newsfirstkannada.com

‘ನಾಗರ ಪಂಚಮಿ ಹೆಸರಲ್ಲಿ ಮೌಢ್ಯ ಬೇಡ’- ಹುತ್ತದ ಮುಂದಿಟ್ಟ ಆಹಾರ ಸೇವಿಸಿ ವಿದ್ಯಾರ್ಥಿಗಳ ಕ್ಯಾಂಪೇನ್​​

Share :

21-08-2023

    ಹಬ್ಬ ಎಂಬುದು ನಮ್ಮ ಸಂಸ್ಕೃತಿ ಮತ್ತು ಬದುಕಿನ ಭಾಗ

    ನಾಗರ ಪಂಚಮಿಗೆ ಹಾಲು, ಆಹಾರ ವ್ಯರ್ಥ ಮಾಡಬೇಡಿ

    ಬೆಂಗಳೂರು ವಿವಿ ವಿದ್ಯಾರ್ಥಿಗಳ ವಿಭಿನ್ನ ಕ್ಯಾಂಪೇನ್​​..!

ಬೆಂಗಳೂರು: ಹಬ್ಬ ಎಂಬುದು ನಮ್ಮ ಸಂಸ್ಕೃತಿ ಮತ್ತು ಬದುಕಿನ ಭಾಗ. ಹಾಗೆಯೇ ನಾಗರ ಪಂಚಮಿ ಕೂಡ ಒಂದು ಸಾಂಸ್ಕೃತಿಕ ಹಬ್ಬ. ಹೀಗಾಗಿ ಪ್ರತೀ ವರ್ಷ ಶ್ರಾವಣ ಮಾಸದ ಮೊದಲಾರ್ಧದ 5ನೇ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸಾಂಪ್ರದಾಯಿಕ ಹಿಂದೂಗಳ ಹಬ್ಬವು ಹೌದು.

ಹಬ್ಬವನ್ನು ಆಚರಿಸುವುದು, ಸಂಭ್ರಮಿಸುವುದು ಸಂತೋಷದ ವಿಷಯವೇ. ಇದೊಂದು ಉತ್ತಮ ನಡವಳಿಕೆ ಕೂಡ. ಹಬ್ಬದ ಹೆಸರಿನಲ್ಲಿ ಸಂಭ್ರಮ ಸರಿ, ಮೌಡ್ಯ ಮತ್ತು ಆಹಾರ ವಸ್ತುಗಳ ವ್ಯರ್ಥ ಮಾಡುವುದು ಯಾರಿಗೂ ಉಪಯೋಗವಿಲ್ಲ. ಸಮಾಜ ಬದಲಾಗಬೇಕು, ಬದಲಾವಣೆ ಜಗದ ನಿಯಮ‌. ಅದು ಶಿಕ್ಷಣದ ಮೂಲಕ ಸಾಧ್ಯ.

ಇನ್ನು, ನಾಗರ ಪಂಚಮಿಗಾಗಿ ಜನ ಕೆಲವು ಪದ್ಧತಿಗಳು ಮತ್ತು ಆಚರಣೆಗಳನ್ನು ಅನುಸರಿಸುತ್ತಾರೆ. ಹಾವುಗಳನ್ನು ಕೊಲ್ಲಬಾರದು, ನಾಗರ ಹಾವು ಕಂಡರೆ ಗೌರವಿಸಬೇಕು ಮತ್ತು ತೊಂದರೆ ಮಾಡದೆ ಅದಕ್ಕೆ ಹೋಗಲು ಅವಕಾಶ ಮಾಡಿಕೊಡಬೇಕು. ಈ ದಿನದಂದು ಕೆಲವರು ಉಪವಾಸ ಮಾಡುತ್ತಾರೆ. ಇನ್ನೂ ಹಲವರು ಹೂವು, ಹಾಲು ಮತ್ತು ಹಾಲಿನೊಂದಿಗೆ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸುತ್ತಾರೆ.

ಹಾಲು, ಆಹಾರ ಪದಾರ್ಥಗಳ ವ್ಯರ್ಥ

ಅಸಲಿಗೆ ಹಾಲಿನ ಅಭಿಷೇಕ ಮಾಡುವುದು, ಹುತ್ತಕ್ಕೆ ಸೇಬಿನ ಹಾರ ಹಾಕುವುದು, ಆಹಾರ ಪದಾರ್ಥಗಳನ್ನು ಚೆಲ್ಲುವ ಕೆಲಸ ಮಾಡುತ್ತಾರೆ. ಹಾಲೇ ಇರಲಿ, ಹಣ್ಣು ತರಕಾರಿಗಳೇ ಇರಲಿ, ಬೇಳೆ ಕಾಳುಗಳೇ ಇರಲಿ ಇವು ನಾಶವಾಗುತ್ತವೆ. ಅದಕ್ಕೆ ಗೌರವ ಕೊಟ್ಟು ಹಸಿದವರ ಹೊಟ್ಟೆ ತುಂಬಿಸಿದರೆ ದೇವರ ಮೆಚ್ಚುತ್ತಾನೆ ಎಂಬುದು ಪ್ರಜ್ಞಾವಂತರ ವಾದ.

