Advertisment

ಮನೆ ಕೆಲಸದ ಬಾಲಕಿ ಹ*ತ್ಯೆ.. ಮೃತದೇಹ ಸೂಟ್‌ಕೇಸ್‌ನಲ್ಲಿ ಸಾಗಿಸಿ ಸಿಕ್ಕಿಬಿದ್ದ ಬೆಂಗಳೂರಿನ ಸಾಫ್ಟ್‌ವೇರ್ ದಂಪತಿ!

author-image
admin
Updated On
ಮನೆ ಕೆಲಸದ ಬಾಲಕಿ ಹ*ತ್ಯೆ.. ಮೃತದೇಹ ಸೂಟ್‌ಕೇಸ್‌ನಲ್ಲಿ ಸಾಗಿಸಿ ಸಿಕ್ಕಿಬಿದ್ದ ಬೆಂಗಳೂರಿನ ಸಾಫ್ಟ್‌ವೇರ್ ದಂಪತಿ!
Advertisment
  • ಮಗನ ಊಟ ತಿಂದ ಅನ್ನೋ ಒಂದೇ ಕಾರಣಕ್ಕೆ ಸಾಯಿಸಿದರು
  • ಸೇತುವೆ ಕೆಳಗೆ ಸೂಟ್ ಕೇಸ್ ಬಿಸಾಕಿ ಹೋಗಿದ್ದ ಐಟಿ ದಂಪತಿ
  • 15 ವರ್ಷದ ಬಾಲಕಿಯನ್ನ ಕೆಲಸಕ್ಕಿಟ್ಟುಕೊಂಡಿದ್ದ ಗಂಡ, ಹೆಂಡತಿ

ಬೆಂಗಳೂರು: ಮಗನ ಊಟ ತಿಂದ ಅನ್ನೋ ಒಂದೇ ಕಾರಣಕ್ಕೆ ಮನೆ ಕೆಲಸಕ್ಕಿದ್ದ ಬಾಲಕಿಯನ್ನು ಹೊಡೆದು ಸಾಯಿಸಿರೋ ಭಯಾನಕ ಘಟನೆ ನಡೆದಿದೆ. ಅಶ್ವಿನಿ ಪಾಟೀಲ್ ಹಾಗೂ ಅಭಿನೇಷ್ ಸಾಹೋ ಕೊ*ಲೆಯ ಆರೋಪಿಗಳಾಗಿದ್ದಾರೆ. ಈ ದಂಪತಿ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

Advertisment

ಅಶ್ವಿನಿ ಪಾಟೀಲ್ ಹಾಗೂ ಅಭಿನೇಷ್ ಸಾಹೋ ದಂಪತಿ ತಮ್ಮ 5 ವರ್ಷದ ಮಗನನ್ನ ನೋಡಿಕೊಳ್ಳಲು ರಾಜಸ್ಥಾನದ 15 ವರ್ಷದ ಬಾಲಕಿಯನ್ನ ಕೆಲಸಕ್ಕಿಟ್ಟುಕೊಂಡಿದ್ದರು. ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಆ ಬಾಲಕಿ ಒಂದು ದಿನ ಮಗನ ಊಟವನ್ನು ತಿಂದಿದ್ದಾಳೆ. ಇದರಿಂದ ಕೋಪಗೊಂಡ ದಂಪತಿ ರೋಲಿಂಗ್ ಪಿನ್ (ಚಪಾತಿ ರೋಲ್‌) ನಿಂದ ಬಾಲಕಿಯ ತಲೆಗೆ ಹೊಡೆದಿದ್ದಾರೆ.

ಚಪಾತಿ ರೋಲ್ ಹಲ್ಲೆಯಿಂದ ಬಾಲಕಿ ಗಾಯಗೊಂಡಿದ್ದರು. ನಂತರ ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ದಂಪತಿ ಡಾಕ್ಟರ್ ಬಳಿ ಕರೆದುಕೊಂಡು ಹೋಗಿದ್ದಾರೆ. ಬಾಲಕಿಯನ್ನು ಚಿಕಿತ್ಸೆ ಬಳಿಕ ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದು, ಮರುದಿನ ಬಾಲಕಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮನೆ ಹಿತ್ತಲಲ್ಲಿ ಮಹಿಳೆಯ 6 ತುಂಡು ಕತ್ತರಿಸಿ ಹೂತಿಟ್ಟಿದ್ದ; ಈ ಭಯಾನಕ ಕೃತ್ಯ ಬೆಳಕಿಗೆ ಬಂದಿದ್ದೇ ರೋಚಕ! 

