ಇಷ್ಟವಿಲ್ಲದಿದ್ದರೂ ಹೇರ್ ಕಟ್ ಮಾಡ್ಸಿದಕ್ಕೆ ಅಸಮಾಧಾನ
ಯಾರಿಗೂ ಮುಖ ತೋರಿಸಲ್ಲ ಎಂದು ನಾಪತ್ತೆಯಾದ ಮಗ
ಮಗನ ಬರುವಿಕೆಗಾಗಿ ಕಾದು ಕುಳಿತು ಅನಾರೋಗ್ಯಕ್ಕೀಡಾದ ತಾಯಿ
ಬಲವಂತವಾಗಿ ಹೇರ್ ಕಟ್ ಮಾಡಿಸಿದ್ದಕ್ಕಾಗಿ ಮನನೊಂದು ಯುವಕ ಮನೆ ಬಿಟ್ಟು ಹೋಗಿರುವ ಘಟನೆ ಬನಶಂಕರಿಯ 2ನೇ ಹಂತದ ಯಾರಾಬ್ ನಗರದಲ್ಲಿ ನಡೆದಿದೆ. ಐಟಿಐ ಓದುತ್ತಿದ್ದ ಸಂರಕ್ಷ್ ಮನೆ ಬಿಟ್ಟು ಹೋದ ಯುವಕ ಎಂದು ಗುರುತಿಸಲಾಗಿದೆ.
ಸಂರಕ್ಷ್ಗೆ ತನ್ನ ತಲೆ ಕೂದಲಿನ ಮೇಲೆ ಎಲ್ಲಿಲ್ಲದ ಪ್ರೀತಿ, ಇದರಿಂದ ಹೇರ್ ಕಟ್ ಮಾಡಿಸಲು ಹಿಂದೇಟು ಹಾಕುತ್ತಿದ್ದ. ಇದರ ಜೊತೆಗೆ ಇತ್ತೀಚಿಗಷ್ಟೇ ಡ್ಯಾನ್ಸಿಂಗ್ ಕ್ಲಾಸಿಗೂ ಸೇರಿಕೊಂಡಿದ್ದ. ಡ್ಯಾನ್ಸಿಂಗ್ ಕ್ಲಾಸ್ ಸೇರಿಕೊಂಡ ಮೇಲೆ ತಲೆ ಕೂದಲ ಮೇಲಿನ ಪ್ರೀತಿ ಹೆಚ್ಚಾಗುತ್ತಲೇ ಹೋಯ್ತು.
ಮನೆ ಬಿಟ್ಟು ಹೋದ
ಆದರೆ ಇತ್ತ ಮಗನ ಕೂದಲಿನ ವ್ಯಾಮೋಹದಿಂದ ಬೇಸತ್ತು ಹೋಗಿದ್ದ ಪೋಷಕರು ಬಲವಂತವಾಗಿ ಹೇರ್ ಕಟ್ ಮಾಡಿಸಿದ್ದಾರೆ. ತನಗೆ ಇಷ್ಟವಿಲ್ಲದಿದ್ದರೂ ಹೇರ್ ಕಟ್ ಮಾಡ್ಸಿದಕ್ಕೆ ಅಸಮಾಧಾನಗೊಂಡ ಪುತ್ರ ಮನೆ ಬಿಟ್ಟು ಹೋಗಿದ್ದಾನೆ. ಬಂಧು, ಬಳಗ, ಸ್ನೇಹಿತರು ಎಲ್ಲರನ್ನ ಬಿಟ್ಟು ನಾಪತ್ತೆಯಾಗಿದ್ದಾನೆ.
ಯಾರಿಗೂ ಮುಖ ತೋರಿಸಲ್ಲ
ಪೋಷಕರು ತಲೆ ಕೂದಲು ಕಟ್ ಮಾಡ್ಸಿದಕ್ಕೆ ಸಂರಕ್ಷ್ ಅಸಮಾಧಾನಗೊಂಡಿದ್ದಲ್ಲದೆ, ತನ್ನ ಸ್ನೇಹಿತರ ಜೊತೆಗೂ ಕೂಡ ಅಸಮಾಧಾನವನ್ನ ಹೊರ ಹಾಕಿದ್ದ. ನನ್ನ ತಲೆ ಕೂದಲು ಕಟ್ ಮಾಡಿಸಿದ್ದಾರೆ, ಇನ್ಮುಂದೆ ಯಾರಿಗೂ ಮುಖ ತೋರಿಸಲ್ಲ ಎಂದು ಹೇಳಿದ್ದಾನಂತೆ.
ಇದನ್ನು ಓದಿ: ಕಾರ್ತಿಕ್ ಸಿಂಗ್ ಬರ್ಬರ ಕೊಲೆ ಪ್ರಕರಣ; ಆರೋಪಿಗಳನ್ನು ಬಂಧಿಸಿದ ಪೊಲೀಸರು
ಮಗನಿಗಾಗಿ ಕಾದು ಕುಳಿತ ತಾಯಿ
ಕೂದಲು ಕತ್ತರಿಸಿದ ಮರುದಿನವೇ ಸಂರಕ್ಷ್ ಮನೆ ಬಿಟ್ಟು ಓಡಿ ಹೋಗಿದ್ದಾನೆ. ಆದರೆ ಮಗನ ಈ ನಡವಳಿಕೆಯಿಂದ ತಾಯಿ ಕಂಗಾಲಾಗಿದ್ದಾರೆ. ಮಗನ ಬರುವಿಕೆಗಾಗಿ ಕಾದು ಕಾದು ತಾಯಿ ಅನಾರೋಗ್ಯಕ್ಕೀಡಾಗಿದ್ದಾರೆ. ಪುತ್ರನ ನೆನದು ಕಣ್ಣೀರು ಹಾಕುತ್ತಲೇ ದಿನ ದೂಡುತ್ತಿದ್ದಾರೆ.
ಇದನ್ನು ಓದಿ: ಹಾಡಹಗಲೇ ಸಿನಿಮೀಯ ರೀತಿಯ ದರೋಡೆ.. 20 ಕೋಟಿ ಮೌಲ್ಯದ ಆಭರಣ ಲೂಟಿ ಮಾಡಿ ಪರಾರಿ
ಕಾಲೇಜಿಗೆ ಹೋಗದ ಮಗ
ಮಗನ ಕೂದಲು ಕತ್ತರಿಸಿದ್ದ ವಿಚಾರವಾಗಿ ಮಾತನಾಡಿದ ಸಂರಕ್ಷ್ ತಾಯಿ, ಮಗನಿಗೆ ಇಷ್ಟವಿಲ್ಲದಿದ್ರೂ ಕಟ್ಟಿಂಗ್ ಮಾಡಿಸಿದ್ವಿ. ಇದಾದ ಮರುದಿನ ಮಗ ಕಾಲೇಜಿಗೆ ಹೋಗಿರ್ಲಿಲ್ಲ. ಕೂದಲು ಫುಲ್ ಇದ್ದ ಕಾರಣ ಮುಖ ಎಲ್ಲಾ ಒಂಥರಾ ಕಾಣಿಸ್ತಿತ್ತು. ಇದೇ ಕಾರಣಕ್ಕೆ ಬಲವಂತವಾಗಿ ಕಟ್ ಮಾಡ್ಸಿದ್ವಿ. ಅಪ್ಪನಿಗೆ ನೀನೆ ಹೇಳಿ ಹೇರ್ ಕಟ್ ಮಾಡಿಸಿದೆ ಎಂದು ಸಂರಕ್ಷ್ ಮುನಿಸಿಕೊಂಡಿದ್ದ. ಮೊನ್ನೆ ಕೆಲಸಕ್ಕೆ ಹೋಗಿದ್ದೆ, ಕೆಲಸ ಮುಗಿಸಿ ಮನೆಗೆ ಬಂದು ನೋಡ್ದಾಗ ಸಂರಕ್ಷ್ ಮನೆಯಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ಹೊರಗಡೆ ಹೋಗಿದ್ದಾನೆ ಆಮೇಲೆ ಬರ್ತಾನೆಂದು ಅಂದುಕೊಂಡಿದ್ವಿ. ಆದರೆ ಒಂದು ವಾರ ಆದರೂ ಮಗ ಇನ್ನೂ ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆ.
ಸದ್ಯ ಸಂರಕ್ಷ್ ತಾಯಿ ಮನೆಗೆ ಬಾ ಮಗನೇ, ನಿನ್ನಿಷ್ಟದಂತೆ ಬದುಕು, ಬಾಳು. ನೀನು ಹೋದ ಮೇಲೆ ನನ್ ಆರೋಗ್ಯ ಕೂಡ ಕೆಟ್ಟೋಗಿದೆ. ದಯವಿಟ್ಟು ಮನೆಗೆ ಬಾ ಎಂದು ಕಣ್ಣೀರು ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