newsfirstkannada.com

ಆಗಸ್ಟ್ 31 ರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾಚರಣೆ.. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಟಿಕೆಟ್ ದರ ಎಷ್ಟು..?

Share :

28-07-2023

    ವಿಮಾನ ಸೇವೆ ಬಗ್ಗೆ ಸಚಿವ ಎಂಬಿ ಪಾಟೀಲ್ ಮಾಹಿತಿ

    ಮೂರು ವಿಮಾನ ಸಂಸ್ಥೆಗಳಿಗೆ ಅನುಮತಿ ಸಿಕ್ಕಿದೆ

    ಟಿಕೆಟ್ ಬುಕ್ಕಿಂಗ್ ಶುರು ಮಾಡಿದ ಇಂಡಿಗೋ ಏರ್​ಲೈನ್ಸ್​​

ಶಿವಮೊಗ್ಗ: ಮುಂದಿನ ಆಗಸ್ಟ್​ 31 ರಿಂದ ಶಿವಮೊಗ್ಗ ವಿಮಾನ ನಿಲ್ದಾಣವು ಕಾರ್ಯಾಚರಣೆ ಮಾಡಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ, ಮೂರು ಏರ್​ಲೈನ್ಸ್​ ಸಂಸ್ಥೆಗಳಿಗೆ ಆಪರೇಟ್ ಮಾಡಲು ಅನುಮತಿ ಸಿಕ್ಕಿದೆ. ಉಡಾನ್ ಯೋಜನೆ ಅಡಿಯಲ್ಲಿ ತಿರುಪತಿ, ಗೋವಾ ಮತ್ತು ಹೈದರಾಬಾದ್​ ವಿಮಾನಗಳು ಪ್ರಯಾಣಿಸಲಿವೆ. ಇಂಡಿಗೋ ಏರ್​ಲೈನ್ಸ್​, ಬುಕಿಂಗ್ ಸ್ಟಾರ್ಟ್​ ಮಾಡಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಸ್ಟ್​ 31 ರಿಂದ ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ ಎಂದು ತಿಳಿಸಿದ್ದಾರೆ.

ಸ್ಪೈಸ್ ಜೆಟ್, ಸ್ಟಾರ್ ಏರ್ ಲೈನ್ಸ್ ಮತ್ತು ಅಲಯನ್ಸ್ ಏರ್ ಸಂಸ್ಥೆಗಳು ವಿಮಾನ ಸಂಚಾರ ಮಾಡುವ ಸಂಬಂಧ ಕರೆದಿದ್ದ ಟೆಂಡರ್ ನಲ್ಲಿ ಭಾಗವಹಿಸಿ ಯಶಸ್ವಿಯಾಗಿವೆ. ಸದ್ಯಕ್ಕೆ ಹಗಲು ವೇಳೆ ಮಾತ್ರ ವಿಮಾನ ಸಂಚಾರ ಇರಲಿದೆ. ರಾತ್ರಿ ವೇಳೆ ಲ್ಯಾಂಡಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಕಾಮಗಾರಿ ಪ್ರಗತಿಯಲ್ಲಿದ್ದು ಆದಷ್ಟು ಬೇಗ ಮುಗಿಯಲಿದೆ ಎಂದಿದ್ದಾರೆ.

ಇಂಡಿಗೋ ಏರ್‌ಲೈನ್ಸ್‌ ಸಂಸ್ಥೆಯಿಂದ ಬುಕ್ಕಿಂಗ್ ಶುರು

ಇಂಡಿಗೋ ಏರ್‌ಲೈನ್ಸ್‌ ಸಂಸ್ಥೆಯು ನಿನ್ನೆಯಿಂದ ಟಿಕೆಟ್‌ ಬುಕಿಂಗ್ ಶುರುಮಾಡಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕೇವಲ 75 ನಿಮಿಷದಲ್ಲಿ ಪ್ರಯಾಣ ಮಾಡಬಹುದಾಗಿದೆ. ಈ ಪ್ರಯಾಣಕ್ಕೆ 3,999 ರೂ. ದರವನ್ನು ನಿಗದಿಪಡಿಸಲಾಗಿದೆ. 31ರಂದು ಪ್ರತಿ ಟಿಕೆಟ್ ದರ 6,227 ರೂ ಇರಲಿದೆ. ಇದಾದ ನಂತರ ಸೆಪ್ಟೆಂಬರ್ 1 ರಿಂದ ಟಿಕೆಟ್ ದರ 3,999ರೂ. ಇರಲಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.

ವಿಮಾನ ಹೊರಡುವ ವೇಳಾ ಪಟ್ಟಿ

ಆಗಸ್ಟ್ 31ರಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 9.50 ಕ್ಕೆ ಹೊರಟು 11.05ಕ್ಕೆ ತಲುಪಲಿದೆ. 11:25ಕ್ಕೆ ಅಲ್ಲಿಂದ (ಶಿವಮೊಗ್ಗ) ಹೊರಟು 12:25ಕ್ಕೆ ಬೆಂಗಳೂರು ತಲುಪಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಗಸ್ಟ್ 31 ರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾಚರಣೆ.. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಟಿಕೆಟ್ ದರ ಎಷ್ಟು..?

https://newsfirstlive.com/wp-content/uploads/2023/07/INDIGO-1.jpg

Load More