/newsfirstlive-kannada/media/post_attachments/wp-content/uploads/2024/11/Kadalekayi-Parishe-1.jpg)
ಕಡಲೆ ಕಾಯಿ ಪರಿಷೆ ಅಂದ್ರೆ ಅದು ಬಸವನಗುಡಿ ಕಡಲೆ ಕಾಯಿ ಪರಿಷೆ.. ಸಿಲಿಕಾನ್​ ಸಿಟಿ ಮಂದಿ ಕಾತುರದಿಂದ ಕಾಯ್ತಿರೋ ಕಡಲೆ ಕಾಯಿ ಹಬ್ಬಕ್ಕೆ ಇನ್ನೇನು ಕೆಲವೇ ಕೆಲವು ಗಂಟೆಗಳು ಮಾತ್ರ ಬಾಕಿ ಇದ್ದು, ಇಂದಿನಿಂದ ಬಸವನಗುಡಿ ರಸ್ತೆಯಲ್ಲಿ ಕಡಲೆ ಕಾಯಿಯ ಘಮಲು ಮೂಗಿಗೆ ಬಡಿಯಲಿದೆ.
ಕೈಯಲ್ಲಿ ಸೇರು, ಸೇರು ತುಂಬ ಬಡವರ ಬಾದಾಮಿ, ಕಡಲೆ ಕಾಯಿ ಹಬ್ಬಕ್ಕೆ ಬಸವನ ಗುಡಿ ಸಜ್ಜಾಗಿದೆ. ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆ ಕಾರ್ತಿಕ ಸೋಮವಾರ ಅಂದ್ರೆ, ನಾಳೆಯಿಂದ ಆರಂಭವಾಗಲಿದೆ.. ಇನ್ನೂ, ಇಂದು ವಿಕೇಂಡ್ ಆದ ಕಾರಣ ಇವತ್ತೇ ಜನ್ರು ಬಸವನಗುಡಿಗೆ ಭೇಟಿ ಕೊಟ್ಟಿದ್ರು. ಬಸವಣ್ಣನ ದರ್ಶನ ಪಡೆದು, ಕಡಲೆಕಾಯಿಯನ್ನ ಖರೀದಿಸಿದ್ದಾರೆ.ಇಷ್ಟೇ ಅಲ್ಲ, ಕಡಲೆಕಾಯಿ ಜೊತೆಗೆ ತರಹೇವಾರಿ ತಿಂಡಿ ತಿನಿಸು, ಆಟಿಕೆಗಳು ಕೂಡ ಬಸವನಗುಡಿ ಪರಿಷೆಗೆ ಮತ್ತಷ್ಟು ಮೆರಗು ನೀಡುತ್ತಿವೆ. ತೆಪ್ಪೋತ್ಸವ ಕೂಡ ಇದ್ದು, ಜನರು ಕಣ್ತುಂಬಿಕೊಳ್ಳೋಕೆ ಕಾಯುತ್ತಿದ್ದಾರೆ. ಜನ ಹೆಚ್ಚಾಗಿ ಸೇರುವ ಕಾರಣ ಪೊಲೀಸ್ ಕೂಡ ಟ್ರಾಫಿಕ್ ನಿರ್ವಹಣೆ ಮಾಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/11/Kadalekayi-Parishe.jpg)
ಇದನ್ನೂ ಓದಿ:ಅಂದು ಪ್ರತಿಷ್ಠಿತ ಕಂಪನಿಯಲ್ಲಿ ಟೆಕ್ಕಿ, ಇಂದು ಭಿಕ್ಷುಕ.. ಬೆಂಗಳೂರಲ್ಲಿ ಒಂದು ಕರುಣಾಜನಕ ಸ್ಟೋರಿ! Video
ಸಿಲಿಕಾನ್​ ಸಿಟಿ ಮಂದಿ ಕಾತುರದಿಂದ ಕಾಯ್ತಿದ್ದ ಕಡಲೆ ಕಾಯಿ ಹಬ್ಬ ಬೆಳಗಾಗ್ತಿದ್ದಂತೆ ಶುರುವಾಗ್ತಿದೆ.. ಮತ್ಯಾಕೆ ತಡ. ನೀವು ನಿಮ್ಮವರ ಜೊತೆ ಹೋಗಿ ಪರಿಷೆಯನ್ನ ಕಣ್ತುಂಬಿಕೊಳ್ಳಿ.ಐತಿಹಾಸಿಕ ಕಡಲೆಕಾಯಿ ಪರಿಷೆ ಇಂದಿನಿಂದ ಆರಂಭವಾಗುವ ಹಿನ್ನೆಲೆ ಸುತ್ತಮುತ್ತ ಪ್ರದೇಶಗಳಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಲ್ಲಿ ನೋಡಿದರು ಕಡಲೆಕಾಯಿ ಮಳಿಗೆಗಳ ಸಾಲು ಕಾಣುತ್ತಿದ್ದು, ವ್ಯಾಪಾರಿಗಳು ಠಿಕಾಣಿ ಹೂಡಿದ್ದಾರೆ.
