ಬೆಂಗಳೂರಲ್ಲಿ ಹೆಚ್ಚಾದ ಡಿಜಿಟಲ್ ಭಿಕ್ಷಾಟನೆ, ಸಾರ್ವಜನಿಕರು ಶಾಕ್
ಗೂಗಲ್ ಪೇ, ಫೋನ್ ಪೇ ಸ್ಕ್ಯಾನರ್ ಬಳಸುತ್ತಿದ್ದಾರೆ ತೃತೀಯ ಲಿಂಗಿಗಳು
ಕ್ಯಾಶ್ ಇಲ್ಲ ಅಂದ್ರೆ ಸ್ಕ್ಯಾನರ್ ತೋರಿಸಿ ಭಿಕ್ಷಾಟನೆ ಮಾಡ್ತಾರೆ ಇವರು
ಡಿಜಿಟಲ್ ದುನಿಯಾ ಬಂದ ಬಳಿಕ ಕ್ಯಾಶ್ ಆ್ಯಂಡ್ ಕ್ಯಾರಿ ಮಾಡುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಇದರಿಂದಾಗಿ ಭಿಕ್ಷಾಟನೆ ಮಾಡುವವರಿಗೆ ದೊಡ್ಡ ಹೊಡೆತಬಿದ್ದಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ತೃತೀಯ ಲಿಂಗಿಗಳು ಡಿಜಿಟಲ್ ಭಿಕ್ಷಾಟನೆಗೆ ಇಳಿದಿದ್ದಾರೆ. ಬೆಂಗಳೂರಿನಲ್ಲಿ ಇಂತಹದೊಂದು ದೃಶ್ಯ ಕಣ್ಣಿಗೆ ಕಾಣಸಿಕ್ಕಿದೆ.
ಜಯನಗರ ಬಳಿ ತೃತೀಯ ಲಿಂಗದವರು ಭಿಕ್ಷೆ ಕೇಳಲು ಗೂಗಲ್ ಪೇ, ಫೋನ್ ಪೇ ಸ್ಕ್ಯಾನರ್ ಬಳಸುತ್ತಿದ್ದಾರೆ. ಆ ಮೂಲಕ ಭಿಕ್ಷಾಟನೆ ಮಾಡುತ್ತಿದ್ದಾರೆ. ಹಣವಿಲ್ಲ ಎಂದು ಹೇಳಿದವರಿಗೆ ಸ್ಕ್ಯಾನರ್ ತೋರಿಸಿ ಡಿಜಿಟಲ್ ಟ್ರಾನ್ಸಾಕ್ಷನ್ ಮಾಡಿಸಿಕೊಳ್ಳುತ್ತಿದ್ದಾರೆ.
ಇನ್ನು ಭಿಕ್ಷಾಟನೆಯ ರೀತಿ ಕೂಡ ಬದಲಾಗಿರೋದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಒಂದು ವೇಳೆ ಟ್ರಾನ್ಸಕ್ಷನ್ ಜಾಸ್ತಿಯಾದ್ರೆ ಇವರಿಗೂ ಐಟಿ ಬಿಸಿ ಮುಟ್ಟುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದಲ್ಲದೆ, ಈ ಹಿಂದೆ ಭಿಕ್ಷಾಟನೆ ಮಾಡ್ತಿದ್ದವರನ್ನು ಬಂಧಿಸಿದ್ದರು. ಹೈ-ಫೈ ಏರಿಯಾದಲ್ಲಿ ಭಿಕ್ಷಾಟನೆ ಮಾಡೋದನ್ನ ನಿಷೇಧಿಸಿದ್ದರು. ಆದರೀಗ ಇದಕ್ಕೆ ಪೊಲೀಸರು ಯಾವ ರೀತಿಯಲ್ಲಿ ಕ್ರಮ ಕೈಗೊಳ್ತಾರೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