ಕಿತ್ತು ತಿನ್ನೋ ಬಡತನದಲ್ಲಿದ್ದ ತಾಯಿ ಅಂದು ಎದೆಗುಂದಲಿಲ್ಲ
ಬದುಕು, ಬಡತನ ಬುದ್ಧಿವಂತನ ಸಾಧನೆಗೆ ಅಡ್ಡಿಯಾಗಲೇ ಇಲ್ಲ
ಛತ್ತೀಸ್‌ಗಢ ಸ್ಲಂನಿಂದ ಇಸ್ರೋ ಚಂದ್ರಯಾನಕ್ಕೆ ಜೊತೆಯಾದ ‘ಭರತ್’
ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆ ಇಡೀ ಜಗತ್ತು ಭಾರತದ ಕಡೆ ತಿರುಗಿದೆ. ಇಸ್ರೋ ವಿಜ್ಞಾನಿಗಳ ಅವಿರತ ಶ್ರಮ ಹಾಗೂ ಸಾಧನೆಯನ್ನು ಕೊಂಡಾಡಲಾಗುತ್ತಿದೆ. ಅನೇಕ ರಾಷ್ಟ್ರಗಳು ಧೀಮಂತಿಕೆಯಿಂದ ಸ್ನೇಹ ಬಯಸಲು ಮುಂದಾಗಿ ನಿಂತಿವೆ. ಇದಕ್ಕೆ ಕಾರಣ ಚಂದ್ರನ ದಕ್ಷಿಣ ಧ್ರುವದ ಮೇಲೆ ಭಾರತ ತ್ರಿವಿಕ್ರಮನಾಗಿ ನಮ್ಮ ರಾಷ್ಟ್ರ ಲಾಂಛನ ಮೈಲಿಗಲ್ಲು ಸ್ಥಾಪಿಸಿರೋದು.
ಚಂದ್ರಯಾನ-3 ಸಾಧನೆಗೆ ಇಸ್ರೋ ವಿಜ್ಞಾನಿಗಳು ಬರೀ ಶ್ರಮಪಟ್ಟಿಲ್ಲ ತಪ್ಪಸ್ಸನ್ನೇ ಮಾಡಿದ್ದಾರೆ. ಅನೇಕ ಮಂದಿ ಹಗಲು ರಾತ್ರಿ ಶ್ರಮ, ಬದ್ದತೆ ವಹಿಸಿ ನಿರಂತರ ಕಾರ್ಯ ನಿರ್ವಹಿಸಿದ್ದಾರೆ. ಇದೇ ಇಸ್ರೋ ತಂಡದಲ್ಲಿ ಛತ್ತೀಸ್ಗಡದ ಭರತ್ ಎಂಬ ಯುವಕ ಕೂಡ ಒಬ್ಬನು. ಈತನ ಬದುಕೇ ಎಲ್ಲರಿಗೂ ಸ್ಪೂರ್ತಿ. ಬಡತನ ಮಹತ್ ಸಾಧನೆಗೆ ಯಾವ ಸಮಸ್ಯೆಯನ್ನೂ ಉಂಟು ಮಾಡುವುದಿಲ್ಲ ಎಂಬುದಕ್ಕೆ ಇಸ್ರೋದ ಭಾಗವಾದ ಭರತ್ ನಮಗೆ ನಿದರ್ಶನ. ಫೀನಿಕ್ಸ್‌ನಂತೆ ಬೂದಿಯಿಂದ ಮೇಲೇರೋದು ಎಂಬುದಕ್ಕೆ ಭರತ್ ನಮಗೆ ಮಾದರಿ.
ಭರತ್ ಛತ್ತೀಸ್‌ಗಢದ ಚಾರೌಡಾ ಎಂಬ ಸ್ಲಂನಲ್ಲಿ ಜನಿಸಿದವನು. ಕಿತ್ತು ತಿನ್ನುವ ಬಡತನದಲ್ಲಿದ್ದ ಭರತ್ ಕುಟುಂಬಸ್ಥರು ಸೂರ್ಯ ಯಾಕಾದ್ರೂ ಉದಯಿಸುತ್ತಾನೋ ಎನ್ನುವ ಆತಂಕದಲ್ಲಿ ಜೀವನ ಕಳೆಯುತ್ತಿದ್ದರು. ಯಾಕಂದ್ರೆ ಬೆಳಗಾದ್ರೆ ಊಟಕ್ಕೂ ಪರದಾಡಬೇಕಾಗಿತ್ತು. ಭರತ್ ತಂದೆ ಬ್ಯಾಂಕಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಾ ಕುಟುಂಬ ಸಾಗಿಸುತ್ತಿದ್ದರು. ಬರುವ ಸಂಬಳ ಮನೆಗೆ ಸಾಕಾಗದೆ ಇದ್ದಾಗ ಭರತ್ ತಾಯಿಯೂ ಸಹ ಟೀ ಅಂಗಡಿಯಲ್ಲಿ ಪಾತ್ರೆಯನ್ನು ತೊಳೆಯುವ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು.
ಪ್ರತಿ ದಿನ ಮನೆ ಮೇಲೆ ಹಾರೋ ವಿಮಾನ ನೋಡೋದು, ವಿಮಾನ ಕಾಣುವವರೆಗೂ ವಿಮಾನದ ಹಿಂದೆ ಸ್ಲಂನಲ್ಲಿ ಓಡೋದು ಭರತ್ ದಿನಚರಿಯಾಗಿತ್ತು. ಅಮ್ಮ ನಾನು ಪೈಲಟ್ ಆಗ್ತೀನಮ್ಮಾ ಎಂದು ತಾಯಿಗೆ ಹೇಳೋದು. ಅಮ್ಮ ನಸುನಗುತ್ತಾ ಆಗಪ್ಪಾ ನನ್ನ ಕಂದ ಎನ್ನುವುದು ದಿನಾ ಸರ್ವೇ ಸಾಮಾನ್ಯವಾಗಿತ್ತು. ಆದ್ರೆ ಇಂದು ಅದೇ ಮಗ ಇಡೀ ಜಗತ್ತೇ ಕೊಂಡಾಡುವಂತಹ ಚಂದ್ರಯಾನ-3ರ ಭಾಗವಾಗಿದ್ದಾನೆ. ಸ್ಲಂನಿಂದ ಇಸ್ರೋಗೆ ಸೇರಿಕೊಂಡ ಭರತ್ ಬೆಳೆದು ಬಂದ ಕಥೆಯೇ ರೋಚಕವಾಗಿವೆ.
ಶಾಲೆಗೆ ಹೋಗೋದು ಬೇಡ ಎಂದಿದ್ದ ಅಪ್ಪ!
ಪೈಲೆಟ್ ಆಗಬೇಕೆಂದು ಕನಸು ಕಂಡಿದ್ದ ಭರತ್ ವಿಜ್ಞಾನಿಯಾಗಿದ್ದೇ ಕುತೂಹಲಕಾರಿಯಾಗಿದೆ. ಬಾಲ್ಯದಲ್ಲಿ ಭರತ್ ಶಾಲೆಗೆ ಹೋಗಬೇಕು ಎಂದಾಗ ಆತನ ತಂದೆ ಮಗ ಕೆಲಸಕ್ಕೆ ಹೋಗಲಿ ಶಾಲೆಗೆ ಬೇಡ. ನಮ್ಮ ಮನೆಯ ಪರಿಸ್ಥಿತಿ ಸರಿಯಿಲ್ಲ ಎನ್ನುತ್ತಿದ್ದರಂತೆ. ಆಗ ಭರತ್‌ನ ತಾಯಿ, ತಂದೆಯೊಂದಿಗೆ ಜಗಳವಾಡಿದ್ರಂತೆ. ನನ್ನ ಮಗ ದುಡಿಯುವಷ್ಟು, ಆತ ಮಾಡುವ ಕೆಲಸವನ್ನು ನಾನೇ ಮಾಡುತ್ತೇನೆ ಎಂದಿದ್ದರಂತೆ. ತಾಯಿ ಮನೆಗೆಲಸ ಮಾಡಿಕೊಂಡು, ಟೀ ಅಂಗಡಿಗಳಲ್ಲಿ ಲೋಟ ತೊಳೆದು ಬಂದ ಅಲ್ಪ ಸ್ವಲ್ಪ ಹಣವನ್ನೆಲ್ಲಾ ಕೂಡಿಡಲು ನಿರ್ಧರಿಸಿದ್ದಳು. ತನ್ನ ಮಗನ ವಿದ್ಯಾಭ್ಯಾಸಕ್ಕೆ ನನ್ನ ಹಣವನ್ನು ಕೂಡಿಟ್ಟಿದ್ದಾಳೆ. ಕೊನೆಗೆ ಕೂಡಿಟ್ಟ ಹಣವನ್ನು ತನ್ನ ಗಂಡನಿಗೆ ಕೊಟ್ಟು ಮಗನನ್ನು ಶಾಲೆಗೆ ಕಳುಹಿಸಿದ ಗಟ್ಟಿಗಿತ್ತಿ ಆಗಿದ್ದಾಳೆ. ತಾಯಿಯ ಈ ವರ್ತನೆಗಳು ತಂದೆಯ ಮೊಂಡುತನ ಎಲ್ಲವನ್ನೂ ಗಮನಿಸುತ್ತಿದ್ದ ಭರತ್ ನಾನು ಫೈಲೆಟ್ ಆಗಲೇ ಬೇಕು ಎಂದು 10 ವರ್ಷಕ್ಕೆ ಸಂಕಲ್ಪ ಮಾಡಿಯೇ ಬಿಟ್ಟಿದ್ದ. ಆದ್ರೆ ಪೈಲೆಟ್ ಆಗೋದು ಅಂದ್ರೆ ಭರತ್‌ನಿಗೆ ಸಮುದ್ರದಾಳದಲ್ಲಿರುವ ಕಪ್ಪೆ ಚಿಪ್ಪಿನ ಒಳಗಡೆ ಇರುವ ಮುತ್ತನ್ನು ಶೋಧಿಸುವ ಕಾರ್ಯವಾಗಿತ್ತು.