/newsfirstlive-kannada/media/post_attachments/wp-content/uploads/2024/11/Kadalekayi-Parishe-2.jpg)
ಬಸವನಗುಡಿ ಟೆಂಪಲ್ ರಸ್ತೆಯಲ್ಲಿ ಗ್ರಾಮೀಣ ಸೊಗಡು ಅನಾವರಣಗೊಂಡಿದೆ. ಇಂದು ಅಧಿಕೃತವಾಗಿ ಪರಿಷೆಗೆ ಚಾಲನೆ ಸಿಗಲಿದ್ದು. ಬೆಳಗ್ಗೆ 10 ಗಂಟೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟನೆ ಮಾಡಲಿದ್ದಾರೆ. ಅವರ ಜೊತೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚ ರಾಮಲಿಂಗರೆಡ್ಡಿ, ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ, ಬಸವನಗುಡಿ ಶಾಸಕರಾದ ರವಿ ಸುಬ್ರಮಣ್ಯಂ ಕೂಡ ಇರಲಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಪೊಲೀಸ್ ಗುಂಡಿನ ಸದ್ದು; ಇಬ್ಬರು ನಟೋರಿಯಸ್ ದರೋಡೆಕೋರರಿಗೆ ಗುಂಡೇಟು​
ಈ ಬಾರಿ ಪ್ಲಾಸ್ಟಿಕ್ ಮುಕ್ತ ಪರಿಷೆಯನ್ನು ಜಾರಿಗೆ ತರಲು ಪಣ ತೊಡಲಾಗಿದ್ದು ಪ್ಲಾಸ್ಟಿಕ್ ಬಳಸದಂತೆ ವ್ಯಾಪಾರಿಗಳಲ್ಲಲಿ ಜಾಗೃತಿ ಮೂಡಿಸಲು ಪಾಲಿಕೆ ಹಾಗೂ ಮುಜರಾಯಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಅದು ಮಾತ್ರವಲ್ಲ ಈ ಹಿಂದೆ ಟೆಂಡರ್ ಪಡೆದವರ ಬಳಿ ಪ್ರತಿ ಮಳಿಗೆಯಿಂದ ದಿನಕ್ಕೆ 500 ರಿಂದ 1000 ರೂಪಾಯಿವರೆಗೆ ಸುಂಕ ವಸೂಲಿ ಮಾಡಲಾಗುತ್ತಿತ್ತು. ಹಲವು ದೂರು ಬಂದ ಕಾರಣ ವ್ಯಾಪಾರಿಗಳಿಂದ ಸುಂಕ ವಸೂಲಿ ಮಾಡದಂತೆ ಸೂಚನೆ ನೀಡಲಾಗಿದೆ. ಆದರೂ ಕೂಡ ಕಡಲೆಕಾಯಿ ದರ ಮಾತ್ರ ಹಾಗೆಯೇ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us