newsfirstkannada.com

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ.. ಹೈ-ಅಲರ್ಟ್​!

Share :

Published June 28, 2024 at 5:33pm

Update June 28, 2024 at 5:39pm

    ಕಳೆದೊಂದು ತಿಂಗಳಿನಿಂದ ಬಿಸಿಲಿನ ತಾಪಮಾನಕ್ಕೆ ಕಂಗೆಟ್ಟ ಬೆಂಗಳೂರು

    ಕೊನೆಗೂ ಬೆಂಗಳೂರಿಗರಿಗೆ ಗುಡ್​ನ್ಯೂಸ್​ ಕೊಟ್ಟ ಹವಾಮಾನ ಇಲಾಖೆ..!

    ರಾಜ್ಯದಲ್ಲಿ ಇಂದಿನಿಂದ ಒಂದು ವಾರಗಳ ಭರ್ಜರಿ ಮಳೆ ಎಂದು ಮುನ್ಸೂಚನೆ

ಬೆಂಗಳೂರು: ಕಳೆದೊಂದು ತಿಂಗಳಿನಿಂದ ಬಿಸಿಲಿನ ತಾಪಮಾನಕ್ಕೆ ಕಂಗೆಟ್ಟಿದ್ದ ಬೆಂಗಳೂರಿಗೆ ಗುಡ್​ನ್ಯೂಸ್​ ಇದೆ. ಸದ್ಯ ಬೆಂಗಳೂರಲ್ಲಿ ಜೋರು ಮಳೆಯಾಗುತ್ತಿದ್ದು, ಇನ್ನೂ 24 ಗಂಟೆಗಳು ವರುಣನ ಆರ್ಭಟ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಈ ಹಿಂದೆ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಜೂನ್​​ 29 ಮತ್ತು 30ರ ಬಳಿಕ ಬೆಂಗಳೂರಿನಲ್ಲಿ ಮಳೆಯಾಗಲಿದೆ. ಬೆಂಗಳೂರು ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಮಳೆ ಸಿಂಚನವಾಗಲಿದೆ ಎಂದು ತಿಳಿದು ಬಂದಿತ್ತು. ಆದರೆ, ಇಂದಿನಿಂದಲೇ ಮಳೆ ಶುರುವಾಗಲಿದೆ.

ಇನ್ನು, ಈಗಾಗಲೇ ರಾಜ್ಯದ ಹಲವೆಡೆ ಮಳೆ ಬಿದ್ದಿದೆ. ಇಷ್ಟಾದ್ರೂ ಇನ್ನೂ ಒಂದೇ ಒಂದು ಹನಿ ಕೂಡ ಬೆಂಗಳೂರಲ್ಲಿ ಬೀಳಲಿಲ್ಲ. ಹೀಗಾಗಿ ಬೆಂಗಳೂರಿಗರು ಬೇಸಿಗೆಯ ಬಿರು ಬಿಸಿಲಿಗೆ ಹೈರಾಣಾಗಿ ಹೋಗಿದ್ದಾರೆ.

ಕೊಡಗು, ಚಿಕ್ಕಮಗಳೂರು, ಮೈಸೂರು, ಧಾರವಾಡ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಬೀದರ್ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಜುಲೈ ತಿಂಗಳಿನಲ್ಲಿ ಈ ಭಾಗದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ.

ಇದನ್ನೂ ಓದಿ: ಖ್ಯಾತ ನಿರ್ಮಾಪಕನಿಗೆ ಬಡ್ಡಿ ದಂಧೆಕೋರರ ಕಿರುಕುಳ; 13 ಕೋಟಿ ನೀಡುವಂತೆ ಬೆದರಿಕೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ.. ಹೈ-ಅಲರ್ಟ್​!

https://newsfirstlive.com/wp-content/uploads/2024/05/Heavy-Rains-Karnataka.jpg

Load More