newsfirstkannada.com

ಕಾಡಾನೆಗಳ ದಂತ ತಿವಿತಕ್ಕೊಳಗಾದ ಭೀಮ.. ಆರೋಗ್ಯ ಸ್ಥಿತಿ ಗಂಭೀರ

Share :

29-08-2023

    ಗಾಯಗೊಂಡು ನರಳಾಡುತ್ತಿರುವ ಒಂಟಿಸಲಗ ಭೀಮ

    ಸಕಲೇಶಪುರ ತಾಲ್ಲೂಕಿನ ಹೆಗ್ಗಾವೆ ಗ್ರಾಮದಲ್ಲಿ ಉಳಿದ ಭೀಮ

    ಕಾಡಾನೆಗಳ ಕಾಳಗದಲ್ಲಿ ಭೀಮನಿಗೆ ತೀವ್ರವಾದ ಗಾಯ

ಹಾಸನ: ಕಾಡಾನೆಗಳ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡು ನರಳಾಡುತ್ತಿರುವ ಒಂಟಿಸಲಗ ಭೀಮನ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಈ ವಿಚಾರದಲ್ಲಿ ಅರಣ್ಯ ಇಲಾಖೆ ನಿಗಾ ವಹಿಸದೇ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶ ಕಾರಣವಾಗಿದೆ.

ಗಾಯಗೊಂಡಿರುವ ಭೀಮ ಸಕಲೇಶಪುರ ತಾಲ್ಲೂಕಿನ ಹೆಗ್ಗಾವೆ ಗ್ರಾಮದಲ್ಲಿಯೇ ಉಳಿದಿದೆ. ದೇಹದ ಹಿಂಬದಿ ತೀವ್ರ ಸ್ವರೂಪದ ಗಾಯವಾಗಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ.

ದಂತದಿಂದ ತಿವಿತ

ಭೀಮ ಯಾರಿಗೂ ತೊಂದರೆ ಕೊಡದೇ ಆಹಾರ ಅರಸಿ ಮನೆಯ ಬಾಗಿಲಿಗೆ ಬರುತ್ತಿದ್ದನು. ಊರಿನ ಜನರು ಭೀಮನಿಗೆ ಹಣ್ಣು, ಕಬ್ಬು ನೀಡುತ್ತಿದ್ದರು. ಆದರೆ ಕಳೆದ ಒಂದು ವಾರದ ಹಿಂದೆ ಹೆಗ್ಗಾವೆ ಗ್ರಾಮದ ಸಮೀಪ ಕಾಡಾನೆಗಳ ಕಾಳಗದಲ್ಲಿ ಭೀಮನಿಗೆ ಗಾಯವಾಗಿದೆ. ದಂತದಿಂದ ತಿವಿತಕ್ಕೊಳಗಾಗಿ ಭೀಮ ತೀವ್ರವಾಗಿ ಗಾಯಗೊಂಡಿದೆ.

ನಡೆದಾಡಲಾಗದ ಪರಿಸ್ಥಿತಿ

ಸದ್ಯ ನೋವಿನಿಂದ ಬಸವಳಿದ ಭೀಮ ಆಹಾರ ತ್ಯಜಿಸಿದೆ. ನೋವು ತಾಳಲಾರದೆ ಪ್ರತಿನಿತ್ಯವೂ ಹೆಗ್ಗಾವೆ ಸಮೀಪದ ಹೊಂಡದ ನೀರಿನಲ್ಲಿ ಮಲಗಿದೆ. ಮತ್ತೊಂದೆಡೆ ನಡೆದಾಡಲಾಗದೆ ಭೀಮ ಪರದಾಡುತ್ತಿದೆ.

ವನ್ಯಜೀವಿ ವೈದ್ಯರು ಆ.25 ರಂದು ಬೆಳಿಗ್ಗೆ ಮೈಸೂರಿನಿಂದ ಆಗಮಿಸಿ ಕಾಡಾನೆಗೆ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ನೀಡಿ ನಾಲ್ಕು ದಿನವಾದರೂ ಭೀಮನ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡಿಲ್ಲ. ಗ್ರಾಮಸ್ಥರು ಭೀಮಮಿಗೆ ದಿನನಿತ್ಯ ಆಹಾರ ನೀಡುತ್ತಿದ್ದಾರೆ. ಸ್ಥಳೀಯರು ಭೀಮನನ್ನು ಸ್ಥಳಾಂತರ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಡಾನೆಗಳ ದಂತ ತಿವಿತಕ್ಕೊಳಗಾದ ಭೀಮ.. ಆರೋಗ್ಯ ಸ್ಥಿತಿ ಗಂಭೀರ

https://newsfirstlive.com/wp-content/uploads/2023/08/Bhima.jpg

Load More