ಕಷ್ಟಪಟ್ಟು ಓದಿ ಐಐಟಿ ಪ್ರವೇಶ ಗಿಟ್ಟಿಸಿದ ಭರತ್
ತಾಯಿ ಹಠದಿಂದ ಅವರಿವರ ಸಹಾಯ ಪಡೆದು ಮಗನನ್ನು ಚಾರೌಡಾದಲ್ಲಿರುವ ಕೇಂದ್ರಿಯ ವಿದ್ಯಾಲಯಕ್ಕೆ ಸೇರಿಸಿದ್ರು. ಹೀಗೆ ಓದುತ್ತಿರುವಾಗ ಭರತ್‌ನಿಗೆ ಮತ್ತೆ ಹಣಕಾಸಿನ ಸಮಸ್ಯೆ ಎದುರಾಯ್ತು. 9ನೇ ತರಗತಿಯಲ್ಲಿದ್ದಾಗ ಶಾಲೆಗೆ ಕಟ್ಟುವ ಕನಿಷ್ಟ ಹಣವನ್ನು ಕಟ್ಟಲು ಸಾಧ್ಯವಾಗಲಿಲ್ಲ. ಆಗ ಶಾಲಾ ಪ್ರಾಂಶುಪಾಲರೇ ಶುಲ್ಕ ಕಟ್ಟಿ ಆತನನ್ನು ಓದಲು ಪ್ರೋತ್ಸಾಹ ನೀಡಿದ್ರು. ಕೇಂದ್ರಿಯ ವಿದ್ಯಾಲದಲ್ಲಿಯೇ 12ನೇ ತರಗತಿವರೆಗೆ ಓದಿದ ಭರತ್ ಒಳ್ಳೆಯ ಅಂಕ ಪಡೆದರು. ಮಹಾರಾಷ್ಟ್ರದಲ್ಲಿರುವ ಧನಬಾದ್ ಐಐಟಿ ಕಾಲೇಜಿಗೂ ಭರತ್ ಪ್ರವೇಶ ಪಡೆದರು.
ವಿದ್ಯಾಭ್ಯಾಸದ ಉದ್ದಕ್ಕೂ ಭರತ್‌ಗೆ ಅನೇಕ ಆರ್ಥಿಕ ಸಮಸ್ಯೆಗಳು ಎದುರಾದರೂ ಎದೆ ಗುಂದದೇ ಮುನ್ನುಗಿದರು. ಇಷ್ಟಾದ್ರೂ ಭರತ್‌ನಲ್ಲಿ ಇದ್ದದ್ದು ನಾನು ಪೈಲೆಟ್ ಆಗಲೇ ಬೇಕು ಎಂದು. ಆದರೆ ಅವರ ದಿಕ್ಕು ಐಐಟಿಗೆ ಪ್ರವೇಶ ಪಡೆದ ಕೂಡಲೇ ಇಸ್ರೋ ಮೇಲೆ ಬಿತ್ತು. ಎಂಜಿನಿಯರಿಂಗ್‌ನ 7ನೇ ಸೆಮಿಸ್ಟರ್‌ನಲ್ಲಿ ಓದುವಾಗಲೇ ಅವರ ಸಂಕಲ್ಪದಂತೆ ಇಸ್ರೋದಲ್ಲಿ ತನ್ನ 22ನೇ ವಯಸ್ಸಿಗೆ ಸ್ಥಾನ ಪಡೆದರು. ಇದಾದ ನಂತರ ಚಂದ್ರಯಾನ-3ನಲ್ಲಿ ಕೆಲಸ ಮಾಡಿ ಯಶಸ್ವಿ ಆಗಿರೋದು ಎಲ್ಲರೂ ಹೆಮ್ಮೆ ಪಡುವಂತಾಗಿದೆ. ಅಂದು ಲೋಟ, ಪಾತ್ರೆ ತೊಳೆದ ತಾಯಿ ಇಂದು ಮಗನ ಪಕ್ಕದಲ್ಲಿ ನಿಂತುಕೊಂಡು ಹೆಮ್ಮೆಯಿಂದ ಕಣ್ಣುನ್ನು ಒರೆಸಿಕೊಳ್ಳುತ್ತಿದ್ದಾಳೆ. ನನ್ನ ಮಗನ ಹೆಸರು ಭರತ್ ಎಂದು ಯಾವ ಕಾರಣಕ್ಕೆ ಇಟ್ಟೆನೋ ನನಗೆ ಗೊತ್ತಿಲ್ಲ. ಆದ್ರೆ ಇಡೀ ಜಗತ್ತು ಇಂದು ಭರತ್‌ನ ಹೆಸರನ್ನು ಹೇಳುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