Advertisment

ಬಾಲಕಿ ಸಾವಿನ ಬಳಿಕ ಭಯಗೊಂಡಿದ್ದ ದಂಪತಿ ಶವಸಾಗಿಸಲು ಸೂಟ್ ಕೇಸ್ ಖರೀದಿ ಮಾಡಿದ್ದಾರೆ. ಬಾಲಕಿ ಶವವನ್ನು ಸೂಟ್ ಕೇಸ್‌ನಲ್ಲಿ ಇಟ್ಟು ಕಾರಿನ ಡಿಕ್ಕಿಯಲ್ಲಿ ಹಾಕೊಂಡು ತಮಿಳುನಾಡಿಗೆ ಹೊರಟಿದ್ದಾರೆ. ಸೇಲಂ ಜಿಲ್ಲೆಯ ಶಂಕರಿ ಬಳಿಯ ವೈಕುಂಠಂ ಸೇತುವೆ ಬಳಿ ದಂಪತಿ ಸೂಟ್ ಕೇಸ್ ಎಸೆದಿದ್ದಾರೆ.

ಕಳೆದ ಸೆಪ್ಟೆಂಬರ್‌ 29ರಂದು ಸೇತುವೆ ಕೆಳಗೆ ಸೂಟ್ ಕೇಸ್ ಗಮನಿಸಿದ್ದ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ್ದ ಶಂಕರಿ ಪೊಲೀಸರು ಸೂಟ್ ಕೇಸ್ ಓಪನ್ ಮಾಡಿದ್ದು, ಬಾಲಕಿಯ ಶವ ಪತ್ತೆಯಾಗಿದೆ. ಸೂಟ್ ಕೇಸ್ ಮೇಲಿದ್ದ ಸ್ಟಿಕ್ಕರ್ ಗಮನಿಸಿದ್ದಾಗ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.

ಬಾಲಕಿ ಶವ ಇದ್ದ ಸೂಟ್‌ ಕೇಸ್‌ ಅನ್ನು ಬೆಂಗಳೂರಿನ ಅಂಗಡಿಯೊಂದರಲ್ಲಿ ಖರೀದಿಸಲಾಗಿತ್ತು. ಬಳಿಕ ಹೊಸೂರು ಹಾಗೂ ಶಂಕರಿ ನಡುವಿನ ಟೋಲ್‌ನಲ್ಲಿರುವ ಸಿಸಿಟಿವಿ ಚೆಕ್‌ ಮಾಡಿದಾಗ ಅನುಮಾನಸ್ಪದ ಕಾರಿನ ಗುರುತು ಪತ್ತೆಯಾಗಿದೆ.

Advertisment

ಕಾರಿನ ಮಾಲೀಕರನ್ನ ಪೊಲೀಸರು ಸಂಪರ್ಕ ಮಾಡಿದಾಗ 10 ದಿನದ ಹಿಂದೆ ಕಾರು ಮಾರಾಟ ಮಾಡಿರೋದು ಬೆಳಕಿಗೆ ಬಂದಿದೆ. ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ದಂಪತಿ ಆ ಕಾರನ್ನು ಖರೀದಿ ಮಾಡಿರುತ್ತಾರೆ. ಕಾರು ಖರೀದಿಸಿದ ಬಳಿಕ ಆರೋಪಿಗಳು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಮೊಬೈಲ್‌ ಟವರ್ ಲೋಕೇಷನ್ ಚೆಕ್ ಮಾಡಿದಾಗ ಆರೋಪಿಗಳು ಒಡಿಶಾದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಳಿಕ ಅಲ್ಲಿ ಹೋಗಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment