ವಿಸ್ಮಯ ಕಂಡು ನಿಬ್ಬೆರಗಾದ ಭಕ್ತರು, ನಿಜಕ್ಕೂ ಅಲ್ಲೇನಾಗ್ತಿದೆ?
ಏನಿದು ಬಸವಣ್ಣನ ಪವಾಡ? ಅಚ್ಚರಿಯಾದರೂ ಸತ್ಯ ಎಂದ ಭಕ್ತರು
ಮಹಾದೇವ ದೇಗುಲದಲ್ಲಿ ಹಾಲು ಕುಡಿಯುತ್ತಿರುವ ಬಸವಣ್ಣ
ಬೀದರ್: ಭೋರಲಿಂಗೇಶ್ವರ ಮಹಾದೇವ ದೇವಸ್ಥಾನದಲ್ಲಿನ ಕಲ್ಲಿನ ಬಸವಣ್ಣ ಪವಾಡದ ವಿಚಾರಕ್ಕೆ ಸುದ್ದಿಯಾಗಿದ್ದಾನೆ. ಬಸವಣ್ಣ ಹಾಲು ಕುಡಿಯುತ್ತಿದ್ದಾನೆ ಎಂದು ನಂಬಿರುವ ಭಕ್ತರು, ದೇಗುಲಕ್ಕೆ ದೌಡಾಯಿಸಿದ್ದಾರೆ. ದೇವಾಲಯದ ಬಳಿ ಸರತಿ ಸಾಲಿನಲ್ಲಿ ನಿಂತು ಬಸವಣ್ಣನಿಗೆ ಚಮಚದಿಂದ ಹಾಲು ಕುಡಿಸುತ್ತಿದ್ದಾರೆ.
ಬೀದರ್ನ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ 108 ದೇವಸ್ಥಾನಗಳಿವೆ. ಇದರಲ್ಲಿ ಭೋರಲಿಂಗೆಶ್ವರ ಮಹಾದೇವ ದೇವಸ್ಥಾನ ಕೂಡ ಒಂದು. ಇದೇ ದೇವಾಲಯದಲ್ಲಿದ್ದ ಬಸವಣ್ಣನಮೂರ್ತಿಯು ಹಾಲನ್ನು ಕುಡಿಯುತ್ತಿದೆ. ಈ ಸುದ್ದಿ ತಿಳಿದು ಆಶ್ಚರ್ಯವಾಗಿರುವ ಗ್ರಾಮಸ್ಥರು ನೋಡಲು ಮುಗಿಬಿದ್ದಿದ್ದಾರೆ.
ಇದನ್ನೂ ಓದಿ: ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ.. ಬಿಜೆಪಿಯಿಂದ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ
ಅಲ್ಲದೇ ಮನೆಯಿಂದ ಮಹಿಳೆಯರು ಹಾಲನ್ನು ತಂದು ದೇವಾಲಯದ ಬಳಿ ಸಾಲಾಗಿ ನಿಂತು ಬಸವಣ್ಣ ಮೂರ್ತಿಗೆ ಚಮಚದ ಮೂಲಕ ಹಾಲು ಕುಡಿಸುತ್ತಿದ್ದಾರೆ. ನಿರಂತರ ಮಳೆಯ ನಡುವೆಯೂ ಈ ಕಲ್ಲಿನ ಬಸವಣ್ಣ ಅಚ್ಚರಿ ಮೂಡಿಸಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೀದರ್ನ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ದೇವಾಲಯದಲ್ಲಿ ಬಸವಣ್ಣನ ಕಲ್ಲಿನ ಮೂರ್ತಿ ಹಾಲು ಕುಡಿಯುತ್ತಿದಿಯಾ?. ಸದ್ಯ ಇದನ್ನು ನೋಡಿ ಜನರೆಲ್ಲ ಅಚ್ಚರಿಗೊಂಡಿದ್ದಾರೆ. #Newsfirstlive #Bidar #Basavakalyana #Narayanpur #Basavannaidol pic.twitter.com/wlRt41d3lB
— NewsFirst Kannada (@NewsFirstKan) July 28, 2023