ಇಡೀ ದೇಶದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅಲ್ಲಿನ ಸ್ಪೈ ಏಜೆನ್ಸಿ ಹೇಳಿದ್ದೇನು?
ದೇಶದ ಗೌಪ್ಯ ಮಾಹಿತಿಗಳು, ಭದ್ರತೆಯ ವಿಚಾರಗಳು ಲೀಕ್ ಆಗುವ ಭೀತಿ!
ಸುಂದರ ಹುಡುಗ, ಹುಡುಗಿಯರಿಂದ ಅಂತರ ಕಾಯ್ದುಕೊಳ್ಳುವಂತೆ ಹೇಳಿದ್ದೇಕೆ?
ಬೀಜಿಂಗ್: ನೆರೆ ರಾಷ್ಟ್ರ ಚೀನಾಗೆ ಈಗ ಬೇಹುಗಾರಿಕೆಯ ಭೂತ ಕಾಡುತ್ತಿದೆ. ತನ್ನ ದೇಶದ ಅಮೂಲ್ಯವಾದ ಮಾಹಿತಿಗಳು, ಭದ್ರತೆಯ ವಿಚಾರಗಳು ಲೀಕ್ ಆಗಿ ಹೋಗುವ ಭಯ ಶುರುವಾಗಿದೆ. ಇದೇ ಕಾರಣದಿಂದಾಗಿ ಚೀನಾದ ಟಾಪ್ ಬೇಹುಗಾರಿಕಾ ಸಂಸ್ಥೆಗಳು ತನ್ನ ದೇಶದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಒಂದು ಖಡಕ್ ಸಂದೇಶವನ್ನು ರವಾನಿಸಿದೆ. ಸೋಷಿಯಲ್ ಮಿಡಿಯಾಗಳಲ್ಲಿ ಸಿಗುವ ಸುಂದರ ಹುಡುಗಿ ಹಾಗೂ ಚೆಂದದ ಹುಡುಗರೊಂದಿಗೆ ಅಂತರ ಕಾಯ್ದುಕೊಳ್ಳಿ. ತುಂಬಾ ಆತ್ಮೀಯವಾಗಿ ಅವರೊಂದಿಗೆ ಬೆರೆಯಬೇಡಿ ಎಂದು ಸೂಚನೆ ನೀಡಿದೆ.
ಇದನ್ನೂ ಓದಿ: ಮಕ್ಕಳು ಬೆಳ್ಳಗೆ ಹುಟ್ಟಲು ಬಿಳಿ ನಾಯಿಯ ತಲೆ ಬರುಡೆ ತಿನ್ನುತ್ತಾರೆ ಇವರು! ಏನ್ ವಿಚಿತ್ರ ಗುರೂ
ಚೀನಾದ ರಾಜ್ಯ ಭದ್ರತಾ ಸಚಿವಾಲಯ ವಿಚಾಟ್ ಮೂಲಕ ದೇಶದ ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ಸಂದೇಶ ಕಳುಹಿಸಿದೆ. ಹಲವು ದೇಶದ ಹಲವು ಬೇಹುಗಾರಿಕೆ ಸಂಸ್ಥೆಗಳು ನಮ್ಮ ದೇಶದ ಡಾಟಾವನ್ನು ಕದಿಯಲು ಸಜ್ಜಾಗಿವೆ. ನಿಮ್ಮನ್ನು ಹೇಗಾದರೂ ಹೊಂಚು ಹಾಕಿ ನಿಮ್ಮನ್ನು ಮರಳು ಮಾಡಿ ದೇಶದ ಭದ್ರತಾ ವಿಷಯವನ್ನು ನಿಮ್ಮಿಂದ ಪಡೆಯುತ್ತಾರೆ. ಹೀಗಾಗಿ ಅಪರಿಚಿತ ಸುಂದರ ಹುಡುಗ ಹುಡುಗಿಯರೊಂದಿಗೆ ದೂರ ಇರಿ ಅತಿ ಆತ್ಮೀಯತೆ ಅವರೊಂದಿಗೆ ಬೇಡ ಎಂದು ಎಚ್ಚರಿಸಿದೆ.
ಇದನ್ನೂ ಓದಿ: ಭೀಕರ ಅಪಘಾತ.. ಅಮೆರಿಕಾದಲ್ಲಿ ನಾಲ್ವರು ಭಾರತೀಯರ ದಾರುಣ ಅಂತ್ಯ; ಆಗಿದ್ದೇನು?
ನಮ್ಮ ಭದ್ರತಾ ಇಲಾಖೆಯಿಂದ ಒಂದು ಸ್ಪಷ್ಟ ಮಾಹಿತಿ ಬಂದಿದೆ. ವಿದೇಶಿ ಬೇಹುಗಾರಿಕೆ ಸಂಸ್ಥೆಗಳು ಕಾಲೇಜ್ ವಿದ್ಯಾರ್ಥಿಗಳನ್ನು ಟಾರ್ಗೆಟ್ ಯುವ ಜನತೆಯನ್ನೇ ಗುರಿಯಾಗಿಟ್ಟುಕೊಂಡು ಅವರಿಂದ ಮಾಹಿತಿ ಕದಿಯುವ ಹುನ್ನಾರ ನಡೆಸುತ್ತಿವೆ.
ಹೊಸದನ್ನು ಕಲಿಯಲು ಉತ್ಸಾಹವಿರುವ ವಿಪರೀತ ಕುತೂಹಲ ಇರುವ ಯುವ ಸಮುದಾಯವನ್ನೇ ಅವು ಗುರಿಯಾಗಿಟ್ಟುಕೊಂಡು ಕುತಂತ್ರ ನಡೆಸುತ್ತಿವೆ. ಚೀನಾಗೆ ಈ ತರಹದ ರಾಷ್ಟ್ರೀಯ ಭದ್ರತೆಗೆ ಈಗ ಅಪಾಯ ಬಂದೊದಗಿದೆ.
ಇದನ್ನೂ ಓದಿ: ಕೆರಳಿದ ಕಿಮ್ ಜಾಂಗ್ ಉನ್.. ಪ್ರವಾಹ ತಡೆಯಲು ವಿಫಲರಾದ 30 ಅಧಿಕಾರಿಗಳನ್ನೇ ನೇಣಿಗೇರಿಸಿದ ಸರ್ವಾಧಿಕಾರಿ!
ಹೀಗಾಗಿ ಪದೇ ಪದೇ ಈ ರೀತಿಯ ಎಚ್ಚರಿಕೆಯನ್ನು ನಿಮಗೆ ನೀಡಬೇಕಾಗಿ ಬಂದಿದೆ ಎಂದು ಚೀನಾದ ಅತ್ಯುನ್ನತ ಬೇಹುಗಾರಿಕಾ ಸಂಸ್ಥೆಗಳು ತನ್ನ ಸಂದೇಶದಲ್ಲಿ ಹೇಳಿದೆ. ಮಾರ್ಕೆಟ್ ರಿಸರ್ಚ್ ಹೆಸರಲ್ಲಿ ನಿಮಗೆ ದುಡ್ಡು ನೀಡುವ ಆಸೆ ನೀಡಿ ನಿಮ್ಮಿಂದ ದೇಶದ ಬಗ್ಗೆ ದೇಶದ ಅನೇಕ ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಸೂಕ್ಷ್ಮ ವೈಜ್ಞಾನಿಕ ಸಂಶೋಧನೆಗಳ ಮಾಹಿತಿ, ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ಪಡೆಯುವ ಹುನ್ನಾರ ನಡೆಯುತ್ತಿದೆ. ಹೀಗಾಗಿ ತುಂಬಾ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