newsfirstkannada.com

ಸಖತ್ ಸೌಂಡ್ ಮಾಡ್ತಿದೆ ಸೀತಾರಾಮ ಜೋಡಿ; ಚಿನ್ನಪ್ಪ -ವೈಷ್ಣವಿ ಬಾಂಡ್​​ಗೆ ಫ್ಯಾನ್ಸ್​ ಫಿದಾ!

Share :

02-08-2023

    ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್ ಮಾಡ್ತಿದೆ ಸೀತಾರಾಮ ​​

    ಥೇಟ್​ ಸೀತಾರಾಮನ ಹಾಗೇ ಇದ್ದಾರಂತೆ ಗಗನ್​ & ವೈಷ್ಣವಿ ಜೋಡಿ

    ಸೀತಾರಾಮ ಜೋಡಿ ನಟನೆಗೆ ಫಿದಾ ಆದ್ರು ಸೀರಿಯಲ್​​​​​ ವೀಕ್ಷಕರು..!

ಕಿರುತೆರೆ ಅಂಗಳದಲ್ಲೇ ಮೋಸ್ಟ್ ಅವೈಟೆಡ್ ಮೂಮೆಂಟ್ ಅಂದರೆ ಸೀತಾ ರಾಮ ಧಾರಾವಾಹಿ ಸ್ಲಾಟ್. ಇದೀಗ ಎಲ್ಲೆಡೆ ಸೀತಾರಾಮ ಸಖತ್​ ಸೀರಿಯಲ್​​ ಸಖತ್​ ಸೌಂಡ್ ಮಾಡುತ್ತಿದೆ. ಸೀತಾರಾಮದ ಇಂಟ್ರಸ್ಟಿಂಗ್​ ವಿಚಾರ ಅಂದ್ರೆ ಮೊದಲು ನಾಯಕ ನಾಯಕಿ ಪಾತ್ರಕ್ಕೆ ಆಯ್ಕೆಯಾಗಿದ್ದು, ವೈಷ್ಣವಿ -ವಿಜಯ್​ ಸೂರ್ಯ. ಅಗ್ನಿಸಾಕ್ಷಿಯ ಈ ಜೋಡಿಯನ್ನೇ ಸೀತಾರಾಮರನ್ನಾಗಿ ಮಾಡಬೇಕೇಂದು ತಂಡ ಪ್ರಯತ್ನಪಟ್ಟಿತು. ಆದ್ರೆ ವಿಜಯ್​ ಸೂರ್ಯ ಬೇರೆ ಎರಡು ಪ್ರಾಜೆಕ್ಟ್​​ನಲ್ಲಿ ಬ್ಯುಸಿ ಇದ್ದ ಕಾರಣ ಈ ಜೋಡಿ ಮತ್ತೆ ಒಂದಾಗೋಕೆ ಆಗಲಿಲ್ಲ. ರಾಮನ ಪಾತ್ರಕ್ಕೆ ಇನ್ಯಾರು ಬರ್ತಾರೆ ಅಂತಾ ಹುಡುಕಾಟದಲ್ಲಿದ್ದ ಕಣ್ಗಳಿಗೆ ಕಂಡದ್ದು ಗಗನ್​ ಚಿನ್ನಪ್ಪ.

ಮಂಗಳಗೌರಿ ಮದುವೆ ಮೂಲಕ ವೀಕ್ಷಕರ ಮನಸ್ಸು ಗೆದ್ದಿದ್ದ ಗಗನ್​​ ಈ ಸೀರಿಯಲ್​​ ನಂತರ ತೆಲುಗಿನಲ್ಲಿ ಬ್ಯುಸಿಯಾಗಿದ್ದರು. ಜೊತೆಗೆ ಸಿನಿಮಾಗಳಲ್ಲೂ ತೊಡಗಿಸಿಕೊಂಡಿದ್ದರು. ಈ ನಡುವೆ ಗಗನ್​ ಅವರನ್ನ ಅರಸಿ ಬಂದಿದ್ದು ರಾಮ. ವರ್ಷದ ನಂತರ ಗಗನ್​ ಕನ್ನಡ ಪ್ರೇಕ್ಷಕರ ಮನೆಗೆ ಮರಳಿದರು. ​ಇನ್ನೂ ವಿಜಯ್​ ಸೂರ್ಯ-ವೈಷ್ಣವಿ ಜೋಡಿ ಮತ್ತೆ ಒಂದಾಗಿ ತೆರೆಗೆ ಬರ್ತಾರೆ ಅಂತಾ ಕಾಯುತ್ತಿದ್ದ ವೀಕ್ಷಕರಿಗೆ ನಿರಾಸೆ ಆಗಿದ್ದು ನಿಜ. ಮೊದಲು ವೈಷ್ಣವಿ-ಗಗನ್​ ಜೋಡಿ ಕ್ಲಿಕ್​ ಆಗುತ್ತಾ? ಎಂಬ ಅನುಮಾನ ಮೂಡಿದ್ದು ನಿಜ. ಈ ಎಲ್ಲಾ ಅನುಮಾನಗಳನ್ನ ದೂರ ಮಾಡಿದೆ ಗಗನ್​-ವೈಷ್ಣವಿ ಜೋಡಿಯ ಕೆಮಿಸ್ಟ್ರಿ.

ಸೀರಿಯಲ್​ ಪ್ರಿಯರು ಈ ಜೋಡಿಗೆ ಫಿದಾ ಆಗಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಕಾಂಪ್ಲಿಮೆಂಟ್​ ಮಾಡುವಂತಿದ್ದಾರೆ. ತೆರೆ ಮೇಲೆ ಇಷ್ಟು ಅದ್ಭುತವಾಗಿ ಕಾಣಿಸಿಕೊಳ್ಳೋಕೆ ಕಾರಣ ತೆರೆಹಿಂದಿನ ಅವರ ಬಾಂಡಿಂಗ್​ ಆ ಫ್ರೆಂಡ್‌ಶಿಪ್. ಒಟ್ಟಿನಲ್ಲಿ ವ್ಹಾವ್​ ಏನ್​ ಜೋಡಿನಪ್ಪ, ಥೇಟ್​ ಸೀತಾರಾಮನ ಥರನೇ ಇದ್ದಾರೆ. ಹೀಗೆ ಇರಲಿ ಅಂತೆಲ್ಲಾ ಜನ ಮಾತನಾಡಿಕೊಳ್ಳುವ ಮಟ್ಟಿಗೆ ಯಶಸ್ವಿಯಾಗ್ತಿದೆ ಗಗನ್​-ವೈಷ್ಣವಿ ಮೋಡಿ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಸಖತ್ ಸೌಂಡ್ ಮಾಡ್ತಿದೆ ಸೀತಾರಾಮ ಜೋಡಿ; ಚಿನ್ನಪ್ಪ -ವೈಷ್ಣವಿ ಬಾಂಡ್​​ಗೆ ಫ್ಯಾನ್ಸ್​ ಫಿದಾ!

https://newsfirstlive.com/wp-content/uploads/2023/08/ramaseta-4.jpg

Load More