ದೆಹಲಿ ಶ್ರದ್ಧಾ ಹತ್ಯೆ ಮಾದರಿಯಲ್ಲಿ ಬೆಂಗಳೂರಲ್ಲಿ ಮಹಿಳೆ ಕೊ*ಲೆ
ಯುವತಿಯ ದೇಹ 32 ತುಂಡು! 19 ದಿನದ ಹಿಂದೆ ಹಂತಕನ ಪ್ಲಾನ್!
ಎರಡು ದಿನದಿಂದ ಮಹಿಳೆ ಇದ್ದ ಮನೆಯಿಂದ ಬರ್ತಿತ್ತು ಕೆಟ್ಟ ವಾಸನೆ
ಬೆಂಗಳೂರು: 2022ರಲ್ಲಿ ನಡೆದ ದೆಹಲಿಯ ಶ್ರದ್ಧಾ ಹ*ತ್ಯೆ ಕೇಸ್ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಗೆಳತಿಯ ಹತ್ಯೆ ಮಾಡಿ ದೇಹ ಪೀಸ್ ಪೀಸ್ ಮಾಡಿ ಪಾಪಿ ಫ್ರಿಡ್ಜ್‌ನಲ್ಲಿಟ್ಟಿದ್ದು ನೋಡಿ ಜನ ಅಕ್ಷರಶಃ ದಂಗಾಗಿದ್ದರು. ಆದ್ರೀಗ ನಮ್ಮ ಬೆಂಗಳೂರಲ್ಲೇ ದೆಹಲಿ ಮಾದರಿ ಮರ್ಡರ್ ನಡೆದಿರೋದು ಸಿಲಿಕಾನ್ ಸಿಟಿ ಮಂದಿಯ ಎದೆ ಝಲ್ ಅನ್ನುವಂತೆ ಮಾಡಿದೆ.
ಇದನ್ನೂ ಓದಿ: ಫ್ರಿಜ್‌ನಲ್ಲಿ ಮಹಿಳೆ ಕೊ*ಲೆ ಕೇಸ್‌ಗೆ ಹೊಸ ಟ್ವಿಸ್ಟ್.. ನೇಪಾಳ, ನೆಲಮಂಗಲ ಆಮೇಲೆ ವೈಯಾಲಿಕಾವಲ್; ಆಗಿದ್ದೇನು?
ಪ್ರಿಯತಮೆಯನ್ನು ಕೊಂದು 35 ತುಂಡು ಮಾಡಿದ ಅಮಾನವೀಯ ಕೃತ್ಯ ದೆಹಲಿಯಲ್ಲಿ 6 ತಿಂಗಳ ಬಳಿಕ ತಡವಾಗಿ ಬೆಳಕಿಗೆ ಬಂದಿತ್ತು. ಲೀವ್-ಇನ್‌ನಲ್ಲಿದ್ದ ಶ್ರದ್ಧಾ ವಿವಾಹವಾಗು ಎಂದಿದ್ದಕ್ಕೆ ಹ*ತ್ಯೆಗೈದು ಅಫ್ತಾಬ್ ಪೂನಾವಾಲಾ ಫ್ರಿಜ್‌ಗೆ ತುರುಕಿದ್ದ. 18 ದಿನಗಳಲ್ಲಿ ಶವದ 35 ತುಂಡುಗಳನ್ನು ನಡುರಾತ್ರಿ ದಿಲ್ಲಿಯ ಅರಣ್ಯಕ್ಕೆ ಎಸೆದು ಅಫ್ತಾಬ್ ಅಟ್ಟಹಾಸ ಮೆರೆದಿದ್ದ. ದೆಹಲಿಯಲ್ಲಿ ನಡೆದಿದ್ದ ರಣ ಭೀಕರ ಕೊಲೆ ಕಂಡು ಇಡೀ ದೇಶ ಅಕ್ಷರಶಃ ಬೆಚ್ಚಿ ಬಿದ್ದಿತ್ತು. ಮನುಷ್ಯ ರೂಪದ ರಾಕ್ಷಸ ಕೃತ್ಯ ಕಂಡು ಜನ ದಂಗಾಗಿ ಹೋಗಿದ್ರು. ಆದ್ರೀಗ ಬೆಂಗಳೂರಿನಲ್ಲೇ ಇಂಥಾದೊಂದು ಘೋರ ಕೃತ್ಯ ನಡೆದಿರೋದು ಬೆಳಕಿಗೆ ಬಂದಿದೆ.
