newsfirstkannada.com

ಕೌಟುಂಬಿಕ ಕಲಹ.. ಹೆಂಡತಿ, ಅತ್ತೆಯನ್ನು ಕೊಲೆಗೈದ ಗಂಡ; ಆಮೇಲೆ ಏನ್​ ಮಾಡಿದ ಗೊತ್ತಾ?

Share :

18-09-2023

    ಕಳೆದ ಆರು ತಿಂಗಳುಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದ ವ್ಯಕ್ತಿ

    ಕಟ್ಟಿಗೆಯಿಂದ ತಲೆಗೆ ಹೊಡೆದು ಪತ್ನಿ ಹಾಗೂ ಅತ್ತೆ ಕೊಲೆ ಮಾಡಿದ ಗಂಡ

    ಇಬ್ಬರನ್ನು ಕೊಲೆಗೈದ ಬಳಿಕ ಮತ್ತೇನು ಮಾಡಿದ ಗೊತ್ತಾ? ಈ ಸ್ಟೋರಿ ಓದಿ

ವಿಜಯಪುರ: ವ್ಯಕ್ತಿಯೋರ್ವ ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿ‌ ಹಾಗೂ ಅತ್ತೆಯನ್ನು ಕೊಲೆ‌ಗೈದು ಪೊಲೀಸರಿಗೆ ಶರಣಾದ ಘಟನೆ ವಿಜಯಪುರ ನಗರದ ನವಬಾಗ್​ನಲ್ಲಿ ನಡೆದಿದೆ. ರೂಪಾ ಮೇತ್ರಿ (32)ಕಲ್ಲವ್ವ (55) ಕೊಲೆಯಾದವರು.

ಮಲ್ಲಿಕಾರ್ಜುನ ಎಂಬ ವ್ಯಕ್ತಿ ಪತ್ನಿ ಹಾಗೂ ಅತ್ತೆಯನ್ನು ಕೊಲೆಗೈದಿದ್ದಾನೆ. ನವಭಾಗ್ ಪ್ರದೇಶದ ಭಾಗವಾನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಮಲ್ಲಿಕಾರ್ಜುನ ಬಾಡಿಗೆಯಿದ್ದನು. ಮೂವರು ಮಕ್ಕಳು ಪತ್ನಿ ಹಾಗೂ ಅತ್ತೆಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದನು.

ಕಳೆದ ಆರು ತಿಂಗಳುಗಳಿಂದ ನವಬಾಗ್ ಪ್ರದೇಶದಲ್ಲಿ ಮಲ್ಲಿಕಾರ್ಜುನ ಕುಟುಂಬ ವಾಸವಿತ್ತು. ಆದರೆ ಪತ್ನಿ ರೂಪಾ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲವಂತೆ. ಮನೆಯಲ್ಲಿ ಕೆಲಸ ಮಾಡುತ್ತಿರಲಿಲ್ಲವಂತೆ. ಮಹಿಳಾ ಹಾಗೂ ವಿವಿಧ ಸಂಘಟನೆ‌ಗಳ ಕೆಲಸದ ಕಾರಣ ರೂಪಾ ಸದಾ ಮನೆಯಾಚೆ ಇರುತ್ತಿದ್ದಳು. ಇದರಿಂದ ಪತಿ ಮಲ್ಲಿಕಾರ್ಜುನ‌ ರೋಸಿ ಹೋಗಿದ್ದ.

ರಾತ್ರಿ ಮಲಗಿದ್ದ ವೇಳೆ ಪತಿ ಮಲ್ಲಿಕಾರ್ಜುನ‌ ಕಟ್ಟಿಗೆಯಿಂದ ತಲೆಗೆ ಹೊಡೆದು ಪತ್ನಿ ಹಾಗೂ ಅತ್ತೆ ಕೊಲೆ ಮಾಡಿದ್ದಾನೆ. ಕೊಲೆಗೈದ ಬಳಿಕ ಗಾಂಧಿಚೌಕ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೌಟುಂಬಿಕ ಕಲಹ.. ಹೆಂಡತಿ, ಅತ್ತೆಯನ್ನು ಕೊಲೆಗೈದ ಗಂಡ; ಆಮೇಲೆ ಏನ್​ ಮಾಡಿದ ಗೊತ್ತಾ?

https://newsfirstlive.com/wp-content/uploads/2023/09/Murder-2.jpg

Load More