ಮಳೆಗೆ ಸಿಲುಕಿದ್ದ ಯುವತಿ ಸಾವಿಗೆ ಯಾರು ಹೊಣೆ..?
ಅಧಿಕಾರಿಗಳ ವಿರುದ್ಧ ಯುವತಿ ಸೋದರ ದೂರು
ಪೊಲೀಸ್ ತನಿಖೆ ಬಳಿಕ ಬಯಲಾಯ್ತು ಸಾವಿನ ರಹಸ್ಯ
ಮದು ಮಗಳಂತೆ ಕಿರು ನಗೆ ಬೀರುತ್ತಾ ಇರೋ ಈಕೆ ಭಾನುರೇಖಾ. ನಿನ್ನೆ ಕೇವಲ 45 ನಿಮಿಷದ ವರುಣಾರ್ಭಟಕ್ಕೆ ಕೆ.ಆರ್. ಸರ್ಕಲ್ನಲ್ಲಿ ನೀರಿನಿಂದ ತುಂಬಿದ್ದ ಅಂಡರ್ ಪಾಸ್ನಲ್ಲಿ ಸುಮಾರು ಅರ್ಧ ಗಂಟೆ ಸಾವು ಬದುಕಿನ ನಡುವೆ ಹೋರಾಡಿ ಜೀವ ಬಿಟ್ಟ ಯುವತಿ. ಆಂಧ್ರಪ್ರದೇಶ ಮೂಲದ ಭಾನು ರೇಖಾ ನಿನ್ನೆ ಕೊನೆಯುಸಿರೆಳೆದಿದ್ದು, ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸುಮಾರು ಎರಡು ಗಂಟೆ ಕಾಲ ಮರಣೋತ್ತರ ಪರೀಕ್ಷೆ ನಡೆದಿದ್ದು, ಬಳಿಕ ಕುಟುಂಬಸ್ಥರಿಗೆ ಭಾನು ರೇಖಾ ಮೃತದೇಹವನ್ನ ಹಸ್ತಾಂತರಿಸಲಾಯ್ತು. ನಂತರ ಕುಟುಂಬಸ್ಥರು ಇನ್ಫೋಸಿಸ್ ಸಂಸ್ಥೆ ನೀಡಿದ್ದ ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನ ವಿಜಯವಾಡಕ್ಕೆ ತೆಗೆದುಕೊಂಡು ಹೋದರು. ಇನ್ನು ಮರಣೋತ್ತರ ಪರೀಕ್ಷೆ ವೇಳೆ ಇನ್ಫೋಸಿಸ್ನ ಭಾನುರೇಖಾ ಸಹೋದ್ಯೋಗಿಗಳು ಅಂತಿಮ ದರ್ಶನ ಪಡೆಯಲು ಬಂದಿದ್ದ ದೃಶ್ಯಗಳೂ ಕಂಡು ಬಂತು.
ಅಧಿಕಾರಿಗಳ ವಿರುದ್ಧ ಯುವತಿ ಸೋದರ ಸಂದೀಪ್ ದೂರು
ನಿನ್ನೆ ನಡೆದ ಘಟನೆಯಿಂದ ತನ್ನ ಸೋದರಿ ಸಾವನ್ನಪ್ಪಿದ್ದಾಳೆ. ಇದು ಸಹಜ ಸಾವಲ್ಲ ಎಂದು ಮೃತ ಭಾನು ರೇಖಾ ಸೋದರ ಸಂದೀಪ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 304 ಎ ಅಡಿಯಲ್ಲಿ ದೂರುದಾಖಲಿಸಿದ್ದು, ಈ ಘಟನೆಗೆ ನೇರ ಕಾರಣ ಬಿಬಿಎಂಪಿ, ಕಾರು ಚಾಲಕ ಅಂತ ದೂರು ನೀಡಿದ್ದು, ಪೊಲೀಸರು ಕಾರು ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹಲಸೂರು ಗೇಟ್ ಪೊಲೀಸರಿಂದ ಕಾರು ಚಾಲಕನ ವಿಚಾರಣೆ
ಇತ್ತ ಹಲಸೂರುಗೇಟ್ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು ಇವತ್ತು ಕಾರು ಚಾಲಕ ಹರೀಶ್ನನ್ನ ವಿಚಾರಣೆ ಮಾಡಿದ್ರು. ಈ ವೇಳೆ ಆತ ಘಟನೆ ಹೇಗಾಯ್ತು ಅನ್ನೋದನ್ನ ವಿವರಿಸಿದ್ದಾನೆ.
ನಾನು ಬದುಕಿಸೋದಕ್ಕೆ ತುಂಬಾ ಪ್ರಯತ್ನ ಮಾಡಿದೆ. ಆದ್ರೆ ಆಗಲಿಲ್ಲ. ಸಡನ್ ಆಗಿ ಕಾರು ಸ್ಟಾಪ್ ಆಯ್ತು, ಎಷ್ಟು ಟ್ರೈ ಮಾಡಿದ್ರೂ ಸ್ಟಾರ್ಟ್ ಆಗಲಿಲ್ಲ. ಆಗ ಡೋರ್ ತೆಗೆಯೋಕೆ ಪ್ರಯತ್ನ ಮಾಡಿದೆ ಅದೂ ಆಗಲಿಲ್ಲ. ಕೊನೆಗೆ ಕಾರಿನ ಗ್ಲಾಸ್ ಹೊಡೆದೆ, ಈ ವೇಳೆ ಕೈಗೂ ಪೆಟ್ಟಾಗಿದೆ. ನೀರು ಕಾರಿನ ತುಂಬ ತುಂಬಿದ್ದ ಕಾರಣಕ್ಕೆ ದಿಢೀರಾಗಿ ರಕ್ಷಣೆ ಮಾಡಲು ಆಗಲಿಲ್ಲ. ಆದ್ರೂ ಗ್ಲಾಸ್ ಹೊಡೆದು ಮುಂದೆ ಇದ್ದವರನ್ನು ಹೊರಗೆ ಕಳುಹಿಸಿದೆ. ಭಾನುರೇಖಾ ಹಿಂದೆ ಇದ್ರು. ಹಿಂದೆ ಸೀಟಿನ ಬಳಿ ತುಂಬಾ ನೀರು ಸೇರಿಕೊಂಡಿತ್ತು. ಅಷ್ಟರಲ್ಲಿ ಅವ್ರು ಪ್ರಜ್ಞೆ ತಪ್ಪಿದ್ರು.
– ಹರೀಶ್, ಕಾರು ಚಾಲಕ
ಮೃತ ಭಾನು ರೇಖಾ ಕುಟುಂಬಕ್ಕೆ ಪಾಲಿಕೆಯಿಂದ 5 ಲಕ್ಷ ಪರಿಹಾರ ಕೊಡೋದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಘೋಷಿಸಿದ್ದಾರೆ. ಅದೇನೇ ಇರ್ಲಿ ಎಷ್ಟೇ ಬೆಳವಣಿಗೆಗಳು.. ಪರಿಹಾರಗಳು.. ಶಿಕ್ಷೆಗಳು ಆದ್ರೇನು ಪ್ರಯೋಜನ ಹೋದ ಜೀವ ಮತ್ತೆ ವಾಪಸ್ ತರೋಕೆ ಆಗೊಲ್ಲ ಅನ್ನೋದಂತೂ ಸತ್ಯ..!