newsfirstkannada.com

Bhadra Dam: ಭದ್ರಾ ಡ್ಯಾಂನಲ್ಲೂ ನೀರಿನ ಅಭಾವ.. ರೈತರಲ್ಲಿ ಶುರುವಾಗಿದೆ ಆತಂಕ

Share :

07-09-2023

    ಬಯಲುಸೀಮೆ ಭಾಗದ ರೈತರ ಜೀವನಾಡಿ ಭದ್ರಾ ಡ್ಯಾಂನಲ್ಲಿ ನೀರಿನ ಅಭಾವ

    ನೀರಿನ ಅಭಾವದಿಂದ ಭತ್ತ ಹಾಗೂ ಅಡಕೆ ಬೆಳೆಗಾರರಲ್ಲಿ ಮೂಡಿದ ಆತಂಕ

    ಸಮಸ್ಯೆ ಬಗೆ ಹರಿಸಬೇಕು, ಇಲ್ಲವಾದ್ರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ ರೈತರು

ಮಲೆನಾಡು ಮತ್ತು ಬಯಲುಸೀಮೆ ಭಾಗದ ರೈತರ ಜೀವನಾಡಿ ಭದ್ರಾ ಡ್ಯಾಂನಲ್ಲೂ ಈ ಬಾರಿ ನೀರಿನ ಕೊರತೆ ಎದುರಾಗಿದೆ. ವಾಣಿಜ್ಯ ಹಾಗೂ ಆಹಾರ ಬೆಳೆಗೆ ನೀರುಣಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಡ್ಯಾಂನಲ್ಲಿ ನೀರು ಕುಸಿದಿದೆ. ಇದರಿಂದ ಭತ್ತ ಹಾಗೂ ಅಡಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಸರ್ಕಾರದ ಸೂಚನೆ ಮೇರೆಗೆ ಅಧಿಕಾರಿಗಳು ಭದ್ರಾ ಬಲ ಮತ್ತು ಎಡದಂಡೆಗೆ ಸತತ 100 ದಿನ ನೀರು ಹರಿಸಲು ಆರಂಭಿಸಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆದಿದ್ದು, ಶಿವಮೊಗ್ಗ ಹಾಗೂ ದಾವಣಗೆರೆ ಭಾಗದ ರೈತ ಮುಖಂಡರು ಮಳೆ ಹಾಗೂ ಬೆಳೆಯ ಪರಿಸ್ಥಿತಿಯನ್ನು ವಿವರಿಸಲಾಯ್ತು. ಈ ವೇಳೆ ರೈತ ಮುಖಂಡರು ಆನ್​ ಅಂಡ್ ಆಫ್​ ಪದ್ಧತಿಯನ್ನು ಅನುಸರಿಸಬೇಕು. ಸಮಸ್ಯೆ ಬಗೆ ಹರಿಸಬೇಕು, ಇಲ್ಲವಾದ್ರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಒಂದೆಡೆ ಮಳೆಯ ಅಭಾವ ಮತ್ತೊಂದೆಡೆ ಕಾವೇರಿ ನೀರಿನ ಕಂಟಕ. ಇದರ ನಡುವೆ ಭದ್ರಾದಲ್ಲೂ ನೀರಿನ ಕೊರತೆ ಎದುರಾಗಿದೆ. ಇದರಿಂದ ರೈತರು ಬೇಸತ್ತಿದ್ದಾರೆ. ಕೃಷಿಯನ್ನೇ ನಂಬಿಕೊಂಡ ರೈತರಲ್ಲಿ ಆತಂಕ ಮನೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bhadra Dam: ಭದ್ರಾ ಡ್ಯಾಂನಲ್ಲೂ ನೀರಿನ ಅಭಾವ.. ರೈತರಲ್ಲಿ ಶುರುವಾಗಿದೆ ಆತಂಕ

https://newsfirstlive.com/wp-content/uploads/2023/09/Bhadra-Dam.jpg

Load More