newsfirstkannada.com

ಮನೆ ಕಟ್ಟಲು ಲೋನ್ ತೆಗೆದುಕೊಂಡಿದ್ದೀರಾ? ಹಾಗಾದ್ರೆ ನೀವು ಈ ಸ್ಟೋರಿ ಓದಲೇಬೇಕು!

Share :

18-08-2023

    ಮನೆ ಮಾಲೀಕರು ಓದಲೇಕಾದ ಸ್ಟೋರಿ ಇದು

    ಹೋಮ್​ ಲೋನ್​ ಪಡೆಯೋ ಮುನ್ನ ಹುಷಾರ್​​

    ಮನೆಗೆ ನುಗ್ಗಿ ದಾಂಧಲೆ ಮಾಡ್ತಾರೆ ಬ್ಯಾಂಕ್​ ಸಿಬ್ಬಂದಿ

ಬೆಂಗಳೂರು: ಮನೆ ವಸ್ತುಗಳೆಲ್ಲಾ ಬೀದಿಗೆ ಬಿದ್ದಿವೆ. ಗೇಟ್​​ಗೆ ಬೀಗ ಹಾಕಿ ಸೀಜ್​ ಮಾಡಲಾಗಿದೆ. ಅಲ್ಲೊಬ್ರು ಅಯ್ಯೋ ನಮ್ಮ ಮಗ ಒಳಗೇ ಇದ್ದಾನೆ ಅಂತ ಆತಂಕದಲ್ಲಿದ್ದಾರೆ. ಇಲ್ಲೊಬ್ರು ಎದೆ ಹಿಡ್ಕೊಂಡು ಕೆಳಗೆ ಬಿದ್ದು ಒದ್ದಾಡ್ತಿದ್ದಾರೆ. ಇದು ನಡೆದಿದ್ದು ಮತ್ತೆಲ್ಲೂ ಅಲ್ಲ, ಬದಲಿಗೆ ಬೆಂಗಳೂರಿನಲ್ಲೇ!

ಕೆಂಗೇರಿ ಉಪನಗರದಲ್ಲಿರೋ ಈ ಮೂರಂತಸ್ತಿನ ಮನೆ ನಿರ್ಮಿಸೋಕೆ ಮಾಲೀಕ ತುಮಕೂರಿನ ವೀರಶೈವ ಕೋ ಆಪರೇಟಿವ್ ಬ್ಯಾಂಕ್​ನಲ್ಲಿ 2 ಕೋಟಿ ಲೋನ್​ ಮಾಡಿದ್ದ. ಆದ್ರೆ ತೀರಿಸಲಾಗದೆ ತಪ್ಪಿಸಿಕೊಂಡು ಓಡಾಡ್ತಿದ್ರ ಅನ್ನೋ ವಿಚಾರ ಕೋರ್ಟ್​ನಲ್ಲಿ ಕೇಸ್​ ಆಗಿತ್ತು. ಆದ್ರೆ ಈ ಕೇಸ್​ ಡಿಸ್ಮಿಸ್​ ಮಾಡಿದ್ರೂ ಬ್ಯಾಂಕ್​ ಸಿಬ್ಬಂದಿ ದರ್ಪ ತೋರಿರೋ ಆರೋಪ ಕೇಳಿ ಬರ್ತಿದೆ.

ಬ್ಯಾಂಕ್​ ಸಿಬ್ಬಂದಿ ಮನೆ ಮಾಲೀಕರ ವಸ್ತುಗಳನ್ನ ಮನೆಯಿಂದ ಹೊರಗೆ ಹಾಕಿದ್ದು, ಬಾಡಿಗೆದಾರರ ವಸ್ತುಗಳನ್ನ ಒಳಗೇ ಬಿಟ್ಟು ಬೀಗ ಹಾಕಿದ್ದಾರೆ. ಇಲ್ಲೂ ಒಂದು ಎಡವಟ್ಟು ಮಾಡಿದ್ದು, ಬಾಡಿಗೆದಾರನೊಬ್ಬ ಮನೆಯೊಳಗೇ ಸಿಲುಕಿಕೊಂಡು ಒದ್ದಾಡುವಂತಾಯ್ತು. ಮಲಗಿದ್ದ ಯುವಕನನ್ನ ಗಮನಿಸದೇ ಬೀಗ ಹಾಕೊಂಡು ಹೋಗಿದ್ದರು. ನಂತರ ಆ ಯುವಕನ ಪೋಷಕರು ಪೊಲೀಸರಿಗೆ ಮಾಹಿತಿ ಕೊಟ್ಟು ಅವರ ಸಹಾಯದಿಂದ ಆತನನ್ನ ಹೊರ ಕರೆತರಲಾಯಿತು.

ಏಕಾಏಕಿ ಮನೆಗೆ ನುಗ್ಗಿದ ಬ್ಯಾಂಕ್​ ಸಿಬ್ಬಂದಿ

ಇದ್ದಕ್ಕಿದ್ದಂತೆ ಬಂದ 20-30 ಮಂದಿ ಸಿಬ್ಬಂದಿ ಏಕಾಏಕಿ ವಸ್ತುಗಳನ್ನ ಹೊರಗೆ ಹಾಕಿದ್ದಲ್ಲದೇ ದೈಹಿಕ ಹಲ್ಲೆಯನ್ನೂ ಮಾಡಿದ್ದಾರೆ ಎಂದು ಆರೋಪಿಸಿರುವ ಮನೆ ಮಾಲೀಕನ ಪರ ವಕೀಲರು ಕೋರ್ಟ್​ ಮೂಲಕ ಕಾನೂನು ಕ್ರಮಕ್ಕೆ ಮುಂದಾಗ್ತೀವಿ ಅಂತ ಹೇಳ್ತಿದ್ದಾರೆ. ಅದೇನೇ ಇರ್ಲಿ ಯಾವುದೇ ದಾಖಲೆಗಳಿಲ್ಲದೇ ಬಂದು ದಾಂಧಲೆ ನಡೆಸಿರೋ ಬ್ಯಾಂಕ್​ ಸಿಬ್ಬಂದಿ ನಡೆ ನಿಜಕ್ಕೂ ಆಕ್ಷೇಪಾರ್ಹ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆ ಕಟ್ಟಲು ಲೋನ್ ತೆಗೆದುಕೊಂಡಿದ್ದೀರಾ? ಹಾಗಾದ್ರೆ ನೀವು ಈ ಸ್ಟೋರಿ ಓದಲೇಬೇಕು!

https://newsfirstlive.com/wp-content/uploads/2023/08/Bank-lona.jpg

Load More