ದೆಹಲಿ ಶ್ರದ್ಧಾ ಹತ್ಯೆ ಮಾದರಿಯಲ್ಲಿ ಬೆಂಗಳೂರಲ್ಲಿ ಕೊ*ಲೆ!
ಶ್ರದ್ಧಾ ಹ*ತ್ಯೆ ಕಂಡು ದೆಹಲಿ ಬಿಚ್ಚಿ ಬಿದ್ದಿತ್ತು. ಈಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶ್ರದ್ಧಾ ಮಾದರಿಯಲ್ಲಿ ಹತ್ಯೆ ನಡೆದಿರೋದು ಆಶ್ಚರ್ಯಕರವಾಗಿದೆ. ಬೆಂಗಳೂರಿನ ವೈಯಾಲಿ ಕಾವಲ್‌ನಲ್ಲಿ ಯುವತಿಯನ್ನ ಹ*ತ್ಯೆ ಮಾಡಿ ದೇಹವನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿರೋದು ಪತ್ತೆಯಾಗಿದೆ.
ಯುವತಿಯ ದೇಹ 32 ತುಂಡು! 19 ದಿನದ ಹಿಂದೆ ಮರ್ಡ*ರ್?
ಒಂದಲ್ಲ ಎರಡಲ್ಲ ಬರೋಬ್ಬರಿ ಮಹಿಳೆ ದೇಹವನ್ನು 32 ಪೀಸ್ ಮಾಡಿರೋ ಮಾಹಿತಿ ಸಿಕ್ಕಿದೆ. 165 ಲೀಟರ್ ಫ್ರಿಡ್ಜ್‌ನಲ್ಲಿ ಮಹಿಳೆ ಮೃತದೇಹವನ್ನು ತುಂಡು ತುಂಡು ಮಾಡಿ ಇಟ್ಟಿರುವ ದೃಶ್ಯ ನೋಡಿ ಪೊಲೀಸರು ಕೂಡ ಶಾಕ್ ಆಗಿದ್ದಾರೆ.
ಮಹಿಳೆಯನ್ನು ಉಲ್ಟಾ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ
ವೈಯಾಲಿಕಾವಲ್ ಮಹಾಲಕ್ಷ್ಮಿಯನ್ನು ಕೊ*ಲೆ ಮಾಡಿದ್ದ ಹಂತಕ ಮೃತದೇಹವನ್ನು ಉಲ್ಟಾ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದಾನೆ. ಮೃತಳ ತಲೆಯನ್ನು ಫ್ರಿಡ್ಜಿನ ತಳ ಭಾಗದಲ್ಲಿ ಮತ್ತು ಕೈ ಮತ್ತು ಕಾಲುಗಳನ್ನು ಮೇಲ್ಭಾಗದಲ್ಲಿ ಇಡಲಾಗಿತ್ತು. ಮುಖವನ್ನು ಸಹ ಹೊರಗೆ ಕಾಣಿಸದಂತೆ ಕೊಲೆಗಾರ ತಿರುಗಿಸಿ ಇಟ್ಟಿದ್ದ ಎನ್ನಲಾಗಿದೆ.
