newsfirstkannada.com

ತಾಂಡವ್-ಭಾಗ್ಯಳ ಕಿತ್ತಾಟಕ್ಕೆ ಜನ ಫುಲ್ ಮಾರ್ಕ್ಸ್​​.. ಈ ವಾರ ಜನಮೆಚ್ಚಿದ ಧಾರಾವಾಹಿಗಳು ಯಾವ್ಯಾವುದು?

Share :

10-06-2023

    ಅಕ್ಕ ತಂಗಿಗೆ ಟಕ್ಕರ್​ ಕೊಡಲು ಮುಂದಾದ ಅಮೃತಧಾರೆ!

    ಕಿರುತೆರೆಯ ಧಾರಾವಾಹಿಗಳು ಪಡೆದ ಟಿಆರ್​ಪಿ ಎಷ್ಟು..?

    ಯಾವ ಧಾರವಾಹಿಗೆ ಟಿಆರ್​ಪಿಯಲ್ಲಿ ಮೊದಲ ಸ್ಥಾನ..?

ಕನ್ನಡ ಕಿರುತೆರೆಯ ಧಾರಾವಾಹಿಗಳು ವಾರದಿಂದ ವಾರಕ್ಕೆ ಹೆಚ್ಚು ಕಮ್ಮಿ ಗ್ರಾಫ್​​ ಆಗ್ತಾನೆ ಇದೆ. ಕಳೆದ ವಾರ ಹೊಸ ಧಾರಾವಾಹಿ ಅಮೃತಧಾರೆ ತನ್ನ ಗ್ರ್ಯಾಂಡ್ ಆಗಿ ಲಾಂಚ್​ ಆಗಿತ್ತು. 7 ಗಂಟೆಯ ಸ್ಲಾಟ್​ನಲ್ಲಿ ರಾಜಾರೋಷವಾಗಿ ಮೆರಿತಿರೋದು ಭಾಗ್ಯಲಕ್ಷ್ಮೀ. ಆ ಸೀರಿಯಲ್​ಗೆ ಟಕ್ಕರ್ ಕೊಡಲೆಂದೆ ಅಮೃತಧಾರೆ ಧಾರವಾಹಿನ್ನು ತೆರೆ ಮೇಲೆ ತಂದ್ರು ಅಂದರೆ ತಪ್ಪಾಗೋಲ್ಲ. ಆದರೂ ಸಹ ಭಾಗ್ಯಲಕ್ಷ್ಮೀ ಧಾರಾವಾಹಿಯನ್ನು ಅಮೃತಧಾರೆ ಬೀಟ್ ಮಾಡೋಕೆ ಬಂದ ಮೊದಲ ವಾರ ಸಾಧ್ಯವಾಗ್ಲಿಲ್ಲ. ಇಂದಿನಂತೆ 7 ಗಂಟೆಯ ಸ್ಲಾಟ್​ನಲ್ಲಿ ಭಾಗ್ಯಲಕ್ಷ್ಮೀ 6.1 ಟಿವಿಆರ್ ಪಡೆಯುವ ಮೂಲಕ ಮುನ್ನುಗುತ್ತಿದೆ. ಅಮೃತಧಾರೆ ಧಾರಾವಾಹಿಗೆ ವೀಕ್ಷಕರು 4.9 ಟಿವಿಆರ್ ನೀಡಿದ್ದಾರೆ.

ಧಾರಾವಾಹಿಯ ತಂಡಕ್ಕೆ ತೃಪ್ತಿ ತಂದಿಲ್ಲದೇ ಇರೋದು ಮಾತ್ರ ಸುಳ್ಳಲ್ಲ. ವೀಕ್ಷಕರು ಕೂಡ ಭಾಗ್ಯಲಕ್ಷ್ಮೀಯನ್ನ ಅಮೃತಧಾರೆ ಹಿಂದಿಕ್ಕಬಹುದು ಅಂತಾ ಅಂದುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ 6.6 ಟಿವಿಆರ್ ಪಡೆಯುವ ಮೂಲಕ ಗಟ್ಟಿಮೇಳ ಧಾರಾವಾಹಿ ನಿಂತಿದೆ.

ಮೂರನೇ ಸ್ಥಾನದಲ್ಲಿ 6.1 ಟಿವಿಆರ್ ಪಡೆಯುವ ಮೂಲಕ ಭಾಗ್ಯಲಕ್ಷ್ಮೀ ನಿಂತಿದೆ. ನಾಲ್ಕನೇ ಸ್ಥಾನಕ್ಕೆ ಲಕ್ಷ್ಮೀ ಬಾರಮ್ಮ ಹಾಗೂ ಶ್ರೀರಸ್ತು ಶುಭಮಸ್ತು ಧಾರಾವಾಹಿ ಜಿದ್ದಾ ಜಿದ್ದಿಗೆ ಬಿದ್ದಿದೆ. ಎರಡು ಧಾರಾವಾಹಿ ಕೂಡ 5.9 ಟಿವಿಆರ್ ಪಡೆದುಕೊಂಡಿದೆ. ಐದನೆ ಸ್ಥಾನದಲ್ಲಿ ಸತ್ಯ ಎಂದಿನಂತೆ 5.5 ಟಿವಿಆರ್ ಪಡೆದುಕೊಂಡಿದೆ. ಒಟ್ಟಿನಲ್ಲಿ ಸೀರಿಯಲ್​ಗಳ ಗ್ರಾಫ್ ಆಗಾಗ್ಗೆ ಏರುಪೇರು ಆಗ್ತಿರೋದು ಮಾತ್ರ ಸುಳ್ಳಲ್ಲ. ವೀಕ್ಷಕರು ಬಯಸುವಂತಹ ರುಚಿಕರ ಧಾರಾವಾಹಿನ್ನು ನೀಡಲು ಮತ್ತಷ್ಟು ತಂಡಗಳು ಶ್ರಮಿಸುತ್ತಿವೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ತಾಂಡವ್-ಭಾಗ್ಯಳ ಕಿತ್ತಾಟಕ್ಕೆ ಜನ ಫುಲ್ ಮಾರ್ಕ್ಸ್​​.. ಈ ವಾರ ಜನಮೆಚ್ಚಿದ ಧಾರಾವಾಹಿಗಳು ಯಾವ್ಯಾವುದು?

https://newsfirstlive.com/wp-content/uploads/2023/06/BHAGYA.jpg

Load More