ಮಧ್ಯಪ್ರದೇಶದ ಬೋಪಾಲ್ನಿಂದ ಪ್ರಧಾನಿ ಮೋದಿ ಚಾಲನೆ
ಮೈಸೂರು-ಚೆನ್ನೈ ಬಳಿಕ ಇದು ರಾಜ್ಯಕ್ಕೆ ಎರಡನೇ ಎಕ್ಸ್ಪ್ರೆಸ್
16 ಬೋಗಿಗಳ ಪೈಕಿ 8 ಬೋಗಿಗಳ ರೈಲು ಬೆಂಗಳೂರಿಗೆ ಬರಲಿದೆ
ಭೋಪಾಲ್: ಹುಬ್ಬಳ್ಳಿ ಧಾರವಾಡದಿಂದ-ಬೆಂಗಳೂರಿಗೆ ಸಂಚರಿಸುವ ನೂತನ ‘ವಂದೇ ಭಾರತ್ ಎಕ್ಸ್ಪ್ರೆಸ್’ ಹೈ-ಸ್ಪೀಡ್ ರೈಲಿಗೆ ಪ್ರಧಾನಿ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಇಂದು ಭೋಪಾಲ್ ನಗರಕ್ಕೆ ಭೇಟಿ ನೀಡಿದ ಪ್ರಧಾನಿಯವರು ಕರ್ನಾಟಕ ಸೇರಿದಂತೆ ದೇಶದ ಇನ್ನು 4 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಇದೇ ವೇಳೆ ಚಾಲನೆ ನೀಡಿದರು.
ವಂದೇ ಭಾರತ್ ಎಕ್ಸ್ಪ್ರೆಸ್ ಚಾಲನೆ ಕುರಿತು ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಅರವಿಂದ ಬೆಲ್ಲದ್, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸೇರಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇದೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಮೋದಿಯವರು ಚಾಲನೆ ನೀಡುತ್ತಿದ್ದಂತೆ ಅದೇ ರೈಲಿನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಪ್ರಯಾಣ ಬೆಳೆಸಿದರು. ಇನ್ನು ಪ್ರಯಾಣದ ವೇಳೆ ರೈಲಿನಲ್ಲಿ ಬೆಳಗ್ಗೆ ಉಪಾಹಾರವನ್ನು ಗೆಹ್ಲೋಟ್ ಮತ್ತು ಪ್ರಹ್ಲಾದ್ ಜೋಶಿಯವರು ತೆಗೆದುಕೊಂಡರು. ಇನ್ನು ರೈಲು ಬೆಂಗಳೂರಿಗೆ ಕೇವಲ 6 ಗಂಟೆಯಲ್ಲಿ ಬಂದು ತಲುಪಲಿದೆ. ಇನ್ನು ಮೈಸೂರು-ಚೆನ್ನೈ ಬಳಿಕ ಇದು ಕರ್ನಾಟಕಕ್ಕೆ 2ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆಗಿದೆ.
ಪ್ರಧಾನಿ ಮೋದಿ ಒಟ್ಟು 5 ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