ಹಂತಕನ ಪ್ಲಾನ್ ನಿಜಕ್ಕೂ ಭಯಾನಕ
ಫ್ರೀಜರ್‌ನಿಂದ ದೇಹದ ಪೀಸ್‌ಗಳನ್ನು ಹೊರ ತೆಗೆದ ಅಧಿಕಾರಿಗಳು ಅದನ್ನು ಲೆಕ್ಕ ಹಾಕುವಾಗಲೇ ಬೆಚ್ಚಿ ಬಿದ್ದಿದ್ದಾರೆ. ದೇಹವನ್ನು 30ಕ್ಕೂ ಪೀಸ್ ಮಾಡಿರೋದು ಭಯಾನಕವಾಗಿದೆ. ಕೊ*ಲೆ ಮಾಡಿದ ಹಂತಕ ಎಸ್ಕೇಪ್ ಅಗಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಫ್ರಿಡ್ಜ್‌ನಲ್ಲಿ ಮೃತ ದೇಹದ ತುಂಡು ಕತ್ತರಿಸಿ ಇಟ್ರೆ ಅಷ್ಟು ಸುಲಭದಲ್ಲಿ ಗೊತ್ತಾಗಲ್ಲ. ತಪ್ಪಿಸಿಕೊಳ್ಳಲು ಟೈಮ್ ಸಿಗುತ್ತೆ ಅಂತ ಈ ಪ್ಲಾನ್ ಮಾಡಿದ್ದಾನೆ.
ಫ್ರಿಡ್ಜ್ ಆನ್ ಮಾಡಿ ಇಟ್ಟು ಹೋಗಿದ್ದ ಹಂತಕ, 15 ದಿನದ ಹಿಂದೆ ಕೊ*ಲೆ ಆಗಿದ್ರು ಕೂಡ ಒಂದು ಚೂರು ವಾಸನೆ ಬಂದಿಲ್ಲ. ತಪ್ಪಿಸಿಕೊಳ್ಳಲು ಸಮಯ ಬೇಕಾಗುತ್ತೆ ಅಂತಲೇ ಈ ರೀತಿ ಪ್ಲಾನ್ ಮಾಡಿರುವ ಸಾಧ್ಯತೆ ಇದೆ. ಇದೀಗ ಈ ಆರೋಪಿಯ ಜಾಡು ಪತ್ತೆ ಮಾಡೋದೋ ಪೊಲೀಸರಿಗೆ ದೊಡ್ಡ ಸವಾಲಾಗಿದೆ.
ಇದನ್ನೂ ಓದಿ: 30 ಪೀಸ್ ಮಾಡಿದ್ದ ಯುವತಿ ದೇಹ ಫ್ರಿಜ್‌ನಲ್ಲಿ ಪತ್ತೆ.. ಬೆಂಗಳೂರಲ್ಲಿ ದೆಹಲಿ ಮಾದರಿಯ ಭಯಾನಕ ಹ*ತ್ಯೆ!
ಎರಡು ದಿನದಿಂದ ಮನೆಯಿಂದ ಬರ್ತಿತ್ತು ಕೆಟ್ಟ ವಾಸನೆ!
ಸುಮಾರು 19 ದಿನದ ಹಿಂದೆ ಕೊಲೆಯಾಗಿದ್ರು ಇಲ್ಲೊಂದು ಕೊಲೆ ನಡೆದಿದೆ ಅನ್ನೋದು ಯಾರಿಗೂ ಅರಿವಿಗೆ ಬಂದಿರಲಿಲ್ಲ. ಯಾವಾಗ ಈ ಮನೆಯಿಂದ ದುರ್ವಾಸನೆ ಬರೋದಕ್ಕೆ ಶುರುವಾಯ್ತೋ ಆಗಲೇ ಅಕ್ಕ ಪಕ್ಕದ ಮನೆಯವರಿಗೆ ಅನುಮಾನ ಬಂದಿದೆ. ಆಗ ಯುವತಿ ಸಂಬಂಧಿಕರಿಗೆ ವಿಚಾರ ತಿಳಿಸಿದ್ದಾರೆ. ಯುವತಿಯ ಅಕ್ಕ ಮತ್ತು ತಾಯಿ ಮನೆ ಬಳಿ ಬಂದು ಬೀಗ ಒಡೆದು ನೋಡಿದಾಗ ಯುವತಿ ಕೊಲೆಯಾಗಿರೋದು ಗೊತ್ತಾಗಿದೆ. ದುರಂತ ಏನಂದ್ರೆ ಬೀಗ ಒಡೆಯುವ ಸಂದರ್ಭದಲ್ಲಿ ಮನೆಯಿಂದ ಹುಳುಗಳು ಹೊರಗೆ ಬರ್ತಿದ್ವಂತೆ.
