಿದ್ದಾನೆ. ಮತ್ತೆ ತನ್ನ ಆಟ ಶುರು ಅಂತ ಘೋಷಿಸಿದಂತೆ ಕಾಣ್ತಿದೆ.
ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಅಬ್ಬರಿಸಿದ ವರ್ಷಧಾರೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಸಿಂಚನವಾಗಿದೆ. ಕಲಬುರಗಿ, ಕೊಪ್ಪಳ, ಬೀದರ್ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ಅದರಂತೆ ಬೆಂಗಳೂರು ನಗರದ ಹಲವೆಡೆ ಬಿಡದಂತೆ ಸುರಿದಿದೆ.
ಮಳೆ ಅಬ್ಬರ ಪಾದಚಾರಿಗಳು, ವಾಹನ ಸವಾರರು ಹೈರಾಣು
ಬೆಂಗಳೂರಿನ ಹಲವೆಡೆ ಸಂಜೆಯಿಂದ ಸುರಿದ ಮಳೆಯಿಂದ ವಾಹನ ಸವಾರರು ಕಂಗಾಲಾದ್ರು.. ಮಳೆಗೆ ಅಬ್ಬರಕ್ಕೆ ವಾಹನ ಸವಾರರ ಪರದಾಡುವಂತಾಯ್ತು.. ರಸ್ತೆಯಲ್ಲಿ ನೀರು ಕೆರೆಯಂತೆ ಹರಿದ ಕಾರಣಕ್ಕೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಚಾಲುಕ್ಯ ಸರ್ಕಲ್, ರಾಜಾಜಿನಗರ, ಮಲ್ಲೇಶ್ವರಂ, ಕೆಆರ್ ಸರ್ಕಲ್, ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ಜಂಕ್ಷನ್ಗಳಲ್ಲಿ ಸ್ಲೋ ಮೂವಿಂಗ್ ಟ್ರಾಫಿಕ್ನಿಂದ ಸವಾರರು ಹಾಗೂ ಪಾದಚಾರಿಗಳು ಗೊಣಗಾಡುತ್ತಾ ಸಾಗಿದ್ರು.
ಮಳೆ ಆರ್ಭಟ, ರಸ್ತೆಗಳ ಮಲೆ ನಿಂತಲ್ಲೇ ನಿಂತಿರುವ ನೀರು
ಇತ್ತ, ಸ್ಯಾಟಲೈಟ್, ಜೆ.ಸಿ ರೋಡ್, ಬ್ಯಾಟರಾಯನಪುರ, ವಿಲ್ಸನ್ ಗಾರ್ಡನ್, ಕಾರ್ಪೋರೇಶನ್ ಸರ್ಕಲ್, ಟೌನ್ ಹಾಲ್, ವಸಂತ ನಗರದಲ್ಲೂ ಭಾರೀ ಮಳೆ ಸುರಿದಿದೆ.. ಮಳೆಯಿಂದ ಹಲವು ಭಾಗದ ರಸ್ತೆಗಳ ಮೇಲೆ ಮಳೆ ನೀರು ನಿಂತಲ್ಲೇ ನಿಂತು ವಾಹನಗಳಿಗೆ ಸವಾಲು ಹಾಕಿತು.
ಸಂಜೆ ಮಳೆಗೆ ಕೆರೆಯಂತಾದ ಮೆಜೆಸ್ಟಿಕ್ ಬಸ್ ನಿಲ್ದಾಣ
ಇನ್ನು, ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣ ಅಕ್ಷರಶಃ ಕೆರೆಯಂತಾಗಿತ್ತು.. ಬಸ್ಗಾಗಿ ಜನ ನಿಲ್ಲುವ ಜಾಗದಲ್ಲೇ ಒಂದಡಿಯಷ್ಟು ಮಳೆ ನೀರು ಹರಿದಿದೆ.. ಮಳೆಯಿಂದ ನಿಲ್ದಾಣದಲ್ಲಿ ಜನದಟ್ಟಣೆ ಕೂಡಾ ಹೆಚ್ಚಾಗಿತ್ತು.. ಇತ್ತ, ಬಸ್ನಲ್ಲಿ ಸೀಟ್ ಹಿಡಿಯಲು ಜನ ಓಡಾಡಿದ್ರು..
