newsfirstkannada.com

Breaking News: ವಂದೇ ಭಾರತ್​​ ಎಕ್ಸ್​​ಪ್ರೆಸ್​​ನಲ್ಲಿ ಅಗ್ನಿ ಅನಾಹುತ.. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ..!

Share :

17-07-2023

    ಒಂದು ಕೋಚ್​ನ ಬ್ಯಾಟರಿ ಬಾಕ್ಸ್​ನಲ್ಲಿ ಬೆಂಕಿ

    ಏಪ್ರಿಲ್​ನಲ್ಲಿ ಈ ಟ್ರೈನ್​​ಗೆ ಮೋದಿ ಚಾಲನೆ ನೀಡಿದ್ದರು

    ಅಗ್ನಿ ಅವಗಢ ಬಗ್ಗೆ ರೈಲ್ವೇ ಇಲಾಖೆ ಹೇಳಿದ್ದೇನು..?

ಇಂದು ಬೆಳಗ್ಗೆ ‘ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್​ಪ್ರೆಸ್’​​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಾಣಿ ಕಮಲಪಟಿ ಸ್ಟೇಷನ್​​ನಿಂದ ಹೊರಟು ಕುರ್ವಾಯಿ ಕೆಥೋರ ಸ್ಟೇಷನ್​ ಬಳಿ ಬರುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ.

ಕೋಚ್​​ನ ಬ್ಯಾಟರಿ ಬಾಕ್ಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ, ಕೂಡಲೇ ಫೈರ್​ ಬ್ರಿಗೆಡ್ ತಂಡ ಅಲ್ಲಿಗೆ ಧಾವಿಸಿದೆ. ಮತ್ತು ಪ್ರಯಾಣಿಕರನ್ನೂ ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ವರದಿಯಾಗಿದೆ.

ವಂದೇ ಭಾರತ್​ ಎಕ್ಸ್​​ಪ್ರೆಸ್​ನ ಒಂದು ಕೋಚ್​ನಲ್ಲಿದ್ದ ಬ್ಯಾಟರಿ ಬಾಕ್ಸ್​ಗೆ ಬೆಂಕಿ ಬಿದ್ದು ಅವಘಡ ಸಂಭವಿಸಿದೆ. ಅಲ್ಲಿದ್ದ ಫೈರ್​​ ಬ್ರಿಗೆಡ್​ ಬೆಂಕಿ ನಂದಿದ್ದಾರೆ. ದೊಡ್ಡ ಅನಾಹುತವನ್ನು ತಪ್ಪಿಸಲಾಗಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ. ಕಳೆದ ಏಪ್ರಿಲ್​ನಲ್ಲಿ ಈ ವಂದೇ ಭಾರತ್ ಎಕ್ಸ್​ಪ್ರೆಸ್​​ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಮಧ್ಯಪ್ರದೇಶದ ರಾಣಿ ಕಮಲಪಟಿ ರೈಲ್ವೇ ಸ್ಟೇಷನ್​ನಿಂದ ದೆಹಲಿಯ ಹರ್ಜತ್ ನಿಜಾಮುದ್ದೀನ್ ರೈಲ್ವೇ ಸ್ಟೇಷನ್​​ವರೆಗೆ ಪ್ರಯಾಣಿಸುತ್ತಿದೆ. ನಿತ್ಯ ಒಟ್ಟು 7.30 ಗಂಟೆಯಲ್ಲಿ 701 ಕಿಲೋ ಮೀಟರ್ ದೂರ ಪ್ರಯಾಣ ಮಾಡುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ವಂದೇ ಭಾರತ್​​ ಎಕ್ಸ್​​ಪ್ರೆಸ್​​ನಲ್ಲಿ ಅಗ್ನಿ ಅನಾಹುತ.. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ..!

https://newsfirstlive.com/wp-content/uploads/2023/07/Train.jpg

Load More