newsfirstkannada.com

ಸದ್ಯದಲ್ಲೇ ಭುವನ್​​, ಹರ್ಷಿಕಾ ಪೂಣಚ್ಚ ಮದುವೆ; ಇಬ್ಬರಲ್ಲಿ ಯಾರು ಫಸ್ಟ್​ ಪ್ರಪೋಸ್​ ಮಾಡಿದ್ದು..​​?

Share :

17-08-2023

    ಹರ್ಷಿಕಾ ಹಾಗೂ ಭುವನ್ ಮದುವೆಯ ಮಮತೆಯ ಕರೆಯೋಲೆ..!

    ಕೊಡವ ಶೈಲಿಯಲ್ಲಿ ಭುವನ್ ಹಾಗೂ ಹರ್ಷಿಕಾ ಅದ್ಧೂರಿ ಕಲ್ಯಾಣ

    ಈ ಕುರಿತು ಭುವನ್-ಹರ್ಷಿಕಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು..?

ಬೆಂಗಳೂರು: ಸ್ಯಾಂಡಲ್​​ವುಡ್​ನ ಮತ್ತೊಂದು ಸ್ಟಾರ್‌ ಜೋಡಿ ಹಸೆಮಣೆ ಏರಲು ಸಜ್ಜಾಗಿದೆ. ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಜೋಡಿಯೀಗ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ.

ಇನ್ನು, ಈ ಕುರಿತು ಮಲ್ಲೇಶ್ವರಂನಲ್ಲಿ ಮಾಧ್ಯಮ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ನಟ ಹರ್ಷಿಕಾ ಹಾಗೂ ನಟ ಭುವನ್, ನಮ್ಮ ಮದುವೆ ಕೊಡಗಿನಲ್ಲಿ ನಡೆಯುತ್ತಿದೆ. ಬೆಂಗಳೂರಿನಲ್ಲೇ ಮಾಡಬೇಕು ಅಂತ ಚರ್ಚೆಯಾಗಿತ್ತು. ಆದರೆ ನಮ್ಮ ಸಂಸ್ಕೃತಿಯ ಪ್ರಕಾರವೇ ಕೊಡಗಿನಲ್ಲಿ ನಡೆಯುತ್ತೆ. ಮದುವೆಯಾದ ಮೇಲೆ ಜವಾಬ್ದಾರಿ ಜಾಸ್ತಿ. ದೇಶಕ್ಕೆ ಸುತ್ತಬೇಕು ಎಂದು ಇದ್ದೆವು. ಮದುವೆಯಾಗೋ ಯೋಚನೆ ಇರಲಿಲ್ಲ. ನಮ್ಮನ್ನ ಲಾಕ್ ಮಾಡಿ ಕುಟುಂಬಸ್ಥರು ಮದುವೆ ಮಾಡಿಸುತ್ತಿದ್ದಾರೆ. ಸಾಧು ಮಹಾರಾಜ್ ಮದುವೆ ಡೇಟ್ ಹೇಳಿಬಿಟ್ಟರು. ಇಷ್ಟಪಟ್ಟು ಮದುವೆಯಾಗುವ ಅವಕಾಶ ನಮಗೆ ಸಿಕ್ಕಿದೆ. ಮದುವೆಯಾದರೆ ಕೊಡಗಿನಲ್ಲೇ ಆಗಬೇಕು ಅಂತ ಆಸೆಯಿತ್ತು. ಅದರಂತೆ ಕೊಡವ ಶೈಲಿಯಲ್ಲಿ ಮದುವೆಯಾಗೋದೇ ಒಂದು ಹರುಷ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಭುವನ್​​ ತನಗೆ ಹರ್ಷಿಕಾ ಮೊದಲು ಪ್ರಪೋಸ್​ ಮಾಡಿದ್ದಕ್ಕಾಗಿ ಹೇಳಿದರು.

ಈಗಾಗಲೇ ಬ್ಯಾಚುಲರ್ ಪಾರ್ಟಿ ಮುಗಿಸಿಕೊಂಡ ಈ ಜೋಡಿ, ತಮ್ಮ ಮದುವೆಗೆ ಗಣ್ಯರನ್ನು ಆಹ್ವಾನಿಸುತ್ತಿದೆ. ಆಗಸ್ಟ್ 24ರಂದು ವಿರಾಜಪೇಟೆಯಲ್ಲಿ ಅದ್ಧೂರಿಯಾಗಿ ಮದುವೆ ಮಹೋತ್ಸವ ನಡೆಯಲಿದೆ. ಸ್ಟಾರ್​​ ನಟ ಹಾಗೂ ನಟಿಯರು ಮದುವೆ ಆಗಮಿಸಲಿದ್ದು, ಸಾಕಷ್ಟು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಕೊಡವ ಸಂಪ್ರದಾಯದಂತೆ ಭುವನ್ ಹಾಗೂ ಹರ್ಷಿಕಾ ಅವರ ಮದುವೆ ನಡೆಯಲಿದೆ. ಅದಕ್ಕಾಗಿ ವಿರಾಜಪೇಟೆಯ ಅಮ್ಮತಿ ಕೊಡವ ಸಮಾಜದಲ್ಲಿ ಮದುವೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಇತ್ತೀಚೆಗಷ್ಟೇ ಈ ಜೋಡಿ ಸಿನಿಮಾ ಹಾಗೂ ರಾಜಕೀಯ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ಗಣ್ಯರನ್ನು ಮದುವೆಗೆ ಆಹ್ವಾನಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸದ್ಯದಲ್ಲೇ ಭುವನ್​​, ಹರ್ಷಿಕಾ ಪೂಣಚ್ಚ ಮದುವೆ; ಇಬ್ಬರಲ್ಲಿ ಯಾರು ಫಸ್ಟ್​ ಪ್ರಪೋಸ್​ ಮಾಡಿದ್ದು..​​?

https://newsfirstlive.com/wp-content/uploads/2023/08/harshika-4.jpg

Load More