ಮಳೆಗೆ ಧರೆಗೆ ಉರುಳಿದ ಬೃಹತ್ ಮರ, ವಾಹನಗಳು ಜಖಂ
ಮಲ್ಲೇಶ್ವರಂನ ಸಿದ್ದವನಹಳ್ಳಿ ಕೃಷ್ಣ ಶರ್ಮಾ ರಸ್ತೆ ಅಲಿಯಾಸ್ ಮಾರ್ಗೋಸಾ ರಸ್ತೆಯಲ್ಲಿ ಬೃಹತ್ ಮರ ಧರೆಗುರುಳಿದೆ. ಪರಿಣಾಮ ಸ್ಕೂಟಿ ಸಂಪೂರ್ಣ ಜಖಂಗೊಂಡಿದೆ. ಅಲ್ಲೇ ಪಕ್ಕದಲ್ಲಿ ಟೀ ಕುಡಿಯೋದಕ್ಕೆ ಅಂತ ಕಾರನ್ನ ಸೈಡ್ಗೆ ಹಾಕಿದ್ದ ವೇಳೆ ಕಾರಿನ ಮೇಲೆ ಮರ ಬಿದ್ದಿದೆ. ಇದ್ರಿಂದ ಕಾರಿನ ಗ್ಲಾಸ್ ಪುಡಿಯಾಗಿದ್ದು, ಅದೃಷ್ಟವಶಾತ್ ಕಾರು ಮಾಲೀಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ರಾಮನಗರದಲ್ಲಿ ಮಳೆ ಜೊತೆಗೆ ಕೃತಕ ಟ್ರಾಫಿಕ್ ಕಿರಿಕಿರಿ
ರಾಮನಗರ ಜಿಲ್ಲೆಯಲ್ಲೂ ಮಳೆ ಅಬ್ಬರ ಜೋರಾಗಿತ್ತು. ನಿರಂತರ ಮಳೆಗೆ ಹೈರಾಣಾಗಿದ್ದ ಜನಕ್ಕೆ ಟ್ರಾಫಿಕ್ ಕಿರಿಕಿರಿ ಆಯ್ತು. ಸಿಎಂ ಆಗಮನ ಹಿನ್ನೆಲೆ ಪೂರ್ವಭಾಗಿ ಸಭೆ ನಡೆಯುತ್ತಿತ್ತು. ಈ ಸಭೆಗೆ ಬಂದಿದ್ದ ಶಾಸಕರು, ಸಂಸದರ, ಕಾರ್ಯಕರ್ತರ ಕಾರುಗಳು ನಡುರಸ್ತೆಯಲ್ಲೇ ಪಾರ್ಕಿಂಗ್ ಆಗಿತ್ತು. ಇದನ್ನ ನೋಡಿದ್ರೂ ನೋಡದಂತೆ ಪೊಲೀಸರು ಮೌನಿ ಆಗಿದ್ರು.
ಬೀದರ್ನಲ್ಲಿ ಬಿದ್ದ ಮಳೆಗೆ ಕೊಚ್ಚಿಹೋದ ರಸ್ತೆಗಳು
ಇನ್ನು, ಒಂದೇ ಮಳೆಗೆ ಬೀದರ್ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದು, ಸಂಚರಿಸಲು ವಾಹನ ಸವಾರರು ಪರದಾಡಿದ್ರು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಆಗದಿದರೋದು ನಗರದ ಅಭಿವೃದ್ಧಿ ಕಾರ್ಯಕ್ಕೆ ಗರ ಬಡಿದಿದೆ..
ವಾಯುಭಾರ ಕುಸಿತ ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ
ಈ ಮಧ್ಯೆ, ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಸೆಪ್ಟಂಬರ್ 6 ಮತ್ತು 7 ರಂದು ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಅತ್ಯಧಿಕ ಮಳೆ ನಿರೀಕ್ಷೆ ಇದ್ದು ಯೆಲ್ಲೋ ಅಲರ್ಟ್ ನೀಡಲಾಗಿದೆ.. ಕರಾವಳಿ ಜಿಲ್ಲೆಗಳಲ್ಲಿ 9 ಮತ್ತು 10 ರಂದು ಮಳೆ ಆತಂಕವಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ.
ಒಟ್ಟಾರೆ, ರಾಜ್ಯದ ಹಲವೆಡೆ ಮಳೆರಾಯ ಸಿಂಚನವಾಗಿದ್ರೆ. ಇತ್ತ ಕಾವೇರಿ ಜಲಾನಯನ ತೀರದಲ್ಲಿ ಮಾತ್ರ ಮಳೆ ಮರಿಚಿಕೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