newsfirstkannada.com

ಈ ವಾರ ಅತೀಹೆಚ್ಚು ಜನ ವೀಕ್ಷಿಸಿದ ಕನ್ನಡ ಸೀರಿಯಲ್​​ ಯಾವುದು? ಹೇಗಿದೆ TRP?

Share :

24-06-2023

  ಅಕ್ಕ ತಂಗಿಗೆ ಟಕ್ಕರ್​ ಕೊಡಲು ಮುಂದಾದ ಅಮೃತಧಾರೆ

  ಯಾವ ಧಾರಾವಾಹಿಗೆ ಟಿಆರ್​ಪಿಯಲ್ಲಿ ಮೊದಲ ಸ್ಥಾನ?

  ಕಿರುತೆರೆಯ ಧಾರಾವಾಹಿಗಳು ಪಡೆದ ಟಿಆರ್​ಪಿ ಎಷ್ಟು

ಕನ್ನಡದ ಧಾರಾವಾಹಿಗಳು ಸದ್ಯ ವೀಕ್ಷಕರಿಗೆ ಬಲು ಇಷ್ಟವಾಗಿದೆ. ಅದರಲ್ಲೂ ಮಿಡಲ್ ಕ್ಲಾಸ್ ಕತೆಯ ಧಾರಾವಾಹಿಗಳನ್ನ ಜನ ಹೆಚ್ಚು ಇಷ್ಟ ಪಡ್ತಿದ್ದಾರೆ. ಜನ ಯಾವುದನ್ನ ಎಷ್ಟರ ಮಟ್ಟಕ್ಕೆ ಇಷ್ಟ ಪಡ್ತಿದ್ದಾರೆ ಅನ್ನೋದು ಈ ಟಿಆರ್​​ಪಿ ಅಳತೆ ಇಡಿದು ಪ್ರತಿ ವಾರ ತೂಕ ಹಾಕಲಾಗುತ್ತೆ . ತೆರೆಗೆ ಬಂದ ಮೊದಲ ವಾರದಲ್ಲಿ ಅಮೃತಧಾರೆಗೆ ಹೇಳಿಕೊಳ್ಳುವಂತಹ ಮಾರ್ಕ್ಸ್​ ಸಿಕ್ಕಿರಲಿಲ್ಲ. ಆದರೆ ದಿನ ಕಳೆದಂತೆ ತನ್ನ ಟಿಆರ್​ಪಿಯನ್ನ ಹೆಚ್ಚಿಸಿಕೊಂಡಿದೆ. ಈ ವಾರ ಅಮೃತಧಾರೆಗೆ 5.4 ಟಿವಿಆರ್ ಬಂದಿದೆ. ಭಾಗ್ಯಲಕ್ಷ್ಮೀ ಧಾರಾವಾಹಿಯನ್ನ ಹಿಂದಿಕ್ಕಿ ಮುನ್ನುಗುವ ಎಲ್ಲಾ ಸಾಧ್ಯತೆ ಹೆಚ್ಚಾಗಿ ಕಾಣ್ತಿದೆ.

ಎಂದಿನಂತೆ ಪುಟ್ಟಕ್ಕನ ಮಗಳ ಮದುವೆ ಎಪಿಸೋಡ್ಸ್​ಗೆ ಜನ ಮನಸೋತಿದ್ದಾರೆ. ಹಾಗಾಗಿ ಪುಟ್ಟಕ್ಕ ಎಂದಿನಂತೆ ತನ್ನ ಮೊದಲ ಸ್ಥಾನವನ್ನ ಪಡೆದುಕೊಂಡಿದೆ. ಪುಟ್ಟಕ್ಕನ ಮಕ್ಕಳು 9.8 ಟಿವಿಆರ್​​ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ 8.0 ಟಿವಿಆರ್​ ಪಡೆಯುವ ಮೂಲಕ ಗಟ್ಟಿಮೇಳ ನಿಂತಿದೆ. ಮೂರನೆ ಸ್ಥಾನದಲ್ಲಿ 6.3ಟಿವಿಆರ್​ ಪಡೆಯುವ ಮೂಲಕ ಶ್ರೀರಸ್ತು ಶುಭಮಸ್ತು ಇದೆ. ನಾಲ್ಕನೇ ಸ್ಥಾನದಲ್ಲಿ 6.0 ಟಿವಿಆರ್ ಪಡೆಯುವ ಮೂಲಕ ಸತ್ಯ ನಿಂತಿದ್ದಾಳೆ.

ಐದನೇ ಸ್ಥಾನಕ್ಕೆ ಇಳಿಕೆ ಆಗಿ 5.6 ಟಿವಿಆರ್ ಪಡೆಯುವ ಮೂಲಕ ಸ್ವಲ್ಪ ಕುಸಿತ ಕಂಡಿದ್ದಾಳೆ ಭಾಗ್ಯ. ಇನ್ನು ಲಕ್ಷ್ಮೀ ಅಕ್ಕನ ಪಕ್ಕದಲ್ಲೇ ಜಾಗಮಾಡಿಕೊಂಡು ಆರನೇ ಸ್ಥಾನದಲ್ಲಿ ಇದ್ದು 5.5 ಟಿವಿಆರ್ ಪಡೆದುಕೊಂಡಿದ್ದಾಳೆ. ಸದ್ಯ ಅಕ್ಕ ತಂಗಿಯಲ್ಲೇ ಪ್ರತಿ ಟಫ್ ಫೈಟ್ ನಡೆಯುತ್ತಾ ಇದೆ. ಹೊಸದಾಗಿ ಬಂದಿರೋ ಶೋ ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್​ ರಿಯಾಲಿಟಿ ಶೋ 4.4 ಟಿವಿಆರ್​ ಲಾಂಚಿಂಗ್​​ನಲ್ಲಿ ಪಡೆದುಕೊಂಡಿದೆ. ಒಟ್ಟಿನಲ್ಲಿ ಸೀರಿಯಲ್​ಗಳ ಗ್ರಾಫ್ ಪ್ರತಿ ವಾರವು ಹೆಚ್ಚು ಕಮ್ಮಿ ಆಗ್ತಿರೋದು ಸುಳ್ಳಲ್ಲ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಈ ವಾರ ಅತೀಹೆಚ್ಚು ಜನ ವೀಕ್ಷಿಸಿದ ಕನ್ನಡ ಸೀರಿಯಲ್​​ ಯಾವುದು? ಹೇಗಿದೆ TRP?

https://newsfirstlive.com/wp-content/uploads/2023/06/colors-8.jpg

Load More