ಮನೆಯ ಮೊದಲ ಮಹಡಿಯಲ್ಲಿ ಯುವತಿ ಕೊ*ಲೆಯಾಗಿದ್ದು ಮೃತ ಮಹಿಳೆ ಹೆಸರು ಮಹಾಲಕ್ಷ್ಮಿ ಅನ್ನೋದು ಗೊತ್ತಾಗಿದೆ. ಮಹಾಲಕ್ಷ್ಮಿಗೆ ಮದುವೆಯಾಗಿದ್ದು, ಈಕೆ ಗಂಡ ನೆಲಮಂಗಲದಲ್ಲಿ ವಾಸವಿದ್ದಾನೆ. ಗಂಡನಿಂದ ಕೆಲ ವರ್ಷಗಳಿಂದ ದೂರವಾಗಿದ್ದ ಮಹಿಳೆ ವೈಯಾಲಿಕಾವಲ್ನಲ್ಲಿ ಒಂಟಿಯಾಗಿ ವಾಸವಿದ್ದಳು.
ಇದನ್ನೂ ಓದಿ: 2 ತಿಂಗಳ ಗರ್ಭಿಣಿ ಮಾಡೆಲ್ ಮೃತದೇಹ ಫ್ರಿಡ್ಜ್‌ನಲ್ಲಿ ಪತ್ತೆ.. ಕೊಲೆಗಾರನಿಗಾಗಿ ಪೊಲೀಸರ ಹುಡುಕಾಟ
ಅನೈತಿಕ ಸಂಬಂಧಕ್ಕೆ ನಡೀತಾ ಮಹಿಳೆಯ ಹ*ತ್ಯೆ?
ಈ ಮಹಾಲಕ್ಷ್ಮಿ ಮೂಲ ನೇಪಾಳದವವರು ಅಂತ ತಿಳಿದು ಬಂದಿದೆ. ಈಕೆ ಗಂಡ ನೆಲಮಂಗಲದ ಬಸವಣ್ಣ ದೇವರ ಮಠದಲ್ಲಿ ಕೆಲಸ ಮಾಡುತ್ತಿದ್ದನಂತೆ. ಈ ವೇಳೆ ಕಟ್ಟಿಂಗ್ ಶಾಪ್ನಲ್ಲಿ ಕೆಲಸ ಮಾಡೋನ ಜೊತೆ ಮಹಾಲಕ್ಷ್ಮಿ ಆತ್ಮೀಯತೆ ಬೆಳೆದಿತ್ತು. ಇದೇ ವಿಚಾರಕ್ಕೆ ಜಗಳ ನಡೆದು ಮಹಾಲಕ್ಷ್ಮಿ ಒಂಟಿಯಾಗಿ ವೈಯಾಲಿಕಾವಲ್ನಲ್ಲಿ ರೂಮ್ ಮಾಡ್ಕೊಂಡಿದ್ದಳು. ಹಲವು ದಿನದಿಂದ ಪತಿ ಕರೆ ಮಾಡಿದಾಗ ಮಹಾಲಕ್ಷ್ಮಿ ಕರೆ ಸ್ವೀಕರಿಸಿರಲಿಲ್ಲ ಇಂದು ಬಂದು ಬಾಗಿಲು ತೆರೆದು ನೋಡಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ.
ಇಷ್ಟು ದಿನ ದೂರದ ದೆಹಲಿ ಉತ್ತರ ಪ್ರದೇಶದಲ್ಲಿ ಇಂಥಾ ಹತ್ಯೆಗಳು ನಡೀತಾ ಇರೋದು ಕೇಳಿ ಬರ್ತಿತ್ತು. ಆದ್ರೀಗ ರಾಜಧಾನಿ ಬೆಂಗಳೂರಲ್ಲೇ ಬೆಚ್ಚಿ ಬೀಳಿಸರುವ ಮರ್ಡರ್ ನಡೆದಿರೋದು ಸಿಟಿ ಮಂದಿಯ ನಿದ್ದೆಗೆಡಿಸಿರೋದಂತು ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