ಬೆಂಗಳೂರು ವಿವಿ ವಿದ್ಯಾರ್ಥಿಗಳ ವಿಭಿನ್ನ ಕ್ಯಾಂಪೇನ್​​

ಹೀಗಿರುವಾಗಲೇ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮೌಢ್ಯರಹಿತ, ಹಸಿವು ಮುಕ್ತ ಸಮಾಜ ನಿರ್ಮಿಸುವ ಭಾಗವಾಗಿ ಕ್ಯಾಂಪೇನ್​ವೊಂದು ಶುರು ಮಾಡಿದ್ದಾರೆ. ಬೆಂಗಳೂರು ವಿವಿ ಆವರಣದಲ್ಲಿ ಅತೀ ಹೆಚ್ಚು ಹಾವಿನ ಹುತ್ತಗಳಿವೆ. ಹೀಗಾಗಿ ಜನ ನಾಗರ ಪಂಚಮಿ ಹಬ್ಬದ ಭಾಗವಾಗಿ ಹುತ್ತದ ಮೇಲಲ್ಲ, ಹುತ್ತದ ಒಳೆಗೆ ಹಾಲೆರೆಯುವುದು. ಇದರಿಂದ ನಾಗರ ಹಾವಿಗೆ ತೊಂದರೆ ಆಗುವ ಘಟನೆಗಳು ನಡೆಯುತ್ತವೆ. ಆದ್ದರಿಂದ ಬೆಂಗಳೂರು ವಿವಿ ವಿದ್ಯಾರ್ಥಿಗಳು ವಿಭಿನ್ನ ಕ್ಯಾಂಪೇನ್​ ಮಾಡುವ ಮೂಲಕ ಮೌಢ್ಯತೆಗೆ ಸೆಡ್ಡು ಹೊಡೆದಿದ್ದಾರೆ.

ಬೆಂಗಳೂರು ವಿವಿಯ ಪತ್ರಿಕೋದ್ಯಮ ವಿಭಾಗದಲ್ಲಿ ಓದುತ್ತಿರುವ ಮನೋಜ್​​ ಎಂಬ ವಿದ್ಯಾರ್ಥಿ ಮತ್ತಾತನ ಸ್ನೇಹಿತರು ಫೇಸ್​ಬುಕ್​​ನಲ್ಲಿ ಲೈವ್​ವೊಂದು ಮಾಡಿದ್ದಾರೆ. ಲೈವ್​ನಲ್ಲಿ ಮಾತಾಡಿದ ಮನೋಜ್​​​ ಅವರು, ನಾಗರ ಪಂಚಮಿ ಒಂದು ಹಬ್ಬವಾಗಿ ಆಚರಿಸಿ. ಆದರೆ ಹಾವು ಅಥವಾ ಹುತ್ತಕ್ಕೆ ಹಾಲೆರೆಯಬೇಡಿ. ಬದಲಿಗೆ ಅದೇ ಹಾಲು ಹಣ್ಣುಗಳನ್ನು ದಯವಿಟ್ಟು ಆಹಾರವಾಗಿ ಉಪಯೋಗಿಸಿ. ಹಸಿದವರಿಗೆ ದಾನ ಮಾಡಿ. ಇದರಿಂದ ನಾಗರ ಪಂಚಮಿ ಒಂದು ಹಸಿವು ನಿವಾರಣೆ ಹಬ್ಬವಾಗಲಿದೆ ಎಂದು ಸಂದೇಶ ಸಾರಿದ್ದಾರೆ. ಅಲ್ಲದೇ ಹುತ್ತಕ್ಕೆ ಅರ್ಪಿಸಲಾಗಿದ್ದ ಆಹಾರ ಪದಾರ್ಥಗಳು, ಬಾಳೆಹಣ್ಣು ಸೇರಿದಂತೆ ಹಂಚಿಕೊಂಡು ತಿಂದು ಒಂದು ಸಮಾಜದ ನಿಜವಾದ ಆತ್ಮ ಅಡಗಿರುವುದು ಧರ್ಮದಿಂದಲ್ಲ, ಬದಲಿಗೆ ವಿಜ್ಞಾನದಿಂದ ಮತ್ತು ಪ್ರಕೃತಿಯ ಸಹಜ ನಿಯಮದಿಂದ ಎಂದು ತೋರಿಸಿದ್ದಾರೆ. ಹಾವು ಸೇವಿಸುತ್ತದೆ ಎಂದು ಕಲ್ಲಿನ ಮೇಲೆ ಸುರಿದು ಹಾಲನ್ನು ಅಪವ್ಯಯ ಮಾಡುವುದರ ಬದಲು ಸಮಾಜದಲ್ಲಿರೋ ಬಡ ಮಕ್ಕಳಿಗೆ ವಿತರಿಸಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾಗರ ಪಂಚಮಿ ಹೆಸರಲ್ಲಿ ಮೌಢ್ಯ ಬೇಡ’- ಹುತ್ತದ ಮುಂದಿಟ್ಟ ಆಹಾರ ಸೇವಿಸಿ ವಿದ್ಯಾರ್ಥಿಗಳ ಕ್ಯಾಂಪೇನ್​​

https://newsfirstlive.com/wp-content/uploads/2023/08/Manoj.jpg

Load More