newsfirstkannada.com

ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ‘ಭ್ಯಾಗಲಕ್ಷ್ಮಿ’; ಕನ್ನಡ ಕಿರುತೆರೆಯಲ್ಲೇ ಹೊಸ ದಾಖಲೆ

Share :

01-06-2023

  ಗಡಿದಾಟಲು ರೆಡಿಯಾಗಿದೆ ಭಾಗ್ಯಲಕ್ಷ್ಮೀಯ ಹೆಸರುವಾಸಿ

  ಭಾಗ್ಯಲಕ್ಷ್ಮೀ ಜೊತೆ ಕೆಂಡಸಂಪಿಗೆ ತಂಡಕ್ಕೂ ಖುಷಿ ವಿಚಾರ

  ಕನ್ನಡದ ಜನಪ್ರಿಯ ಸೀರಿಯಲ್‌ಗೆ ಸಿಕ್ಕಾಪಟ್ಟೆ ಬೇಡಿಕೆ

ಕನ್ನಡ ಕಿರುತೆರೆಯ ಜನಪ್ರಿಯತೆ ಈಗ ಗಡಿ ದಾಟಿ ಹೋಗಿದೆ. ಕನ್ನಡದ ಸ್ವಂತ ಕಥೆಗಳು ಬೇರೆ ಭಾಷೆಯಲ್ಲಿ ರಿಮೇಕ್ ಹಾಗೂ ಡಬ್ ಆಗೋ ಮಟ್ಟಕ್ಕೆ ಬಂದಿದೆ. ಹಲವಾರು ಕನ್ನಡದ ಸ್ವಂತಿಕೆ ಕಥೆಗಳು ಬೇರೆ ಬೇರೆ ಭಾಷೆಗಳ ರಿಮೇಕ್ ಆಗಿವೆ. ಈಗ ಅದೇ ಸಾಲಿನಲ್ಲಿ ಮತ್ತೆರಡು ನಮ್ಮದೆ ಕನ್ನಡ ಕಿರುತೆರೆಯ ಸ್ವಂತ ಕಥೆಗಳು ರಿಮೇಕ್ ಆಗಿವೆ. ಸದ್ಯ, ಬಹಳ ಟ್ರೆಂಡಿಂಗ್​ನಲ್ಲಿ ಬರುತ್ತಿರೋ ಹಾಗೂ ಅತಿ ಹೆಚ್ಚು ಟಿಆರ್​ಪಿ ಪಡೆದು ಮೊದಲ ಸ್ಥಾನದಲ್ಲೇ ಇದುವರೆಗೂ ಇದ್ದುಕೊಂಡು ಜನರ ಮನಸ್ಸನ್ನ ಸೂರೆಗೊಳಿಸಿದ ಭಾಗ್ಯಲಕ್ಷ್ಮೀ ಧಾರಾವಾಹಿಯು ಈಗ ಮರಾಠಿ ಭಾಷೆಗೆ ರಿಮೇಕ್ ಆಗಿದೆ.

ಕನ್ನಡದಲ್ಲಿ ಈ ಧಾರಾವಾಹಿಗೆ ಡೈ ಹಾರ್ಡ್​ ಫ್ಯಾನ್ಸ್ ಇದ್ದಾರೆ. ಕಥೆ ಸಾರಾಂಶ ಚೆನ್ನಾಗಿದ್ದ ಕಾರಣ ಮರಾಠಿ ಭಾಷೆಗೆ ರಿಮೇಕ್ ಮಾಡಾಲಾಗ್ತಿದೆ. ಕಲರ್ಸ್​ ಮರಾಠಿಯಲ್ಲಿ ಈಗಾಗಲೇ ಕಾವ್ಯಾಂಜಲಿ ಸಖಿ ಸವಾಲಿ ಅನ್ನೋ ಹೆಸರಿನಿಂದ ಪ್ರಸಾರವಾಗ್ತಿದೆ. ವೀಕ್ಷಕರು ಈ ಸೀರಿಯಲ್​ನ ಮೆಚ್ಚಿಕೊಂಡು ನೋಡ್ತಾ ಇದ್ದಾರೆ. ಇದೊಂದೆ ಧಾರಾವಾಹಿಯಲ್ಲ. ಮತ್ತೊಂದು ಧಾರಾವಾಹಿ ಕಲರ್ಸ್​ ಮರಾಠಿಯಲ್ಲಿ ರಿಮೇಕ್ ಆಗಿದೆ.

ಕನ್ನಡ ಕಥೆಯಾದ ಕೆಂಡಸಂಪಿಗೆ ಧಾರಾವಾಹಿಯು ಕಲರ್ಸ್​ ಮರಾಠಿಯಲ್ಲಿ ಕಸ್ತೂರಿ ಎಂಬ ಶೀರ್ಷಿಕೆಯನ್ನು ಹೊತ್ತು ಮರಾಠಿ ವೀಕ್ಷಕರ ಮುಂದೆ ಬಂದಿದೆ. ಇದು ಕೆಂಡಸಂಪಿಗೆ ಧಾರಾವಾಹಿಯ ತಂಡಕ್ಕೆ ಹೆಮ್ಮೆ ಹಾಗೂ ಖುಷಿ ತಂದಿದೆ. ಒಟ್ಟಿನಲ್ಲಿ ನಮ್ಮ ಕನ್ನಡ ಕಥೆಗಳು ಬೇರೆ ಭಾಷೆಗೆ ಡಬ್ ಆಗ್ತಿರೋ ವಿಚಾರ ನಿಜಕ್ಕೂ ಖುಷಿ ತರ್ತಿದೆ. ಈ ಎಲ್ಲಾ ಕ್ರೇಡಿಟ್ಸ್​​ ಆ ಧಾರಾವಾಹಿಯ ತಂಡಕ್ಕೆ ಸೇರ್ಪಡೆಯಾಗಬೇಕು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ‘ಭ್ಯಾಗಲಕ್ಷ್ಮಿ’; ಕನ್ನಡ ಕಿರುತೆರೆಯಲ್ಲೇ ಹೊಸ ದಾಖಲೆ

https://newsfirstlive.com/wp-content/uploads/2023/05/bhagya-laxmi-2.jpg

Load More