newsfirstkannada.com

ಸಾವಿರಾರು ಕೋಟಿ ಕರೆಂಟ್​​ ಬಿಲ್​ ಬಾಕಿ; ಸರ್ಕಾರಿ ಇಲಾಖೆಗಳಿಂದಲೇ ಬೆಸ್ಕಾಂಗೆ ಸಂಕಷ್ಟ!

Share :

04-08-2023

    ಸಾವಿರಾರು ಕೋಟಿ ರೂ. ಕರೆಂಟ್​​ ಬಿಲ್​ ಬಾಕಿ

    ಸರ್ಕಾರಿ ಇಲಾಖೆಗಳಿಂದಲೇ ಬೆಸ್ಕಾಂಗೆ ಸಂಕಷ್ಟ!

    ಸಾರ್ವಜನಿಕರು ಓದಲೇಬೇಕಾದ ಸ್ಟೋರಿ ಇದು

ಬೆಂಗಳೂರು: ಜನರಿಗೆ ಗ್ಯಾರಂಟಿ ಕೋಡಬೇಕು ಎಂದು ಕಾಂಗ್ರೆಸ್ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಇದ್ರ ನಡುವೆ ಜನ್ರಿಗೆ ಬೆಲೆ ಏರಿಕೆ ಬರೆ ಬೇರೆ ಬೀಳ್ತಿದೆ. ಬೆಲೆ ಏರಿಕೆ ಮಾಡಿ ಅದ್ರಿಂದ ಗ್ಯಾರಂಟಿಗಳಿಗೆ ಹಣ ಹೊಂದಿಸ್ತಿದೆ ಅಂತಾ ಆರೋಪ ಕೇಳಿಬರ್ತಿದೆ. ಆದ್ರೆ ಅದೇ ಸರ್ಕಾರ ತನ್ನದೇ ಇಲಾಖೆಗಳಿಂದ ಬರಬೇಕಿರೋ ಹಣದತ್ತ ಅದ್ಯಾಕೆ ಗಮನ ಕೊಡ್ತಿಲ್ಲ. ಜನ್ರು ವಿದ್ಯುತ್‌ ಬಿಲ್‌ ಕಟ್ಟೋವರೆಗೂ ಬಿಡದ ಬೆಸ್ಕಾಂ ಅದೇ ಸರ್ಕಾರಿ ಇಲಾಖೆಯಿಂದ ಸಾವಿರಾರು ಕೋಟಿ ರೂಪಾಯಿ ಬಿಲ್ ಉಳಿಸಿಕೊಂಡಿದ್ರು ಕೂಡ ವಸೂಲಿ ಮಾಡೋ ಕೆಲಸಕ್ಕೆ ಕೈ ಹಾಕಿಲ್ಲ.

ಜನ ಸಾಮಾನ್ಯರಿಗೊಂದು ನ್ಯಾಯ, ಸರ್ಕಾರಿ ಇಲಾಖೆಗೆ ಒಂದು ನ್ಯಾಯ ಅನ್ನುವಂತಾಗಿದೆ ಬೆಸ್ಕಾಂ ನಿಯಮ. ಜೂನ್‌ 30ರವರೆಗಿನ ಅಂಕಿ ಅಂಶಗಳ ಪ್ರಕಾರ ಸರ್ಕಾರಿ ಇಲಾಖೆಯಿಂದ ಬೆಸ್ಕಾಂಗೆ 5 ಸಾವಿರದ 653 ಕೋಟಿ ರೂಪಾಯಿ ವಿದ್ಯುತ್ ಬಿಲ್‌ ಪಾವತಿಸಬೇಕಿದೆ. ಯ್ಯಾವಾವ ಇಲಾಖೆ ಎಷ್ಟೆಷ್ಟು ಬಿಲ್ ಉಳಿಸಿಕೊಂಡಿದೆ ಎಂದು ನೋಡುವುದಾದ್ರೆ..!

ಯಾವ್ಯಾವ ಇಲಾಖೆಯಿಂದ ಬಾಕಿ

ಬೆಸ್ಕಾಂ ಇಲಾಖೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 4 ಸಾವಿರ 67 ಕೋಟಿ ಬಿಲ್‌ ಪಾವತಿಸಬೇಕಾಗಿದೆ. ನಗರಾಭಿವೃದ್ಧಿ ಇಲಾಖೆ 129 ಕೋಟಿ, ಬಿಬಿಎಂಪಿ 684 ಕೋಟಿ, ಬಿಡಬ್ಲ್ಯೂಎಸ್‌ಎಸ್‌ಬಿ 484 ಕೋಟಿ ರೂಪಾಯಿ ಬಿಲ್‌ ಕಟ್ಟಬೇಕು. ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ 59.51 ಕೋಟಿ, ಜಲಸಂಪನ್ಮೂಲ ಇಲಾಖೆ 44.23 ಕೋಟಿ, ಸಣ್ಣ ನೀರಾವರಿ ಇಲಾಖೆ 7.51 ಕೋಟಿ ವಿದ್ಯುತ್ ಬಿಲ್ ಪಾವತಿಸಿಲ್ಲ. ಇನ್ನು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 8.99 ಕೋಟಿ, ಇನ್ನಿತರ ರಾಜ್ಯ ಸರ್ಕಾರಿ ಇಲಾಖೆ 107.53 ಹಾಗೂ ಇನ್ನಿತರ ಕೇಂದ್ರ ಸರ್ಕಾರಿ ಇಲಾಖೆ 59.90 ಕೋಟಿ ವಿದ್ಯುತ್ ಬಿಲ್ ಪಾವತಿಸಬೇಕಾಗಿದೆ.

ಒಟ್ನಲ್ಲಿ, ಜನ ಸಾಮಾನ್ಯರು ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿದ್ರೆ ಕ್ರಮ ಕೈಗೊಳ್ಳೋ ಇಲಾಖೆ, ಇದೀಗ ಸರ್ಕಾರಿ ಇಲಾಖೆ ಸಾವಿರಾರು ಕೋಟಿ ವಿದ್ಯುತ್‌ ಬಿಲ್ ಬಾಕಿ ಉಳಿಸಿಕೊಂಡಿವೆ. ನ್ಯಾಯ ಎಲ್ಲರಿಗೂ ಒಂದೇ ಅನ್ನೋದಾದ್ರೆ ಇಲಾಖೆಗಳ ವಿರುದ್ಧ ಬೆಸ್ಕಾಂ ಕ್ರಮ ತೆಗೆದುಕೊಳ್ಳುತ್ತಾ ಇಲ್ವಾ ಅನ್ನೋದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಸಾವಿರಾರು ಕೋಟಿ ಕರೆಂಟ್​​ ಬಿಲ್​ ಬಾಕಿ; ಸರ್ಕಾರಿ ಇಲಾಖೆಗಳಿಂದಲೇ ಬೆಸ್ಕಾಂಗೆ ಸಂಕಷ್ಟ!

https://newsfirstlive.com/wp-content/uploads/2023/08/Current-Bill.jpg

Load More